No Result
View All Result
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp
English Articles

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

by ಕಲ್ಪ ನ್ಯೂಸ್
March 18, 2026
0

Kalpa Media House  |  Manipal | Manipal Institute of Technology (MIT), Manipal, a constituent unit of Manipal Academy of Higher...

Read moreDetails
Bengaluru Gets a World-Class Electronics Co-Innovation Hub as Henkel Launches Advanced Application Center

Bengaluru Gets a World-Class Electronics Co-Innovation Hub as Henkel Launches Advanced Application Center

March 17, 2026
Malnad is a Cultural ‘Gharana’ of Great Minds: Dr. Jayamala at Sahyadri Utsava

Malnad is a Cultural ‘Gharana’ of Great Minds: Dr. Jayamala at Sahyadri Utsava

March 13, 2026
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
  • Advertise With Us
  • Grievances
  • About Us
  • Contact Us
Wednesday, March 18, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಡಾ. ರಾಜ್ ಅವರ ಸರಳ ಸಜ್ಜನಿಕೆಯ ದರ್ಶನ ಮಾಡಿಸಿದ ಆ ಒಂದು ಸಂದರ್ಶನ ನಮಗೆ ದೊರೆತ ಸುವರ್ಣಾವಕಾಶ

1995ರಲ್ಲಿ ನಮ್ಮ ಶಿವಮೊಗ್ಗದವರೆಲ್ಲಾ ಸೇರಿ ನಡೆಸಿದ ಸಂದರ್ಶನದ ಕುತೂಹಲಕಾರಿ ಲೇಖನ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 2, 2019
in Special Articles
0
ಡಾ. ರಾಜ್ ಅವರ ಸರಳ ಸಜ್ಜನಿಕೆಯ ದರ್ಶನ ಮಾಡಿಸಿದ ಆ ಒಂದು ಸಂದರ್ಶನ ನಮಗೆ ದೊರೆತ ಸುವರ್ಣಾವಕಾಶ

Kalpa News Digital Media File Image

Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಡಾ.ರಾಜ್ ನಮ್ಮ ಕನ್ನಡದ ಚೇತೋಹಾರಿ ಮುಂಚೂಣಿ ಮಾದರಿಗಳಲ್ಲಿ ಅನನ್ಯವಾದವರು. ಅವರ ಜನಾನುರಾಗಕ್ಕೆ ಎಲ್ಲೆಯಿಲ್ಲ. ವ್ಯಕ್ತಿತ್ವ ವರ್ಣಿಸಲು ಪದಗಳು ಸಾಲವು. ಒಬ್ಬ ಸಾಮಾನ್ಯ ರಂಗಪ್ರತಿಭೆ ಇಡೀ ಭಾಷೆಯ ಮಮತೆಯ ಮೂರ್ತಿಯಾಯಿತು ಅಂದರೆ ತಕ್ಷಣ ನಂಬುವ ಮಾತಲ್ಲ. ಒಂದು ಕ್ಷೇತ್ರದ (ಐಕಾನ್) ಕಣ್ಮಣಿಯಾಗುವುದೆಂದರೆ ಸುಲಭವೂ ಅಲ್ಲ. ಕೇವಲ ರಂಗ-ಚಿತ್ರರಂಗವೊಂದೇ ಅಲ್ಲ. ಒಂದು ಪೂರ್ಣ ಪ್ರಮಾಣದ ಸಾಂಸ್ಕೃತಿಕ, ನಿಷ್ಕಳಂಕ ಪ್ರತಿಮೆಯಾಗಿ ಕಂಗೊಳಿಸುವಲ್ಲಿ ಡಾ.ರಾಜ್ ಅವರ ಹಿರಿಮೆಯಿದೆ.

ಅವರಿಗೆ ದೇಶದ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ (1995)ಬಂದಾಗ ಕನ್ನಡಿಗರೆಲ್ಲರೂ ಅವರ್ಣನೀಯ ಆನಂದಪಟ್ಟರು. ಇಡೀ ದೇಶವೇ ಸಾಮಾನ್ಯ ಕನ್ನಡ ಚಿತ್ರ ನಟನತ್ತ ನೋಡುವಂತಾಯಿತು. ನಮಗವರು ಸಾಮಾನ್ಯರಲ್ಲ. ಆದರೆ ಮಿಕ್ಕ ಭಾಷೆಯ ಚಿತ್ರರಂಗವೂ ಅವರನ್ನು ಶ್ರೇಷ್ಠರನ್ನಾಗಿ ನೋಡುವಂತಾಯಿತು.


