ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಪಶ್ಚಿಮದ ರಾಷ್ಟ್ರಗಳು ಉಗ್ರರ ಉಪಟಳಗಳ ಅನುಭವಿಸುವುದಕ್ಕಿಂತಲೂ ಮುನ್ನವೇ ಜಮ್ಮು ಕಾಶ್ಮೀರ ರಾಜ್ಯ ಐಸಿಸ್ ಮಟ್ಟ ಅತ್ಯಂತ ಕ್ರೂರ ಹಾಗೂ ಬರ್ಭರ ನಕರ ಯಾತನೆಗಳನ್ನು ಅನುಭವಿಸಿದೆ ಎಂದು ಭಾರತೀಯ ಅಂಕಣಕಾರ್ತಿ ಸುನಂದಾ ವಸಿಷ್ಠ್ ಹೇಳಿದ್ದಾರೆ.
ವಾಷಿಂಗ್ಟನ್’ನಲ್ಲಿ ನಡೆದ ಮಾನವ ಹಕ್ಕುಗಳ ಕುರಿತ ಯುಎಸ್ ಕಾಂಗ್ರೆಸ್ಸಿನ ವಿಚಾರಣೆಯಲ್ಲಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದಲ್ಲಿ ಉಗ್ರರು ಸೃಷ್ಠಿಸಿದ ಕ್ರೂರ ನಕರಗಳ ವಿವರಣೆಯನ್ನು ನೀಡಿದ ಅವರು, ಇಸ್ಲಾಮಿಕ್ ಭಯೋತ್ಪಾದನೆಯ ಕರಾಳ ಮುಖವನ್ನು ಬಿಚ್ಚಿಟ್ಟರು.
ಟಾಮ್ ಲ್ಯಾಂಟೋಸ್ ಮಾನವ ಹಕ್ಕುಗಳ ಆಯೋಗದಲ್ಲಿ ನೀಡಿದ ಅವರ ಸಾಕ್ಷ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿಯನ್ನು ಸೃಷ್ಠಿಸಿದ್ದು, ಇದರಲ್ಲಿ ಅವರು 1990ರಲ್ಲಿ ಕಾಶ್ಮೀರಿ ಹಿಂದೂಗಳು ಅನುಭವಿಸಿದ ಭೀಕರತೆಯನ್ನು ವಿವರಿಸಿದ್ದಾರೆ.
ಭಾರತವು ಪಂಜಾಬ್ ಮತ್ತು ಈಶಾನ್ಯದಲ್ಲಿ ದಂಗೆಗಳನ್ನು ಯಶಸ್ವಿಯಾಗಿ ಸೋಲಿಸಿದೆ. ಆದರೆ, ಕಾಶ್ಮೀರದ ಬಂಡಾಯಗಳ ವಿರುದ್ಧ ನವದೆಹಲಿಯ ಹೋರಾಟವನ್ನು ಬಲಪಡಿಸುವ ಸಮಯ ಬಂದಿದೆ. ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟದಲ್ಲಿ ಅಂತಾರಾಷ್ಟ್ರೀಯ ಸಹಕಾರವು ರಾಜ್ಯದ ಮಾನವ ಹಕ್ಕುಗಳ ಸಮಸ್ಯೆಯನ್ನು ಸಹ ಪರಿಹರಿಸುತ್ತದೆ ಎಂದು ವಸಿಷ್ಠ್ ಹೇಳಿದ್ದಾರೆ.
ಭಾರತವು ಕಾಶ್ಮೀರವನ್ನು ಆಕ್ರಮಿಸಿಕೊಂಡಿಲ್ಲ ಮತ್ತು ಕಾಶ್ಮೀರ ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿತ್ತು. ಭಾರತವು ಕೇವಲ 70 ವರ್ಷಗಳ ಹಳೆಯ ಗುರುತಿನಲ್ಲ, ಆದರೆ 5000 ವರ್ಷಗಳಷ್ಟು ಹಳೆಯದಾದ ನಾಗರಿಕತೆಯಾಗಿದೆ. ಕಾಶ್ಮೀರವಿಲ್ಲದೆ ಭಾರತವಿಲ್ಲ, ಮತ್ತು ಭಾರತವಿಲ್ಲದೆ ಕಾಶ್ಮೀರವಿಲ್ಲ ಎಂದು ಹೆಮ್ಮೆಯ ನುಡಿಗಳನ್ನಾಡಿದರು.
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ 370 ನೆಯ ವಿಧಿಯ ನಿಬಂಧನೆಗಳನ್ನು ರದ್ದುಪಡಿಸಿರುವುದು ಮಾನವ ಹಕ್ಕುಗಳ ಪುನಃಸ್ಥಾಪನೆ ಮಾಡಿದಂತಾಗಿದೆ ಎಂದು ಶ್ಲಾಘಿಸಿದ್ದಾರೆ.
Get In Touch With Us info@kalpa.news Whatsapp: 9481252093
Discussion about this post