ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಎದೆ ತನಕ ಬೆಳೆಸಿದ ಮಗ ಅಮ್ಮ ನಾನು ಸನ್ಯಾಸಿ ಆಗ್ತೀನಿ, ನೀನು ಹುಷಾರು, ನಾನು ಹೊರಟೆ ಅಂದಾಗ ಆ ತಾಯಿಗೆ ಹೇಗೆ ಆಗಿರಬೇಡ.
ಯಾರಯಾರದ್ದೋ ಎಂಜಲು ಚಾ ಲೋಟಗಳ ತೊಳೆದು ಸಾಕಿದ ಮಗನಾ ಇವನು? ಇರೋ ಅಷ್ಟು ರೋಟ್ಟಿನ ಇರೋ ಮಕ್ಕಳಿಗೆ ಹಂಚಿ ಕೂತಾಗ, ಅಮ್ಮ ನಂದು ಅರ್ಧ ರೊಟ್ಟಿ ನೀ ತಿನ್ನು ಅಂತ ಕೊಟ್ಟ ಮಗನಾ ಇವನು? ದಾರಿಯಲ್ಲಿ ಸಿಗೋ ನಾಯಿಮರಿಗೂ ಜೀವ ಕೊಡ್ತಿದ್ದವನು ಇವತ್ತು ಜೀವಕ್ಕಿಂತ ಜಾಸ್ತಿ ಅಂತಿದ್ದ ನನ್ನ ಬಿಟ್ಟು ಹೊರಟಿದನಲ್ಲ ಅಂತ ಆ ತಾಯಿ ಕರುಳು ಅದೆಷ್ಟು ನೊಂದಿತ್ತೋ ಏನೋ? ಆದರೆ ಅದೇ ಮಾತು ಅವರ ಗಂಟಲಿಂದ ಹೊರಗೆ ಬಿದ್ದಿದ್ದರೆ ನಮಗೆಲ್ಲಿ ಸಿಗುತ್ತಿದ್ದ ದೇಶ ಕಾಯೋ ಮಹಾನಾಯಕ?
ಅಂಗಳದಲ್ಲಿ ಆಡ್ತಿದ್ದ ಮಗ, ಓಣಿ ಒಳಗೆ ಓಡಿ ಹೋದರೆ ಹುಡುಕಿ ಬೆನ್ನಟ್ಟಿ ಹೋಗಿ ಎತ್ತಿಕೊಂಡು ಬಂದು, ಎರಡು ಬಾರಿಸಿ ಕಣ್ಕತ್ತಲೆ ತೀರಿಸಿಕೊಳ್ಳುವ ಅಮ್ಮಂದಿರ ನಡುವೆ ಅಮ್ಮಾ, ನಾನು ಇನ್ನು ಬರಲ್ಲ, ದೇಶಪ್ರೇಮ ನಿಂಗಿಂತ ಮುಖ್ಯ ಅನ್ನಿಸ್ತಿದೆ ಅಂದಾಗ ಹಾಲಿಟ್ಟ ಎದೆಯೊಳಗೆ ಒಂದು ಅಳಿಸಲಾರದ ನೋವು ಹುಟ್ಟದೆ ಇರದು. ಅದೆಲ್ಲವನ್ನು ಮೀರಿ ಕೌಸಲ್ಯೆ ರಘುಕುಲ ನಂದನನ ಬೀಳ್ಕೊಟ್ಟಂತೆ, ಹೂ ತನ್ನ ಘಮವ ತಂಗಾಳಿಗೆ ತೇಲಿ ಕೊಟ್ಟಂತೆ, ಭೂಮಿ ತಾಯಿಯ ಒಡಲು ಜೀವ ಸಂಕುಲಕ್ಕೆ ಪ್ರಾಣಜಲವ ಧಾರೆ ಎರೆದಂತೆ ಹೀರಾ ಬಾ ಮಗನನ್ನು ಕಳಿಸಿಕೊಟ್ಟರು. ಇಂದು ಅವರು ಭಾರತೀಯರನ್ನು ಅನಾಥರಾಗಿಸಿ ಅಯೋಧ್ಯೆಯ ಒಡೆಯನ ಆತ್ಮದಲ್ಲಿ ಲೀನವಾಗಿದ್ದಾರೆ. ಸದ್ಗತಿ ತಾಯಿ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















