ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಯುವಕರು ಗುಂಡು ಹಾರಿಸಿದರೆ ಅದಕ್ಕೆ ಪ್ರತಿಯಾಗಿ ಸೇನೆ ಹೂಗುಚ್ಚ ನೀಡುವುದಿಲ್ಲ. ಬದಲಾಗಿ ಪ್ರತಿದಾಳಿ ನಡೆಸಿ, ಅಟ್ಟಾಡಿಸಿ ಹೊಡೆಯುತ್ತಾರೆ ಎಂಬ ಕಠಿಣ ಎಚ್ಚರಿಕೆಯನ್ನು ಅಲ್ಲಿನ ಗವರ್ನರ್ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಜಮ್ಮು ಕಾಶ್ಮೀರ ಗವರ್ನರ್ ಸತ್ಯ ಪಾಲ್ ಮಲ್ಲಿಕ್, ನಮ್ಮ ರಾಜ್ಯದ ಯುವಕರು ಬಲಿಯಾದರೆ ನಮಗೆ ಸಂತೋಷವಾಗುವುದಿಲ್ಲ. ಹೀಗಾಗಿ, ಅವರನ್ನೆಲ್ಲಾ ಬದಲಾವಣೆ ಮಾಡಿ, ಉತ್ತಮ ಜೀವನ ನಡೆಸಬೇಕು ಎಂದು ಆಶಿಸುತ್ತೇವೆ. ಈ ರೀತಿ ಬದಲಾವಣೆಯಾದ ಯುವಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಆದರೆ, ಯಾವುದೇ ಯುವಕರು ಬಂದೂಕು ಹಿಡಿದರೆ ಅದಕ್ಕೆ ಪ್ರತಿಯಾಗಿ ಸೇನೆ ಪ್ರತಿದಾಳಿ ನಡೆಸಿ, ಹೊಸಕುವುದು ನಿಶ್ಚಿತ ಎಂದಿದ್ದಾರೆ.
Discussion about this post