ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಹಲವು ಬದಲಾವಣೆಗಳನ್ನು ನಿರಂತರವಾಗಿ ಮಾಡುತ್ತಲೇ ಇರುವ ಭಾರತೀಯ ರೈಲ್ವೆ ಈಗ ಮತ್ತಷ್ಟು ದುಬಾರಿಯಾಗಲಿದ್ದು, ಕೆಲವೊಂದು ರೈಲುಗಳಲ್ಲಿ ಸರಬರಾಜು ಮಾಡುವ ಕಾಫಿ, ಟೀ, ತಿಂಡಿ ಹಾಗೂ ಊಟದ ದರದಲ್ಲಿ ಬಾರೀ ಏರಿಕೆಯಾಗಲಿದೆ.
ಈ ಕುರಿತಂತೆ ಈಗಾಗಲೇ ಸುತ್ತೋಲೆಯೊಂದನ್ನು ಹೊರಡಿಸಿರುವ ಇಲಾಖೆ, ಕೆಲವೊಂದು ರೈಲುಗಳಲ್ಲಿ ಮಾತ್ರ ಈ ದರ ಏರಿಕೆ ಮಾಡಿದ್ದು, ಇದು ಬಹುತೇಕ ಡಿಸೆಂಬರ್ ಮೊದಲ ವಾರದಿಂದ ಜಾರಿಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ. ಉಳಿದಂತೆ ಬೇರೆಲ್ಲಾ ರೈಲುಗಳಲ್ಲಿ ಈಗಿರುವ ದರವೇ ಮುಂದುವರೆಯಲಿದೆ.
ಯಾವ್ಯಾವ ರೈಲುಗಳಲ್ಲಿ ದರ ಏರಿಕೆ:
ರಾಜಧಾನಿ
ಶತಾಬ್ದಿ
ದುರಂತೋ
ಮೇಲ್/ಎಕ್ಸ್‌ಪ್ರೆಸ್ ರೈಲುಗಳು
ನೂತನ ದರವೆಷ್ಟು?
ರಾಜಧಾನಿ, ಶತಾಬ್ದಿ, ದುರಂತೋ ರೈಲುಗಳಲ್ಲಿ
ಬೆಳಗ್ಗಿನ ಚಹಾ
1 ಎಸಿ ಸೇವೆ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್ ಕೋಚ್’ಗಳಲ್ಲಿ: 35 ರೂ.
2 ಎಸಿ, 3 ಎಸಿ ಚೇರ್ ಕಾರ್ ಕೋಚ್’ಗಳಲ್ಲಿ: 20 ರೂ.
ದುರಂತೋ ರೈಲುಗಳ ಸ್ಲೀಪರ್ ಕೋಚ್’ಗಳಲ್ಲಿ: 15 ರೂ.
ಬೆಳಗ್ಗಿನ ತಿಂಡಿ
1 ಎಸಿ ಸೇವೆ, ಎಕ್ಸಿಕ್ಯೂಟಿವ್ ಕಾರ್’ಗಳಲ್ಲಿ: 140 ರೂ.
2 ಎಸಿ, 3 ಎಸಿ, ಚೇರ್ ಕಾರ್’ಗಳಲ್ಲಿ: 105 ರೂ.
ದುರಂತೋ ರೈಲುಗಳ ಸ್ಲೀಪರ್ ಕೋಚ್’ಗಳಲ್ಲಿ: 65 ರೂ.
ಸಂಜೆಯ ಟೀ
1 ಎಸಿ ಸೇವೆ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್’ಗಳಲ್ಲಿ: 140 ರೂ.
2 ಎಸಿ, 3 ಎಸಿ ಚೇರ್ ಕಾರ್’ಗಳಲ್ಲಿ: 90 ರೂ.
ದುರಂತೋ ರೈಲುಗಳಲ್ಲಿ ಸ್ಲೀಪರ್ ಕೋಚ್’ಗಳಲ್ಲಿ: 50 ರೂ.
ಮಧ್ಯಾಹ್ನ/ರಾತ್ರಿ ಊಟ
1 ಎಸಿ ಸೇವೆ ಮತ್ತು ಎಕ್ಸಿಕ್ಯೂಟಿವ್ ಚೇರ್ ಕಾರ್’ಗಳಲ್ಕಲಿ: 245 ರೂ.
2 ಎಸಿ, 3 ಎಸಿ ಚೇರ್ ಕಾರ್’ಗಳಲ್ಲಿ: 185 ರೂ.
ದುರಂತೋ ರೈಲುಗಳ ಸ್ಲೀಪರ್ ಕೋಚ್’ಗಳಲ್ಲಿ: 120 ರೂ.
Get In Touch With Us info@kalpa.news Whatsapp: 9481252093
Discussion about this post