ಯಾಕೆ ಸಾಮಾನ್ಯರು ಎಂದು ರಾಜಣ್ಣನವರನ್ನು ನೋಡಬೇಕು? ಎಂದರೆ ಅವರ ಸರಳತೆ, ಸಜ್ಜನಿಕೆಯೇ ಅದಕ್ಕುತ್ತರ. ದಂತದ ಅರಮನೆಯನ್ನು ಅವರ ವ್ಯಕ್ತಿತ್ವ ಕಟ್ಟಿಕೊಳ್ಳಲಿಲ್ಲ. ಅಭಿಮಾನಿಗಳಿಗೆ ಆತ್ಮೀಯರಾಗಿದ್ದರು. ಮೊದಲಾಗಿ ಅವರು ಕೆಲವು ನಟರಂತೆ *ಶೋ ಮ್ಯಾನ್* ಅಗಿರಲೇ ಇಲ್ಲ. ಹಾಗಿರಲು ಬಯಸುತ್ತಲೂ ಇರಲಿಲ್ಲ. ಉನ್ನತ ಪ್ರಶಸ್ತಿಗಳು ಬಂದಾಗ ನೆಲದಿಂದ ನಭಕ್ಕೆ ಚಿಮ್ಮಿ ಕೂರಲಿಲ್ಲ. ಅದೇ ಅವರ ದೊಡ್ಡತನ.

ಅವರನ್ನು ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಹುಡುಕಿಕೊಂಡು ಬಂತು. ಆಗ ನಮ್ಮ ಗೆಳೆಯರ ತಂಡ ಆ ಸರಳತೆಯ, ಸಜ್ಜನಿಕೆಯ ಮೇರುಪರ್ವತವನ್ನು ಅರಸಿಕೊಂಡು ಹೋಯಿತು.


ಗೆಳೆಯರ ತಂಡದಲ್ಲಿ ಶಿವಮೊಗ್ಗ ಕೇಬಲ್ ಟಿವಿಯ ಶ್ರೀಗುಂಡಾರ್ಚಾರ್, ಶ್ರೀವಾಮನ ಶರ್ಮಾ, ಭೀಮು, ರಘು ಮತ್ತೂ ಮೂರ್ನಾಲ್ಕು ಗೆಳೆಯರು ಇದ್ದರು. ಅವರ ಹೆಸರು ನೆನಪಿಗೆ ಬರುತ್ತಿಲ್ಲ.(ಗೆಳೆಯರೇ ಕ್ಷಮಿಸಿ).

ನಾನು ಭದ್ರಾವತಿ ಆಕಾಶವಾಣಿಯಲ್ಲಿದ್ದಾಗ ಶ್ರಾವಣ ಮಾಸದ ಒಂದು ದಿನ ಸಹೋದ್ಯೋಗಿ ಸುದರ್ಶನರ ಮುಖಾಂತರ ಸಂದೇಶ ಬಂತು. ಸುಧೀಂದ್ರ.. ಶಿವಮೊಗ್ಗ ಸಿಟಿ ಕೇಬಲ್’ನವರು ಡಾ ರಾಜ್ ಸಂದರ್ಶನಕ್ಕೆ ಆಕಾಶವಾಣಿಯವರನ್ನೇ ಅಪೇಕ್ಷೆ ಪಡುತ್ತಿದ್ದಾರೆ. ನೀವು ಸಂದರ್ಶನ ಮಾಡಿದರೆ ಚೆನ್ನಾಗಿರುತ್ತದೆ ಅಂದರು. ಸಾಮಾನ್ಯವಾಗಿ ಗಂಭೀರ ಉರುಫ್ ಮಹತ್ತರ ಸಂದರ್ಭಗಳು ಬಂದರೆ ಸುದರ್ಶನ್ ತಾವದಕ್ಕೆ ತಲೆಕೊಡುತ್ತಿಲಿಲ್ಲ. ’ಅದ್ಯಾವನು ತಲೆ ಕೆರಕೊಂಡು ಪ್ರಶ್ನೆಗಳನ್ನು ರೆಡಿಮಾಡೋವ್ನು’ ಎಂದು ನಗುತ್ತಲೇ ನನ್ನ ಬಳಿ ಬಂದು ನನ್ನನ್ನು ಒಪ್ಪಿಸುವ ಕೆಲಸ ಮಾಡಿಬಿಡುತ್ತಿದ್ದರು.

