ಶಿವಮೊಗ್ಗ: ಕೊರೋನಾ ವೈರಸ್ ಆತಂಕದ ನಡುವೆಯೇ 74ನೆಯ ಸ್ವಾತಂತ್ರೋತ್ಸವವನ್ನು ಜಿಲ್ಲಾ ಕೇಂದ್ರದ ವಿವಿದೆಢೆ ಸರಳವಾಗಿ ಆಚರಿಸಲಾಯಿತು.
ಬಿಜೆಪಿ ಕಚೇರಿ
ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ 74 ನೆಯ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಅವರು ಧ್ವಜಾರೋಹಣ ನೆರವೇರಿಸಿದರು.
ರಾಜ್ಯ ಆರ್ಯ ವ್ಯಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾದ ಡಿ.ಎಸ್. ಅರುಣ್ ಕುಮಾರ್, ಮಾಜಿ ಜಿಲ್ಲಾಧ್ಯಕ್ಷ, ವಿಭಾಗ ಪ್ರಭಾರಿಗಳಾದ ಗಿರೀಶ್ ಪಟೇಲ್, ಮಾಜಿ ಸೂಡಾ ಅಧ್ಯಕ್ಷ ಎಸ್. ದತ್ತಾತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್, ಬಿ.ಕೆ. ಶ್ರೀನಾಥ್, ಮೇಯರ್ ಸುವರ್ಣ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಮಾಜಿ ಶಾಸಕರಾದ ಕೆ.ಜಿ. ಕುಮಾರಸ್ವಾಮಿ, ನಗರ ಬಿಜೆಪಿ ಪ್ರಭಾರಿಗಳಾದ ಜ್ಯೋತಿಪ್ರಕಾಶ್, ಎನ್.ಜೆ. ರಾಜಶೇಖರ್, ಅಶೋಕ್ ನಾಯಕ್, ಎನ್.ಡಿ. ಸತೀಶ್, ಮಾಧ್ಯಮ ಪ್ರಮುಖ್ ಕೆ.ವಿ. ಅಣ್ಣಪ್ಪ, ಪಾಲಿಕೆ ಸದಸ್ಯರಾದ ಸುನಿತಾ ಅಣ್ಣಪ್ಪ, ಹಿರಣ್ಣಯ್ಯ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವಿದ್ಯಾ, ಮಾಲತೇಶ್ ಹಾಗೂ ಬಿಜೆಪಿ ಪ್ರಮುಖರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಎಚ್.ಎಸ್. ಸುಂದರೇಶ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.ಎಂಆರ್’ಎಸ್ ಆಟೋ ನಿಲ್ದಾಣದಲ್ಲಿ ಅಲೆಮಾರಿನ ಎಸ್’ಎಸ್’ಎಲ್’ಸಿ ವಿದ್ಯಾರ್ಥಿನಿ ಅನುಷಾ ಅವರಿಂದ ಧ್ವಜಾರೋಹಣ ಮಾಡಿಸಲಾಯಿತು. ಆನಂತರ ಅವರನ್ನು ಸನ್ಮಾನಿಸಲಾಯಿತು.ಜೆಸಿಐ ಶರಾವತಿ ಶಿವಮೊಗ್ಗ ವತಿಯಿಂದ 74 ನೆಯ ಸ್ವಾತಂತ್ರ್ಯ ದಿನ ಆಚರಿಸಲಾಯಿತು. ಛಲದಂಕಮಲ್ಲ ಪತ್ರಿಕೆ ಸಂಪಾದಕರಾದ ಜಿ. ಪದ್ಮನಾಭ್, ನುಡಿಗಿಡ ದಿನಪತ್ರಿಕೆ ಸಂಪಾದಕರಾದ ಎಚ್.ಎನ್. ಮಂಜುನಾಥ್ ಹಾಗೂ ಎಸ್’ಎಸ್’ಎಲ್’ಸಿ ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆದು ಉತ್ತೀರ್ಣರಾದ ಲಿಖಿತ್ ಅವರನ್ನು ಸನ್ಮಾನಿಸಲಾಯಿತು. ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಅಧ್ಯಕ್ಷ ಗಾ.ರ.ಶ್ರೀನಿವಾಸ್, ಚಿರಂಜೀವಿ ಬಾಬು ಸೇರಿದಂತೆ ಹಲವರಿದ್ದರು.ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಇಂದು ಎನ್’ಎಸ್’ಎಸ್ ವತಿಯಿಂದ ಆಯೋಜಿದ್ದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಕೆ.ಟಿ. ಪಾರ್ವತಮ್ಮ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ, ಸಿಬ್ಬಂದಿಗಳಾದ ಎನ್.ಎಂ. ವಿಶ್ವಕುಮಾರ್, ಸಿ.ವಿ. ಸತ್ಯಮೂರ್ತಿ ಇದ್ದರು.ಬಿ.ಎಚ್. ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಸರ್ಕಾರಿ ಕನ್ನಡ ಪ್ರಧಾನ ಹಿರಿಯ ಪಾಥಮಿಕ ಶಾಲೆ ಪ್ರಾಂಶುಪಾಲ ಡಾ. ದುಗ್ಗಪ್ಪ ಧ್ವಜಾರೋಹಣ ನೆರವೇರಿಸಿದರು. ಎಸ್’ಡಿಎಂಸಿ ಸದಸ್ಯರಾದ ಹಿರಣ್ಣಯ್ಯ, ಮಹೇಶ್ವರಪ್ಪ ಹಾಗೂ ಮುಖ್ಯ ಶಿಕ್ಷಕರಾದ ಶಾಂತಾಬಾಯಿ ಪ್ರಾಧ್ಯಾಪಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಮಹೇಶ್ವರಪ್ಪ ನವರ 77 ನೆಯ ಹುಟ್ಟುಹಬ್ಬ ಆಚರಿಸಲಾಯಿತು. ಈ ಎಲ್ಲ ಕಾರ್ಯಕ್ರಮವನ್ನು ಜಯಕೀರ್ತಿ ನೆರವೇರಿಸಿಕೊಟ್ಟರು.ವಿಜಯನಗರ ಬಡಾವಣೆಯಲ್ಲಿರುವ ಭಾರತಿ ಐಟಿಐ ಕಾಲೇಜಿನಲ್ಲಿ ಧ್ವಜಾರೋಹಣ ನೆರವೇರಿಸಿ, ಸ್ವತಂತ್ರ ದಿನ ಆಚರಿಸಲಾಯಿತು.ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕನ್ನಡ ಯುವಕರ ಸಂಘದ ವತಿಯಿಂದ 74ನೆಯ ಸ್ವಾತಂತ್ರೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿಯನ್ನು ಆಚರಿಸಲಾಯಿತು. ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಕೆ. ರಂಗನಾಥ್ ಸಂಘದ ಅಧ್ಯಕ್ಷರಾದ ಚಂದ್ರು ಗೆಡ್ಡೆ, ಮುಖಂಡರುಗಳಾದ ಎಚ್.ಪಿ. ಗಿರೀಶ್, ಪುಷ್ಪಕ್ ಕುಮಾರ್ ಸಂಘದ ಪದಾಧಿಕಾರಿಗಳಾದ ನಾಗರಾಜ್ ಗೆಡ್ಡೆ, ಸಿದ್ದು ಪವನ್ ಕುಮಾರ್ ಪ್ರಸನ್ನ, ಪ್ರಜ್ವಲ್, ಶರತ್, ಕೇಬಲ್ ಅನ್ನು ಪ್ರದೀಪ್ ಬಸವರಾಜ್ ಇತರರು ಇದ್ದರು.
Discussion about this post