ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ |
ಸುಂದರವಾಗಿ ಕಾಣಲು ಯಾರಿಗೆ ತಾನೆ ಇಷ್ಟವಿರುವುದಿಲ್ಲ ಹೇಳಿ? ಆದರೆ, ಸುಂದರವಾಗಿ ಕಾಣಲು ಮುಖ್ಯವಾಗಿ ಅಂದವಾದ ದಂತಪಂಕ್ತಿಗಳಿರಬೇಕು. ಹಾಗಾಗಿಯೇ ಇಂದಿನ ಬಹುತೇಕ ಹದಿ ಹರೆಯದ ಮಕ್ಕಳು ಸಮರ್ಪಕವಾದ ದಂತಪಂಕ್ತಿಗಳಿಗಾಗಿ ಹಲ್ಲುಗಳ ಮೇಲೆ ಲೋಹದ ತಂತಿಗಳನ್ನು ಹಾಕಿಸಿಕೊಂಡಿರುವುದನ್ನು ನಾವು ಎಲ್ಲೆಡೆ ಕಾಣುತ್ತೇವೆ.
ಮಕ್ಕಳು ದೊಡ್ಡವರಾಗುತ್ತಾ ಯಾವ ಹಂತದಲ್ಲಿ ಈ ಬಗೆಯ ದೋಷಪೂರಿತ ದಂತಪಂಕ್ತಿಗಳಿಗೆ ಗುರಿಯಾಗುತ್ತಾರೆ ಎಂಬುದು ಹೆಚ್ಚಿನ ಪೋಷಕರಿಗೆ ತಿಳಿಯುವುದಿಲ್ಲ. ಸಮಸ್ಯೆ ಗೊತ್ತಾಗುವ ಹೊತ್ತಿಗೆ ಅದು ತೀವ್ರ ಸ್ವರೂಪದ್ದಾಗಿರುತ್ತದೆ. ಸಮಸ್ಯೆ ತೀವ್ರ ಸ್ವರೂಪದ್ದಾದಾಗ ಅದನ್ನು ಸರಿಪಡಿಸಲು ದೀರ್ಘಾವಧಿಯ ಚಿಕಿತ್ಸೆಯೇ ಬೇಕಾಗುತ್ತದೆ. ಕೆಲವೊಮ್ಮೆ ಮುಂದಕ್ಕೆ ಉಬ್ಬಿರುವ ದವಡೆಯನ್ನು ಸರಿ ಪಡಿಸಲು ದವಡೆಯ ಶಸ್ತ್ರಚಿಕಿತ್ಸೆಯನ್ನೇ ಮಾಡಬೇಕಾಗುತ್ತದೆ. ಆದರೆ, ದೋಷವನ್ನು ಮೊದಲೇ ಗುರುತಿಸಿದರೆ ಚಿಕಿತ್ಸೆಯು ಸರಳ ಹಾಗೂ ಅಲ್ಪಾವಧಿಯದಾಗಿರುತ್ತದೆ.

ಮಗು ಈ ರೀತಿಯ ಅಭ್ಯಾಸವನ್ನು ರೂಢಿಸಿಕೊಳ್ಳಲು ಕಾರಣಗಳೇನು ?
- ಮಗುವಿಗೆ ಎರಡು ವರ್ಷ ತುಂಬಿದ ಬಳಿಕವೂ ಎದೆ ಹಾಲುಣಿಸಿದಾಗ
- ಮಕ್ಕಳಿಗೆ ಸದಾ ಹೆಬ್ಬೆರಳು ಚೀಪುವ ಅಭ್ಯಾಸವಿದ್ದಾಗ
- ಮಗುವಿನ ನಾಲಿಗೆಯು ಗಾತ್ರದಲ್ಲಿ ಸಾಮಾನ್ಯಕ್ಕಿಂತಲೂ ದೊಡ್ಡದಿದ್ದಾಗ
- ಗಂಟಲಿನ ಒಳಭಾಗಲ್ಲಿರುವ ಟಾನ್ಸಿಲ್/ಅಡೆನಾಯ್ಡ್ ಗ್ರಂಥಿಗಳು ಗಾತ್ರದಲ್ಲಿ ದೊಡ್ಡದಾಗಿದ್ದಾಗ
- ಮಗುವಿನ ಬಾಯಿ ಹಾಗೂ ಮುಖದ ಮಾಂಸಖಂಡಗಳ ನಡುವೆ ಅಸಮತೋಲನವಿದ್ದಾಗ
- ಮಗುವಿನ ಬಾಯಿಯನ್ನು ಪೂರ್ತಿಯಾಗಿ ಮುಚ್ಚುವುದರಲ್ಲಿ ದೋಷವಿದ್ದಾಗ
- ಮಗುವಿಗೆ ಬಾಯಿಯಲ್ಲಿ ಉಸಿರಾಡುವ ಅಭ್ಯಾಸವಿದ್ದಾಗ
- ಅಲರ್ಜಿ, ಮತ್ತಿತರ ಕಾರಣಗಳಿಂದಾಗಿ ಮೂಗಿನ ಒಳಭಾಗದಲ್ಲಿ ಉರಿಯೂತವಿದ್ದಾಗ