ಸರಿ! ಇನ್ಮೋರ್ವ ಸಹೋದ್ಯೋಗಿ ಶ್ರೀನಿವಾಸರ ಜತೆ ಕುಳಿತು ಸಂದರ್ಶನಕ್ಕೆ ಅಗತ್ಯವಾದ ಪ್ರಶ್ನೆಮಾಲಿಕೆಯನ್ನು ಸಿದ್ಧಪಡಿಸಿದೆವು. ಸಾಮಾನ್ಯ ಗಣ್ಯರನ್ನು ಅದರಲ್ಲೂ ಕಲಾವಿದರನ್ನು ಸಂದರ್ಶಿಸುವಾಗ ಒಬ್ಬರಲ್ಲ ಇಬ್ಬರಿರುತ್ತೇವೆ. ಜೊತೆಗೆ ಬಾನುಲಿ ಸಹೋದ್ಯೋಗಿ ಶ್ರೀಮತಿ ನಳಿನಮ್ಮ ಅವರೂ ಸೇರಿಕೊಂಡರು.

ಡಾ ರಾಜ್ ಅವರ ಮನೆ ಮುಟ್ಟಿದಾಗ ಬೆಳಗಿನ ಹನ್ನೊಂದೂವರೆ ಇರಬಹುದು. ಅಂದು ಶ್ರೀರಾಘವೇಂದ್ರ ಸ್ವಾಮಿಗಳವರ ಪೂರ್ವಾರಾಧನೆ. ನಮಗೆ ಮನೆಯೊಳಗೆ ಪ್ರವೇಶ ಸಿಕ್ಕೊಡನೆ ನಮಗೆ ನಡು ಹಾಲ್’ನಲ್ಲಿ ಕೂರಲು ಹೇಳಿದರು. ಸ್ವಲ್ಪ ಹೊತ್ತು ಕಾದೆವು. ಮೊದಲಿಗೆ ಭೇಟಿಯಾದವರು ರಾಜಣ್ಣನವರ ಅರ್ಧಾಂಗಿ ಶ್ರೀಮತಿ ಪಾರ್ವತಮ್ಮನವರು. ಸಿಟಿ ಕೇಬಲ್ ನವರ? ಎಂದು ಕೇಳಿದವರೇ ರಾಜಣ್ಣನವರಿಗೆ ಕರೆತರಲೋ ಎಂಬಂತೆ ಒಳಕೋಣೆಗೆ ತೆರಳಿದರು.


ಮತ್ತೆ ನಾವು ಆ ಭವ್ಯ ವ್ಯಕ್ತಿತ್ವದ ಬರವನ್ನು ಗಂಭೀರವಾಗಿ ಕಾಯುತ್ತಿದ್ದೆವು. ಆಗ ತುಸು ಬುದ್ಧಿವಂತಿಕೆ ಉಪಯೋಗಿಸಿ ಫೋಕಸ್ ದೀಪಗಳನ್ನು ಆನ್ ಮಾಡಿ ಕ್ಯಾಮೆರಾ ಫೋಕಸ್ ಮಾಡಿ ಸಿದ್ಧರಾಗಿಬಿಟ್ಟೆವು.

ನಮಗೆ ಮತ್ತೆ ರಾಜಣ್ಣನವರ ಆಗಮನವನ್ನು ಗಂಭೀರವಾಗಿ ಕಾಯುತ್ತಿದ್ದೆವು. ಬಹುನಿರೀಕ್ಷೆಯ ಫಲವಾಗಿ ಡಾ.ರಾಜ್ ನಮ್ಮತ್ತ ಬಂದರು ಅನ್ನುವುದಕ್ಕಿಂತ ಬಹುದೊಡ್ಡ ನಮ್ಮ ಕನ್ನಡ ಕಲೆಯ ಆಸ್ತಿಯೊಂದು ನಮ್ಮತ್ತ ನಸುನಗೆ ಬೀರಿ ಬರುತ್ತಿದೆ ಅಂತ ಅನಿಸಿತು. ಶುಭ್ರ ಶ್ವೇತ ವರ್ಣದ ಅಂಗಿ. ಅದಕ್ಕೊಪ್ಪುವ ಪಂಚೆ. ಅಷ್ಟೆ ಅವರ ನಿಲುವು.


