ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೀರೂರು–ಶಿವಮೊಗ್ಗ ಟೌನ್ ನಿಲ್ದಾಣಗಳ ಮಧ್ಯೆ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ರೈಲುಗಳ ನಿಯಂತ್ರಣ (Regulation)
ರೈಲು ಸಂಖ್ಯೆ 16225 ಮೈಸೂರು–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್
- ಜೂನ್ 12 ಮತ್ತು 13, 2026: ಮಾರ್ಗಮಧ್ಯೆ 35 ನಿಮಿಷಗಳ ನಿಯಂತ್ರಣ
- ಜೂನ್ 14 ರಿಂದ 30, 2026: 55 ನಿಮಿಷಗಳ ನಿಯಂತ್ರಣ
- ಜುಲೈ 1 ರಿಂದ 5, 2026: 30 ನಿಮಿಷಗಳ ನಿಯಂತ್ರಣ
ರೈಲು ಸಂಖ್ಯೆ 20690 ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್‌ಪ್ರೆಸ್
- ಜುಲೈ 7 ರಿಂದ 11, 2026: ಮಾರ್ಗಮಧ್ಯೆ 30 ನಿಮಿಷಗಳ ನಿಯಂತ್ರಣ
ರೈಲು ಮರುನಿಗದಿ (Rescheduling)
- ರೈಲು ಸಂಖ್ಯೆ 20690 ಶಿವಮೊಗ್ಗ ಟೌನ್–ಯಶವಂತಪುರ ಎಕ್ಸ್‌ಪ್ರೆಸ್
- ಜುಲೈ 1 ರಿಂದ 5, 2026ರ ಅವಧಿಯಲ್ಲಿ ಶಿವಮೊಗ್ಗ ಟೌನ್ ನಿಲ್ದಾಣದಿಂದ 20 ನಿಮಿಷ ತಡವಾಗಿ ಹೊರಡಲಿದೆ
ರೈಲ್ವೆ ಇಲಾಖೆ ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳುವಂತೆ ವಿನಂತಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