ಪ್ರಾಥಮಿಕ ಹಂತಗಳಲ್ಲಿಯೇ, ಅಂದರೆ ಮಗು ಆರೇಳು ವರ್ಷದ್ದಿರಬೇಕಾದರೆ, ಅಂದರೆ ಶಾಶ್ವತ ಹಲ್ಲುಗಳು ಹುಟ್ಟುವ ಮೊದಲೇ ಈ ಅಭ್ಯಾಸವನ್ನು ಗುರುತಿಸಿ, ನಿಯಂತ್ರಿಸದೇ ಇದ್ದಲ್ಲಿ ಮುಂದೆ ಮಗುವಿನಲ್ಲಿ ವಿವಿಧ ಬಗೆಯ ದಂತ ದೋಷಗಳು ಕಾಣಿಸಿಕೊಳ್ಳಬಹುದು.
ಕಾಣಿಸಿಕೊಳ್ಳಬಹುದಾದ ದಂತ ದೋಷಗಳು ಯಾವುವು?
- ಮಧ್ಯದ ಬಾಚಿ ಹಲ್ಲುಗಳು ಸಾಮಾನ್ಯಕ್ಕಿಂತಲೂ ಹೆಚ್ಚು ಅಗಲವಾಗಿ ಹುಟ್ಟಬಹುದು
- ಮೇಲ್ದವಡೆ/ಕೆಳದವಡೆಯ ಮಧ್ಯ ಅಂತರ ಉಂಟಾದಾಗ
- ಇದರಿಂದ ಬಾಯಿಯನ್ನು ಪೂರ್ಣ ಮುಚ್ಚಲು ಸಾಧ್ಯವಾಗದೆ ಇರಬಹುದು
- ಹಲ್ಲುಗಳು ಮುಂದಕ್ಕೆ ಬಂದಂತಾಗಬಹುದು
- ಪರಸ್ಪರ ಹಲ್ಲುಗಳ ನಡುವೆ ಅಂತರ ಹೆಚ್ಚಾಗಬಹುದು
- ಅಸಮರ್ಪಕವಾದ ಹಲ್ಲುಗಳ ಜೋಡಣೆ
- ಸಣ್ಣದಾದ ಹಾಗೂ ಜೋತು ಬಿದ್ದಿರುವ ಮೇಲ್ದುಟಿ
- ಮಾತನಾಡಲು ತೊದಲಬಹುದು, ಕೆಲವು ಅಕ್ಷರ ಉಚ್ಛರಿಸಲು ಮಗು ಕಷ್ಟ ಪಡಬಹುದು
ಈ ರೀತಿಯ ತೊಂದರೆಯನ್ನು ಸರಿಪಡಿಸಲು ದಂತ ಮೂಳೆ ತಜ್ಞರು ಸಹಾಯ ಮಾಡುತ್ತಾರೆ. ಆದರೆ, ಈ ರೀತಿಯ ಚಿಕಿತ್ಸೆಯು ಸಾಮಾನ್ಯವಾಗಿ ದೀರ್ಘಾವಧಿಯದ್ದಾಗಿರುತ್ತದೆ.

ಸೂಚಿಸಬಹುದಾದ ಚಿಕಿತ್ಸೆಗಳು ಯಾವುವು ?
- ಮಕ್ಕಳಿಗೆ ಸರಿಯಾದ ನುಂಗುವ ಕ್ರಮವನ್ನು ತಿಳಿ ಹೇಳಿ ಅದನ್ನು ರೂಢಿ ಮಾಡಿಸುವುದು
- ಕೆಳ ದವಡೆಯ ಮಾಂಸ ಖಂಡಗಳು ಬಲಗೊಳ್ಳಲು ಕೆಲ ಬಗೆಯ ಸರಳ ವ್ಯಾಯಾಮಗಳನ್ನು ಹೇಳಿ ಮಾಡಿಸುವುದು
- ನಾಲಿಗೆಯ ಸಮರ್ಪಕ ಚಲನೆಗಾಗಿ ಕೆಲವು ಸರಳ ವ್ಯಾಯಾಮಗಳನ್ನು ರೂಢಿಸುವುದು
ಬಾಯಿಯ ಒಳಗೆ ಇರಿಸಬಹುದಾದ ಸರಳ ಸಾಧನಗಳ ಬಳಕೆ: ಈ ಸಾಧನಗಳು ನುಂಗುವ ಸಂದರ್ಭದಲ್ಲಿ ನಾಲಿಗೆಯು ಮುಂದೆ ಚಾಚದಂತೆ ತಡೆಯುತ್ತವೆ. ಇವುಗಳಲ್ಲಿ ಕೆಲವು ಸಾಧನಗಳನ್ನು ಕೇವಲ ರಾತ್ರಿ ವೇಳೆಯೂ, ಇನ್ನು ಕೆಲವನ್ನು ದಂತ ವೈದ್ಯರ ಸಲಹೆಯ ಮೇರೆಗೆ ಸಮಸ್ಯೆ ಸರಿ ಹೋಗುವವರೆಗೆ ಶಾಶ್ವತವಾಗಿ ಬಾಯಿಯಲ್ಲಿಯೇ ಇರಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post