ಅವರು ನಮ್ಮೆದುರು ಸೋಫಾದಲ್ಲಿ ಕೂರುತ್ತಿದ್ದಂತೆಯೇ ಫೋಕಸ್ ದೀಪ ಮತ್ತು ಕ್ಯಾಮೆರಾ ಚಾಲೂ ಆಗಿಬಿಟ್ಟವು. ನಾವೆಲ್ಲರೂ ಪ್ರೀತಿಯಿಂದ ನಮಸ್ಕಾರ ಅಂತ ಸೌಜನ್ಯದಿಂದ ಹೇಳಿದೆವು. ರಾಜಣ್ಣನವರು ಮುಗುಳ್ನಗೆ ಬೀರಿ ಪ್ರತಿವಂದಿಸಿದರು. ಗುಂಡಾಚಾರ್ ಅವರು ನಮ್ಮೆಲ್ಲರ ಪರಿಚಯ ಮಾಡಿಸಿದರು.
ಪ್ರಶ್ನೆಗಳನ್ನ ನೋಡುವಿರಾ ಅಣ್ಣಾವ್ರೆ? ಅಂತ ನಾನು ನಮ್ರನಾಗಿ ಕೇಳಿದೆ. ನೀವು ಆಕಾಶವಾಣಿಯವರು ನಿಮ್ಮ ಪ್ರಶ್ನೆಗಳು ಅಂದ್ರೆ ನಂಗೆ ಯಾವುದೇ ಆತಂಕವಿಲ್ಲ. ನಾನೂ ಆಕಾಶವಾಣಿಯ ಸಂಪರ್ಕದಲ್ಲಿದ್ದು ಬೆಳೆದೋನು. ಪರವಾಗಿಲ್ಲ ಕೇಳಿ ಎಂದು ನಗುತ್ತಲೇ ಹೇಳಿದರು. ನಮಗೆ ಆರಂಭ ಬಹಳ ಸುಲಲಿತವಾಗಿಯೇ ಸಿಕ್ಕಿತು. ನಿಜಕ್ಕೂ ನಮ್ಮ ಮಾಧ್ಯಮದ ಬಗ್ಗೆಯೂ ಹೆಮ್ಮೆ ಪಟ್ಟೆವು.


ನಿಮಗೆ ಧಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಂದಿದೆ. ನಿಮಗೆ ಏನು ಅನಿಸತ್ತೆ? ಎಂಬುದಕ್ಕೆ ಅವರು ತುಸು ನಗೆ ಚಿಮ್ಮಿದರು.
ನಮ್ಮ ದೇಶದ ಚಿತ್ರರಂಗದ ಹಿರಿಯರ ಹೆಸರಿನ ಪ್ರಶಸ್ತಿ ನನಗೆ ನೀಡಿದ್ದಾರೆ ಎಂದರೆ ನನಗಲ್ಲ ಇಡೀ ಕನ್ನಡಕ್ಕೇ ಕೊಟ್ಟ ದೊಡ್ಡ ಮರ್ಯಾದೆ, ಗೌರವ. ಎಲ್ಲದಕ್ಕೂ ನಮ್ಮ ಅಭಿಮಾನಿ ದೇವರುಗಳ ಆಶೀರ್ವಾದ ಎಂದರು.

ನಿಜಕ್ಕೂ ಅವರು ನನಗೆ ಸಂತೋಷವಾಗಿದೆ ಅಂತ ಒಂದೇ ವಾಕ್ಯ ಹೇಳಿಬಿಡಬಹುದಿತ್ತು. ಆದರೆ ಫಾಲ್ಕೆ ಅವರ ಮೇಲಿನ ದೊಡ್ಡ ಗೌರವ ಮತ್ತು ಕನ್ನಡದ ಅಭಿಮಾನಿ ದೇವರುಗಳಲ್ಲಿ ಅವರು ಇರಿಸಿ ಕೊಂಡಿದ್ದ ಅವ್ಯಾಜ ಪ್ರೀತಿ ಅವರ ಮಾತಿನಲ್ಲಿ ತುಂಬಿ ಬಂದಿತ್ತು.

