ಕಲ್ಪ ಮೀಡಿಯಾ ಹೌಸ್ | ಇರುವಕ್ಕಿ(ಶಿವಮೊಗ್ಗ) |
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಬಿಎಸ್’ಸಿ ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ #RuralAgriculture ಕಾರ್ಯಾನುಭವ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ತೋಟಗಳಿಗೆ ಭೇಟಿ ಮಾಡಿಸಲಾಯಿತು.
ಶಿಕಾರಿಪುರ #Shikaripura ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ಕೃಷಿ ವಿವಿಯ ತಜ್ಞರಿಂದ ರೈತರ ತೋಟಗಳಿಗೆ ಕ್ಷೇತ್ರ ಭೇಟಿ ಮಾಡಿ, ಅಧ್ಯಯನ ಕೈಗೊಳ್ಳಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಶಿವಮೊಗ್ಗದ #Shivamogga ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ತೋಟಗಾರಿಕೆ ತಜ್ಞರಾದ ಡಾ. ಭರತ್ ಅವರು ಆಗಮಿಸಿದ್ದರು.

ತೋಟವನ್ನು ಪರಿಶೀಲಿಸಿದ ಭರತ್ ಅವರು ತೋಟದಲ್ಲಿ ಸುಳಿ ತಿಗಣೆ, ನುಸಿ, ಬಿಳಿ ನೊಣ ಕೀಟಗಳ ಕಾಟ ಹೆಚ್ಚಿದ್ದು ಮತ್ತು ಮರಗಳಲ್ಲಿ ಸತು(ಜಿಂಕ್) ಕೊರತೆಯ ಲಕ್ಷಣಗಳು ಕಾಣುತ್ತಿದೆ ಎಂದು ತಿಳಿಸಿದರು.
ಹಿಂಗಾರ ಒಣಗುವ ರೋಗವನ್ನು ಗಮನಿಸಿ, ಅದರ ಹರಡುವಿಕೆಯನ್ನು ತಡೆಯಲು ಒಣಗಿದ ಹಿಂಗಾರಗಳನ್ನು ಸುಡಬೇಕು ಮತ್ತು ಅದಕ್ಕೆ `ಸಾಫ್’, `ಹೆಕ್ಸಕೊನಜೋಲ್’, `ಪ್ರೋಪಿಕೊನಜೋಲ್’ ಶಿಲೀಂಧ್ರನಾಶಕಗಳನ್ನು ಜನವರಿ-ಫೆಬ್ರವರಿ ತಿಂಗಳಲ್ಲಿ ಸಿಂಪಡಿಸುವ ಮೂಲಕ ನಿರ್ವಹಣೆ ಮಾಡಬಹುದೆಂದು ತಿಳಿಸಿದರು.
ಅಡಿಕೆಯಲ್ಲಿ ಅಂತರ ಬೆಳೆಗಳಾಗಿ ಕಾಳು ಮೆಣಸು, ಏಲಕ್ಕಿ, ಪಪ್ಪಾಯ, ಜಾಯಿ ಕಾಯಿ, ಕೋಕೋ ಮುಂತಾದವುಗಳನ್ನು ಬೆಳೆಯಬಹುದು ಎಂದು ತಿಳಿಸಿದರು.
ಅಕ್ಕ ಪಕ್ಕದ ರೈತರೂ ಸಹ ಪಾಲ್ಗೊಂಡು ತಮ್ಮ ಅನುಮಾನಗಳನ್ನು ಬಗೆಹರಿಸಿಕೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post