ತಿರುವನಂತಪುರಂ: ಇಡಿಯ ದೇಶದಲ್ಲೇ ಅತಿ ಹೆಚ್ಚು ನೀರು ಸಂಗ್ರಹ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಕೇರಳದ ಇಡುಕ್ಕಿ ಡ್ಯಾಂ ತುಂಬುಹ ಹಂತಕ್ಕೆ ಬಂದಿದ್ದು, ಸುಮಾರು 26 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಗೇಟ್ ತೆರೆಯಲಾಗಿದೆ.
ಈ ಬಾರಿಯ ಮುಂಗಾರು ಅತ್ಯುತ್ತಮವಾಗಿರುವ ಹಿನ್ನೆಲೆಯಲ್ಲಿ ಕೇರಳದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಈ ಪರಿಣಾಮ ಅಣೆಕಟ್ಟೆ ತಂಬಿದೆ. ಈ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದ್ದು, ಈಗಾಗಲೇ ಸುಮಾರು 50 ಸೆಮೀಗಳ ವರೆಗೂ ನೀರನ್ನು ಹೊರಬಿಡಲಾಗಿದೆ.
ವೀಡಿಯೋ ನೋಡಿ:
ಕೇರಳದ ಕುರತ್ತಿ ಗುಡ್ಡಗಾಡು ಪ್ರದೇಶದಲ್ಲಿ ಪೆರಿಯಾರ್ ನದಿಗೆ ಇಡಕ್ಕಿ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ. 26 ವರ್ಷಗಳಿಂದ ಈ ಡ್ಯಾಂ ಗೇಟ್ ತೆರೆದಿದ್ದೇ ಇಲ್ಲ. ಈ ಬಾರಿಯ ಮುಂಗಾರಿನ ಆರ್ಭಟದ ಹಿನ್ನೆಲೆಯಲ್ಲಿ ಅಣೆಕಟ್ಟೆ ಅಪಾಯ ಮಟ್ಟ ಮೀರಿದ್ದು, ಈ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ.
Discussion about this post