ಸಿನಿಮಾಕ್ಕೆ ಬರುವವರಿಗೆ ರಂಗದ ಅನುಭವ ಅವಶ್ಯವೇ ಎಂಬ ಪ್ರಶ್ನೆ ಬಂದಾಗ ಅವರಿಂದ ಬಂದ ಉತ್ತರ ಯುವಪೀಳಿಗೆಗೆ ಆದರ್ಶವೆನಿಸಿತು.
ನೋಡಿ.. ನಂಗೆ ಅಪ್ಪನವರು ರಂಗನಟರಾಗಿದ್ದರು. ನನಗೆ ರಕ್ತದಲ್ಲೇ ಅದನ್ನು ಅವರ ಆಶೀರ್ವಾದವೆಂಬಂತೆ ತುಂಬಿದರು. ನಾನು ರಂಗನಟನೆಯನ್ನೇ ನಂಬಿಕೊಂಡಿದ್ದವನು. ’ಬೇಡರ ಕಣ್ಣಪ್ಪ’ನಾಗಿ ಅವಕಾಶ ಒದಗಿ ಬಂತು. ಅಲ್ಲಿಂದ ಚಿತ್ರರಂಗದ ನಂಟು ಬೆಳೀತು. ನೀವು ಕೇಳಿದ್ರೀ.. ಈಗಿನ ಸಿನಿಮಾ ನಟರಿಗೆ ರಂಗಭೂಮಿಯ ಹಿನ್ನೆಲೆ ಇರಬೇಕಾ? ಅಂತ. ಇರಬೇಕು. ನಂಗೆ ಇಷ್ಟು ಪಾತ್ರಗಳನ್ನು ಮಾಡಿದೀನಿ ಅಂದ್ರೆ ರಂಗಭೂಮಿಯ ಅನುಭವದಿಂದ ಮಾತ್ರ ಸಾಧ್ಯ ಆಗಿದೆ. ನಂಗೆ ರಂಗಭೂಮಿ ತಾಯಿಮನೆ ಇದ್ದಂತೆ. ಅದನ್ನು ಮರೆಯೋ ಹಂಗಿಲ್ಲ ಎಂದರು.


ರಂಗಭೂಮಿಯ ಬಗ್ಗೆ ಅವರಿಗಿರುವ ಮಮತೆ ಕುರಿತು ಹೆಮ್ಮೆಯೆನಿಸಿತು. ಈಗಿನ ಬಹಳಷ್ಟು ಮಂದಿ ಕೇವಲ ಹಣಬಲ ಮತ್ತು ಆಕರ್ಷಕ ರೂಪ ಇವರಡೇ ಬಂಡವಾಳ ಇಟ್ಟುಕೊಂಡಿರುವುದು. ಅಭಿನಯ ಶ್ರೀಮಂತಿಕೆಯ ಕೊರತೆಯಿಂದ ಅವರ ಭವಿಷ್ಯ ಅಷ್ಟಾಗಿ ಉಜ್ವಲಗೊಳ್ಳುತ್ತಿಲ್ಲ ಅನಿಸಿತು.

ಇದು ನಮ್ಮ ಮಾತಿನ ನಡುವೆ ಬಂದ ಅನೌಪಚಾರಿಕ ಚರ್ಚೆಯಾಗಿತ್ತಷ್ಟೆ. ಇದಕ್ಕೆ ರಾಜಣ್ಣನವರು ಯುವಪೀಳಿಗೆ ನಟರ ಬಗ್ಗೆ ಏನೊಂದೂ ಅಪಶಬ್ದ ಹೇಳಲಿಲ್ಲ. ಅವರು ಯಾವಾಗಲೂ ಹೇಳುವಂತೆ ಕನ್ನಡಕ್ಕೆ ಒಬ್ಬ ರಾಜಕುಮಾರ ಸಾಲದು. ನಿಮ್ಮಲ್ಲೂ ನೂರಾರು ರಾಜಕುಮಾರರು ಬರಬೇಕು ಎಂಬುದು ಅವರ ಜೀವನದ ಸಾರವತ್ತಾದ ನುಡಿಯಾಗಿತ್ತು.

ನಮ್ಮದು ಇನ್ನೊಂದು ಪ್ರಶ್ನೆ ಅವರ ಅಂತರಂಗ ಕಾಡಿದ ಹಾಗೇ ಕೇಳಿದೆವು.
ನನಗೆ ಯಾವ ಪಾತ್ರ ಇಷ್ಟವಾಯಿತು ಅಂತ ಕೇಳಿದರೆ ಹೆತ್ತ ತಾಯಿಗೆ ನಿಂಗೆ ಯಾವ ಮಗು ಇಷ್ಟ ಅಂತ ಕೇಳಿದಂತೆ. ಆ ತಾಯಿ ಯಾವ ಮಗು ಅಂತ ತೋರಿಸ್ತಾಳೆ ಹೇಳಿ? ಹಾಗೆ ಆವಾಗಾವಾಗ ನಾನು ನಟಿಸಿದ ಪಾತ್ರಗಳಿಗೆ ಆಗ ದೇವರು ಕೊಟ್ಟ ಶಕ್ತಿಯೇ ವಿನಾ ಬೇರೆಯಿಲ್ಲ. ಎಂದವರೇ ಬಹುವಾಗಿ ಬೇಗ ನಾವೇ ಭಕ್ತ ಕುಂಬಾರ, ಹಳೆಯ ಸರ್ವಜ್ಞ ಮೂರ್ತಿ, ಕನಕದಾಸ, ಶ್ರೀರಾಘವೇಂದ್ರ ವಿಜಯ ಅಥವಾ ಮಂತ್ರಾಲಯ ಮಹಾತ್ಮೆ ಪ್ರಸ್ತಾಪಿಸಿದೆವು.

ಇವತ್ತು ರಾಯರ ಆರಾಧನೆ ಇರಬೇಕು ಅಲ್ಲವೆ? ಎಂದು ಕೇಳಿದರು. ಹೌದು ಇವತ್ತು ಮೊದಲ ದಿನ ಎಂದೆ ನಾನು. ಅದೊಂದು ಅವರ್ಣನೀಯ ಅನುಭವ. ಆ ಮಹಾತ್ಮರನ್ನು ಅರ್ಥಮಾಡಿಕೊಂಡು ನಟಿಸಬೇಕಲ್ಲ. ಅದು ನನ್ನಂತಹ ಸಣ್ಣ ನಟನಿಗೆ ದೊಡ್ಡ ಸವಾಲಾಗಿತ್ತು. ಹೇಗೋ ಅವರೆಲ್ಲರ ಕೃಪೆ ಚೆನ್ನಾಗಿತ್ತು. ಅಭಿಮಾನಿಗಳು ಆಶೀರ್ವದಿಸಿದರು ಎಂದರು ವಿನೀತರಾಗಿ.

ನಮ್ಮದು ನಾನ್ ಸ್ಟಾಪ್ ಸಂದರ್ಶನ.!. ಕೂಡಲೇ ಅವರ ಕೃಷ್ಣದೇವರಾಯ ಐತಿಹಾಸಿಕವಾಗಿ ತುಂಬಾ ಚೆನ್ನಾಗಿ ಬಂದಿದೆ ಎಂದರು. ಈಗಲೂ ಕೃಷ್ಣದೇವರಾಯ, ಶ್ರೀರಾಘವೇಂದ್ರ ಸ್ವಾಮಿಗಳು ಅಂದರೆ ಡಾ.ರಾಜ್ ಅವರ ಮುಖವೇ ನಮ್ಮ ಕಣ್ಮುಂದೆ ನಿಲ್ಲುತ್ತದೆ. ನಿಮ್ಮದು ನಟನೆ ಜನ್ಯಭೂತವಾದ ಪ್ರತಿಭೆ ಎಂದೆ. ನಸುನಕ್ಕು ಅದೆಲ್ಲಾ ದೇವರ ಆಶೀರ್ವಾದ ನನ್ನದು ಅಂತ ಏನಿಲ್ಲ ಅಂದರು.


ನೀವು ಕತೆ ಓದಿ ಸಿನಿಮಾ ಒಪ್ಪಿಕೊಳ್ಳುವಿರಾ? ಅಥವಾ ಒಪ್ಪಿದ ಮೇಲೆ ಸಿನಿಮಾ ನಟನೆಗೆ ಸಿದ್ಧವಾಗುವಿರ? ಎಂದಾಗ ಅವರ ಉತ್ತರ ಬಹಳ ಮಾರ್ಮಿಕವಾಗಿತ್ತು.
ನನ್ನನ್ನುಅಂತಹ ಪಾತ್ರದಲ್ಲಿ ನಿರ್ದೇಶಕರೇ ಕಲ್ಪಿಸಿಕೊಂಡು ಬಂದಾಗ ಅವರ ಅಭಿಮಾನಕ್ಕೆ ಇಲ್ಲ ಅನ್ನಲಾರೆ. ಇನ್ನು ಕತೆಯನ್ನಂತೂ ನೋಡಲೇ ಬೇಕು. ಅದು ಅನಿವಾರ್ಯ.

ಯಾವ ನಿರ್ದೇಶಕರು ನಿಮಗಿಷ್ಟ? ಎಂದು ಕೇಳಿದ್ದಕ್ಕೆ ಎಲ್ಲರೂ ಕನ್ನಡದ ಪ್ರತಿಭಾವಂತರೆ. ಒಳ್ಳೊಳ್ಳೆ ನಿರ್ದೇಶಕರಿದ್ದಾರೆ. ಒಳ್ಳೆಯ ಸಿನಿಮಾ ತೆಗೆದಿದ್ದಾರೆ ಎಂದರು.

ಕನ್ನಡ ಚಿತ್ರರಂಗದಲ್ಲಿ ನೀವು ಅಭಿನಯಿಸದ ಪಾತ್ರಗಳೇ ಇಲ್ಲ. ನಿಮ್ಮ ದೃಷ್ಟಿಯಲ್ಲಿ ಯಾವ ಪಾತ್ರವನ್ನು ನೀವು ಮಾಡಬೇಕು ಅಂತ ಅಪೇಕ್ಷೆ ಪಟ್ಟಿದ್ದೀರಿ? ಎಂದಾಗ ಅವರು ನಾನು ಭಕ್ತ ಅಂಬರೀಶ ಪಾತ್ರ ಮಾಡಬೇಕಿದೆ ಸಿದ್ಧತೆಗಳು ನಡೆಯುತ್ತಿವೆ ಅಂದರು.


ಅಂಬರೀಶ ಪಾತ್ರದ ಬಗ್ಗೆ ಅವರು ಬಹಳ ಹಚ್ಚಿಕೊಂಡಿದ್ದರು. ರಂಗದಲ್ಲಿ ಆ ಪೌರಾಣಿಕ ಪಾತ್ರ ನಿರ್ವಹಿಸಿದ ಅವರಲ್ಲಿ ಅದನ್ನ ಬೆಳ್ಳಿತೆರೆಗೆ ತರುವ ಅಪಾರ ಆಸೆ, ನಿರೀಕ್ಷೆಯಿತ್ತು.

ಅಷ್ಟರಲ್ಲಿ ಶ್ರೀಮತಿ ಪಾರ್ವತಮ್ಮನವರು ಬಂದು ಅವರ ಜತೆ ಕುಳಿತರು. ಶ್ರೀನಿವಾಸ ಕಲ್ಯಾಣ ಚಿತ್ರದಿಂದ ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿತು. ಅಲ್ಲದೆ ಅಲ್ಲಿಂದ ರಾಜಣ್ಣನವರ ಅಭಿನಯ ಸಾಮರ್ಥ್ಯ ಮತ್ತು ಲೆಜೆಂಡರಿ ಇಮೇಜು (ಚಿತ್ರರಂಗದ ದಂತಕತೆಯ ರೂಪ) ತಾನಾಗೇ ಸಿಗಲು ಆರಂಭಿಸಿತು ಎನ್ನಬಹುದು.


ಪಾರ್ವತಿ… ಇವರಿಗೆಲ್ಲಾ… ಕಾಫಿ ಕೊಡಕಾಗುತ್ಯೆ? ಅವರಿಗೆಲ್ಲಾ ಕಾಫಿ ಕೊಡುವಾಗ ನಂಗೂ ಕುಡಿಯೋಕೆ ಸಿಗುತ್ತಲ್ಲವಾ? ಅಂತ ಲಘು ಹಾಸ್ಯ ಬೆರೆಸಿ ಮಾತನಾಡಿದರು. ಅಮ್ಮನವರು ಮುಗುಳ್ನಗುತ್ತಾ ನಾನು ಸಿಟಿ ಕೇಬಲ್ಲು ಅಂದ್ರೆ ಬೆಂಗಳೂರು ಸಿಟಿಯವರು ಅಂತ ಅಂದ್ಕೊಂಡಿದ್ದೆ.. ನೀವು ಶಿವಮೊಗ್ಗ ಸಿಟಿಯವರ? ಹತ್ತು ನಿಮಿಷ ಅವರ ಸಮಯ ಕೊಡುತ್ತಿದ್ದೆ. ಯಾಕಂದ್ರೆ ಅವರೀಗ ಗಾಯನದ ಧ್ವನಿಮುದ್ರಣಕ್ಕೆ ಸ್ಟುಡಿಯೋಗೆ ಹೊರಡಬೇಕು. ಸರಿ ಟೈಮಾಯಿತು ಅನ್ನುತ್ತಿದ್ದಂತೆಯೇ ಕಾಫಿ ಬಂತು.

 


ನಂತರ ಅಣ್ಣಾವ್ರೊಂದಿಗೆ ನಮ್ಮೆಲ್ಲರ ಫೋಟೋ ಸೆಷನ್ ನಡೆಯಿತು. ರಾಜಣ್ಣ ನಮ್ಮೊಂದಿಗೆ ಪ್ರೀತಿಯಿಂದ ಸಹಕರಿಸಿದರು…

ಇನ್ನೂ ಒಂದಿಷ್ಟು ನೆನಪುಮಾಡಿಕೊಳ್ಳಲು ಯತ್ನಿಸುತ್ತೇನೆ. ಅದೊಂದು ನನ್ನ ಅವರ್ಣನೀಯ ಕ್ಷಣ. ಆನಂದ ಪಡುವ ಘಳಿಗೆ.
(Images Courtesy: Internet)

ಲೇಖನ: ಡಾ.ಸುಧೀಂದ್ರ
ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥರು (ವಿಶ್ರಾಂತ)
& ಹಿರಿಯ ಸಲಹಾ ಸಂಪಾದಕರು,
 ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

Get in Touch With Us info@kalpa.news Whatsapp: 9481252093

Tags: BENGALURUDada Saheb Phalke AwardDr Channagiri SudheendraDr RajkumarInterviewKannada MoviesKannada NewssandalwoodShivamoggaಆಕಾಶವಾಣಿಕನ್ನಡ ಚಿತ್ರರಂಗಡಾ.ರಾಜ್’ಕುಮಾರ್ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಪಾರ್ವತಮ್ಮ ರಾಜ್’ಕುಮಾರ್ರಂಗಭೂಮಿಶಿವಮೊಗ್ಗಸಂದರ್ಶನ
Share203Tweet123Send
Previous Post

ಆಕೆಯನ್ನು ಹೇಗೆ ಕೊಂದರೋ, ನನ್ನ ಮಗನನ್ನೂ ಸಹ ಹಾಗೇ ಸುಟ್ಟುಬಿಡಿ, ಅವನನ್ನು ಬಿಡಬೇಡಿ

Next Post

ಶ್ರೀ ಸುಬ್ರಮಣ್ಯ ದರ್ಶನ: ಒಲುಮೆಯ ದೈವಕ್ಕೆ ವೈವಿಧ್ಯಮಯ ಆರಾಧನೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಶ್ರೀ ಸುಬ್ರಮಣ್ಯ ದರ್ಶನ: ಒಲುಮೆಯ ದೈವಕ್ಕೆ ವೈವಿಧ್ಯಮಯ ಆರಾಧನೆ

ಶ್ರೀ ಸುಬ್ರಮಣ್ಯ ದರ್ಶನ: ಒಲುಮೆಯ ದೈವಕ್ಕೆ ವೈವಿಧ್ಯಮಯ ಆರಾಧನೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

ನವೋದಯ ಪ್ರವೇಶ ಪರೀಕ್ಷೆ | ಅಪೂರ್ವಗೆ ಉತ್ತಮ ಅಂಕ

March 18, 2026
ಬಡವರ ಆರೋಗ್ಯದ ಜೊತೆ ಸರ್ಕಾರದ ಚೆಲ್ಲಾಟ | ಉಗ್ರಾಣಗಳಲ್ಲಿ 7 ತಿಂಗಳಾದರೂ ಔಷಧಿ ಪೂರೈಕೆಯಿಲ್ಲ: ಶಾಸಕ ಡಾ. ಧನಂಜಯ ಸರ್ಜಿ

ಬಡವರ ಆರೋಗ್ಯದ ಜೊತೆ ಸರ್ಕಾರದ ಚೆಲ್ಲಾಟ | ಉಗ್ರಾಣಗಳಲ್ಲಿ 7 ತಿಂಗಳಾದರೂ ಔಷಧಿ ಪೂರೈಕೆಯಿಲ್ಲ: ಶಾಸಕ ಡಾ. ಧನಂಜಯ ಸರ್ಜಿ

March 18, 2026
Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

Manipal Institute of Technology, Manipal Concludes NCIIPC–AICTE Pentathon 2026 Advanced Cybersecurity Bootcamp

March 18, 2026
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ: ವಿದ್ಯಾರ್ಥಿಗಳಿಗೆ ಸಚಿವ ಮಧು ಬಂಗಾರಪ್ಪ ಶುಭಹಾರೈಕೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ: ವಿದ್ಯಾರ್ಥಿಗಳಿಗೆ ಸಚಿವ ಮಧು ಬಂಗಾರಪ್ಪ ಶುಭಹಾರೈಕೆ

March 18, 2026
ಸಂತುಷ್ಟರಾಗಿ ವರಗಳನ್ನು ನೀಡುವ ಶ್ರೀ ಸತ್ಯ ಸಂತುಷ್ಟ ತೀರ್ಥರು

ಸಂತುಷ್ಟರಾಗಿ ವರಗಳನ್ನು ನೀಡುವ ಶ್ರೀ ಸತ್ಯ ಸಂತುಷ್ಟ ತೀರ್ಥರು

March 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL