No Result
View All Result
Malnad is a Cultural ‘Gharana’ of Great Minds: Dr. Jayamala at Sahyadri Utsava
English Articles

Malnad is a Cultural ‘Gharana’ of Great Minds: Dr. Jayamala at Sahyadri Utsava

by ಕಲ್ಪ ನ್ಯೂಸ್
March 13, 2026
0

Kalpa Media House  |  Shimoga | Invoking the poetic essence of the Malnad landscape, veteran actor, former minister, and Chairperson...

Read moreDetails
ABB deepens Karnataka footprint with new investments to serve high growth emerging sectors

ABB deepens Karnataka footprint with new investments to serve high growth emerging sectors

March 12, 2026
“Rasamum Rasayanamum- Artistry meets Chemistry”

“Rasamum Rasayanamum- Artistry meets Chemistry”

March 11, 2026
ಕಾನಹಳ್ಳಿಯಲ್ಲಿ ಹಾನಗಲ್ಲಿನ ಕದಂಬ ಹೆಮ್ಮಾಡಿದೇವನ ಅವಧಿಯ ವೀರಗಲ್ಲು ಪತ್ತೆ

T20 World Cup Stars Suryakumar Yadav & Tilak Varma Make Strategic Investment in TRUZON Solar

March 11, 2026
ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ಎಚ್ಚರ ಅವಶ್ಯ : ಡಾ. ಸುಶ್ರುತ ಗೌಡ

Post-COVID Surge: Lifestyle Diseases Now Striking People in Their 40s, Warns Neurologist  Dr. Sushrutha Gowda

March 9, 2026
  • Advertise With Us
  • Grievances
  • About Us
  • Contact Us
Saturday, March 14, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಜೈನಧರ್ಮ ಪ್ರಭಾವಕಿ, ಬಹುಮುಖ ಪ್ರತಿಭಾ ಸಾಧಕಿ ಡಾ. ನೀರಜಾ ನಾಗೇಂದ್ರಕುಮಾರ್

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 15, 2019
in Special Articles
0
ಜೈನಧರ್ಮ ಪ್ರಭಾವಕಿ, ಬಹುಮುಖ ಪ್ರತಿಭಾ ಸಾಧಕಿ ಡಾ. ನೀರಜಾ ನಾಗೇಂದ್ರಕುಮಾರ್
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನಮ್ಮ ಮಾತೃಭೂಮಿಗೆ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಿರುವ ಜೈನಧರ್ಮದಲ್ಲಿ ಹಲವು ಸಾಧಕರು ಬೆಳಕಿಗೆ ಬಾರದೇ ಎಲೆಮರೆಯ ಕಾಯಿಯಂತೆ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂತಹ ಜೈನ ಸಮುದಾಯದ ಓರ್ವ ಸಾಧಕಿಯೇ ನಮ್ಮ ಇಂದಿನ ಲೇಖನದ ಕೇಂದ್ರ ಬಿಂದು.

ಹೌದು… ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕಾಯಾ-ವಾಚಾ-ಮನಸಾ ನಿಷ್ಕಲ್ಮಶ ಮನಃಸ್ಥಿತಿಯಿಂದ ಸದ್ದಿಲ್ಲದೆ ಸೇವಾ ಸಾಧನೆ ಮಾಡುತ್ತಿರುವ ಡಾ. ನೀರಜಾರವರು ಬಹುಮುಖ ಪ್ರತಿಭೆಯ ಗಣಿ ಎಂದರೂ ತಪ್ಪಾಗಲಾರದು.

ಈ ಸಾಧಕಿ ತಮ್ಮ ಪರಿಮಿತಿಯಲ್ಲಿ ಎಲ್ಲಾ ಧಾರ್ಮಿಕ ಸಾಮಾಜಿಕ ಕೆಲಸಗಳಿಗೆ ತಮ್ಮಿಂದಾದ ಸಹಕಾರ ಪ್ರೋತ್ಸಾಹ ನೀಡುವ ಇವರು ಜೈನ ಸಮುದಾಯದ ಮುಖ್ಯವಾಹಿನಿಯಲ್ಲಿ ಗುರುತಿಸಲ್ಪಡುವ ಮಹಿಳಾ ಸಾಧಕರಲ್ಲಿ ಇವರೂ ಒಬ್ಬರು.


ಜೈನ ಧಾರ್ಮಿಕ ವಿಚಾರಗಳಲ್ಲಿ ಯಾವ ವಿಷಯವನ್ನು ಕೊಟ್ಟರೂ ನಿರರ್ಗಳವಾಗಿ ಮಾತನಾಡುವ ಇವರು, ಜೈನಧರ್ಮವನ್ನು ಆಳವಾಗಿ ಅಧ್ಯಯನ ಮಾಡಿದವರು. ವೃತ್ತಿಯಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸುವುದರ ಜೊತೆಗೆ ಪ್ರವೃತ್ತಿಯಲ್ಲಿ ಉತ್ತಮ ಸಾಹಿತಿಯೂ ಹೌದು. ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದ ಮನಃಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಇವರ ತಂದೆ ಡಾ.ಧರಣೇಂದ್ರಯ್ಯ ಹಾಗೂ ತಾಯಿ ಧರ್ಮಕಾರ್ಯಗಳಲ್ಲಿ ಅತ್ಯಂತ ಉನ್ನತ ಮಟ್ಟದ ಕೆಲಸ ಮಾಡಿದ ಶ್ರೀಮತಿ ಕೌಶಲ್ಯ ಧರಣೆಂದ್ರ. ಪತಿ ನಾಗೇಂದ್ರಕುಮಾರ್ ಪತ್ನಿಯ ಎಲ್ಲಾ ಕೆಲಸಗಳಿಗೆ ಬೆಂಗಾವಲಾಗಿ ನಿಲ್ಲುತ್ತಾ ವೈದ್ಯರಾಗಿ ಬೆಂಗಳೂರಿನಲ್ಲಿ ಸ್ವಂತ ಚಿಕಿತ್ಸಾಲಯ ನಿರ್ವಹಿಸುತ್ತಿದ್ದಾರೆ.

ಡಾ. ನೀರಜಾರವರು ಉತ್ತಮ ಸಾಹಿತಿಯೂ ಹೌದು. ಜಿನದತ್ತರಾಯ ಚರಿತ್ರೆ ನೇಮಿನಾಥ ಪುರಾಣ ಎಂಬ ಎರಡು ಶ್ರೇಷ್ಠ ಅರ್ಥಪೂರ್ಣ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಚ್ಚಾಯಿ ಜೀವನ್ ಕಿ ಎಂಬ ಮುನಿಶ್ರೀ ಚಿನ್ಮಯ ಸಾಗರ ಕವನವನ್ನು ಇಂಗ್ಲೀಷ್’ಗೆ ಭಾಷಾಂತರಿಸಿದ್ದಾರೆ. ದಿಗಂಬರ ಹಾಗೂ ದಿಗಂಬರತ್ವ ಕೃತಿಯನ್ನು ಹಿಂದಿ ಇಂಗ್ಲಿಷ್ ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಿಸಿ ಭಾಷಾಂತರದಲ್ಲೂ ಪರಿಣಿತಿ ಪಡೆದುಕೊಂಡಿದ್ದಾರೆ. ಅದಷ್ಟೇ ಅಲ್ಲದೆ ಮುನಿಶ್ರೀ ಚಿನ್ಮಯಸಾಗರರ ಹಿಂದಿ ಕೃತಿಗಳನ್ನು ಪ್ರೇಮ ವಿವಾಹ ಮತ್ತು ಪರಿತಾಪಗಳು ಎನ್ನುವುದನ್ನೂ, ಮುನಿಶ್ರೀ ಆದಿತ್ಯಸಾಗರ ಮಹಾರಾಜರ ಝಾಣಜ್ಝಯಣ ಎಂಬ ಹಿಂದಿ ಕೃತಿಯನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.

ವೃತ್ತಿಯಲ್ಲಿ ವೈದ್ಯೆಯಾಗಿರುವ ಇವರು ವೈದ್ಯಕೀಯ ಮಾಹಿತಿಗೆ ಸಂಬಂಧಿಸಿದಂತೆ ಲೇಖನಗಳನ್ನು ಬರೆಯುದರ ಜೊತೆಗೆ ಇವರ ಆಧ್ಯಾತ್ಮಿಕ ವೈದ್ಯಕೀಯ ಭಾಷಣ ಆಕಾಶವಾಣಿ ಬೆಂಗಳೂರಿನಿಂದ ಬಿತ್ತರಗೊಂಡು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.


ದೂರದರ್ಶನದ ಚಂದನ ವಾಹಿನಿಯಲ್ಲಿ ಇವರ ಉಪನ್ಯಾಸಗಳು ಪ್ರಸಾರಗೊಳ್ಳುದರ ಜೊತೆಗೆ ವಿಮಾನಪುರದ ಭ. ಮಹಾವೀರ ಜಿನಮಂದಿರದ ಮಹಾವೀರ ಸಂಘದ ಸಹಯೋಗದೊಂದಿಗೆ ಧಾರ್ಮಿಕ ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ. ಜೈನ ಧರ್ಮದ ಪವಿತ್ರ ಪರ್ವ ದಶಲಕ್ಷಣ ಕಾಯಕ್ರಮಗಳಲ್ಲಿ ರಾಜ್ಯದಾದ್ಯಂತ ನೀಡಿದ ಉಪನ್ಯಾಸದಿಂದ ಬಹಳಷ್ಟು ಮಂದಿ ಪ್ರಭಾವಿತರಾಗಿದ್ದಾರೆ.

ಪಂಚಕಲ್ಯಾಣ ಮಹೋತ್ಸವಗಳಲ್ಲಿ ಇವರು ರಾಜ್ಯದ ವಿವಿಧ ಕಡೆ ಮತ್ತು ವೈನಾಡು,ಶಿಖರಜೀಯಲ್ಲಿ ಉಪನ್ಯಾಸ ನೀಡಿದ್ದು, 2015 ರ ಸೆಪ್ಟೆಂಬರ್’ನಲ್ಲಿ ನಡೆದ ಕರ್ನಾಟಕ ಜೈನ್ ಅಸೋಸಿಯೇಷನ್ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಚುನಾಯಿತರಾಗಿದಷ್ಟೇ ಅಲ್ಲದೆ ಅಲ್ಲೂ ಧಾರ್ಮಿಕ ಕೆಲಸವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡಿ ಸೈ ಎನಿಸಿಕೊಂಡಿದ್ದಾರೆ.

ವೈದ್ಯಕೀಯ ಸೇವಾ ಕೆಲಸದಲ್ಲೂ ಪತಿ ಡಾ. ನಾಗೇಂದ್ರ ಕುಮಾರ್ ಅವರೊಡನೆ ಅನೇಕ ಉಚಿತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಿ ಜನ ಮೆಚ್ಚುಗೆ ಪಡೆದಿದ್ದಾರೆ.


ಭಾರತದ ವಿಶೇಷ ಭೂಮಿ ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕದ ಪ್ರಯುಕ್ತವಾಗಿ ನಡೆದ ಜಿನಭಜನಾ ಸ್ಪರ್ಧೆ ಗೊಮ್ಮಟ ಜಿನ ಭಕ್ತಿ ಗೀತಾಂಜಲಿಯ ಕನ್ವೀನರ್ ಆಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ನೀರಜಾರವರ ಕೆಲಸಗಳು ಇಲ್ಲಿಗೆ ಮುಗಿದಿಲ್ಲ.ಈಗಾಗಲೇ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಇವರು, ಪ್ರತಿ ರವಿವಾರ ಬೆಳಗ್ಗೆ 7.15 ರಿಂದ 7.45 ರ ವರೆಗೆ ಚಂದನ ಟಿವಿಯಲ್ಲಿ ಬರುವ ರತ್ನತ್ರಯ ಎಂಬ ಧಾರ್ಮಿಕ ಧಾರಾವಾಹಿ ನಿರ್ಮಿಸುತ್ತಿರುವ ಪ್ರಥಮ ಜೈನ ಮಹಿಳಾ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿರುವ ಇವರು ಜೈನ ಧರ್ಮದ ಹೆಮ್ಮೆ.

ಪ್ರತಿಯೊಂದು ಕ್ಷೇತ್ರದಲ್ಲೂ ಆಡಂಬರವಿಲ್ಲದೆ ಸೇವಾ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಇವರು, ವೈದ್ಯಕೀಯ, ಧಾರ್ಮಿಕ, ಸಾಹಿತ್ಯ ಮತ್ತು ಸಮಾಜ ಸೇವೆಯಲ್ಲಿ ನಿರಂತರಾಗಿ ಸಮರ್ಪಣಾ ಭಾವದಿಂದ ಮಾಡುತ್ತಾ ಬಂದಿರುವುದು ವಿಶೇಷ.

ಸಂಘ ಸಂಸ್ಥೆಗಳಲ್ಲಿ ಇವರು ಮಾಡಿದ ಕೆಲಸಗಳು ಕಡಿಮೆಯೇನಿಲ್ಲ. ಸಾಲಿಗ್ರಾಮ ಜೈನ ಮಿತ್ರ ಮಂಡಳಿಯ ಉಪಾಧ್ಯಕ್ಷರಾಗಿ, ಸುಮೇರು ಜೈನ ಫೌಂಡೇಶನ್ ಅದರ ನಿಕಟ ಪೂರ್ವ ಉಪಾಧ್ಯಕ್ಷರಾಗಿ, ಜೈನ ಮಿಲನ್ ಈಸ್ಟ್‌ ಪೂರ್ವ ಅಧ್ಯಕ್ಷರಾಗಿ, ಕರ್ನಾಟಕ ಜೈನ್ ಅಸೋಸಿಯೇಷನ್’ನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಉತ್ತಮ ಕಾರ್ಯ ನಿರ್ವಹಿಸಿ ಎಲ್ಲರ ಪ್ರಶಂಸೆ ಗಳಿಸಿದ್ದಾರೆ. ಉತ್ತಮ ಲೇಖಕಿಯಾದ ಇವರು ಬ್ಭೂ ಮಾತು ಎಂಬ ಆನ್’ಲೈನ್ ಪತ್ರಿಕೆಯಲ್ಲಿ ಇವರ ಲೇಖನಗಳು ಪ್ರಕಟವಾಗಿ ಮಾಹಿತಿಯ ಕಣಜವಾಗಿವೆ. ಅಂತರ್ಜಾಲದ ಸ್ಪೀಕಿಂಗ್ ಟ್ರೀ ವೆಬ್’ಸೈಟ್’ನಲ್ಲಿ ಬರೆಯುತ್ತಿದ್ದಾರೆ.


ಇವರ ಈ ಎಲ್ಲ ಸೇವೆಗಳನ್ನು ಗುರುತಿಸಿ ಹಲವಾರು ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ. ಅದರಲ್ಲೂ ಪ್ರಮುಖವಾದವು ಕರ್ನಾಟಕ ಲೇಖಕಿಯರ ಸಂಘದ ಉದಯೋನ್ಮುಖ ಕವಿಯಿತ್ರಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಸೇವಾ ರತ್ನ ಪ್ರಶಸ್ತಿ, ಬುದ್ಧ ಶಾಂತಿ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿಗಳು ಸಂದಿವೆ.

ಡಾ. ನೀರಜಾ ಜೈನಧರ್ಮದ ವಿಶೇಷ ಮಹಿಳಾ ಶಕ್ತಿ ಎಂದರೂ ತಪ್ಪಾಗಲಾರದು. ಸಾಮಾಜಿಕ, ಧಾರ್ಮಿಕ, ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ಇವರು ಸದಾ ಇನ್ನೊಬ್ಬರ ಕೆಲಸಗಳಿಗೆ ನಿಷ್ಕಲ್ಮಶ ಮನಸ್ಸಿನಿಂದ ಬೆಂಗಾವಲಾಗಿ ನಿಂತು ಸಹಕಾರ ನೀಡುತ್ತಿರುವ ಇವರ ಎಲ್ಲಾ ಕನಸುಗಳು ಸಾಕಾರಗೊಳ್ಳಲಿ. ದೂರದರ್ಶನ ಚಂದನ ವಾಹಿನಿಯಲ್ಲಿ ಇವರ ನೇತೃತ್ವದಲ್ಲಿ ಮೂಡಿಬರುತ್ತಿರುವ ರತ್ನತ್ರಯ ಧಾರಾವಾಹಿ ಸಾವಿರಾರು ಸಂಚಿಕೆಯನ್ನು ದಾಟಲಿ ಎನ್ನುವ ಆಶಯದೊಂದಿಗೆ…

Get in Touch With Us info@kalpa.news Whatsapp: 9481252093

Tags: Chandana channelDoctorDr. Neeraja NagendrakumarNeminath PuranaSpecial Articleಚಂದನ ವಾಹಿನಿಜೈನ ಧರ್ಮಡಾ. ನೀರಜಾ ನಾಗೇಂದ್ರಕುಮಾರ್ನೇಮಿನಾಥ ಪುರಾಣಭಾಷಾಂತರಮಹಾವೀರಮುನಿಶ್ರೀ ಚಿನ್ಮಯಸಾಗರ
Share219Tweet123Send
Previous Post

ಸಹ ಪ್ರಾಧ್ಯಾಪಕ ರಘುನಾಥರ ಸಾಹಿತ್ಯ, ಶೈಕ್ಷಣಿಕ ಸಾಧನೆಗೆ ಒಲಿದ ಹಂಪಿ ವಿವಿ ಸಿಂಡಿಕೇಟ್ ಸದಸ್ಯ ಸ್ಥಾನ

Next Post

ದಾವಣಗೆರೆ ಜಿಲ್ಲೆಯಾದ್ಯಂತ ಮಿನುಗುತ್ತಿರುವ ಈ ಎರಡು ನಕ್ಷತ್ರಗಳು ಇಡಿಯ ದೇಶದ ಅಧಿಕಾರಿಗಳಿಗೆ ಮಾದರಿ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ದಾವಣಗೆರೆ ಜಿಲ್ಲೆಯಾದ್ಯಂತ ಮಿನುಗುತ್ತಿರುವ ಈ ಎರಡು ನಕ್ಷತ್ರಗಳು ಇಡಿಯ ದೇಶದ ಅಧಿಕಾರಿಗಳಿಗೆ ಮಾದರಿ

ದಾವಣಗೆರೆ ಜಿಲ್ಲೆಯಾದ್ಯಂತ ಮಿನುಗುತ್ತಿರುವ ಈ ಎರಡು ನಕ್ಷತ್ರಗಳು ಇಡಿಯ ದೇಶದ ಅಧಿಕಾರಿಗಳಿಗೆ ಮಾದರಿ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಆಸ್ಪತ್ರೆ – ವಿದ್ಯಾರ್ಥಿನಿಲಯಗಳಿಗೆ ಸಮರ್ಪಕ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

ಆಸ್ಪತ್ರೆ – ವಿದ್ಯಾರ್ಥಿನಿಲಯಗಳಿಗೆ ಸಮರ್ಪಕ ಗ್ಯಾಸ್ ಸಿಲಿಂಡರ್ ಪೂರೈಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ

March 13, 2026
ಮಾ.24, 25 ಶರಣ ಸಾಹಿತ್ಯ ಸಮ್ಮೇಳನ | ಸಮ್ಮೇಳನಾಧ್ಯಕ್ಷರಾಗಿ ಬೆಕ್ಕಿನ ಕಲ್ಮಠ ಶ್ರೀಗಳಿಗೆ ಆಹ್ವಾನ

ಮಾ.24, 25 ಶರಣ ಸಾಹಿತ್ಯ ಸಮ್ಮೇಳನ | ಸಮ್ಮೇಳನಾಧ್ಯಕ್ಷರಾಗಿ ಬೆಕ್ಕಿನ ಕಲ್ಮಠ ಶ್ರೀಗಳಿಗೆ ಆಹ್ವಾನ

March 13, 2026
ಜ.17ರಂದು ಭದ್ರಾವತಿಯ ಬಹುತೇಕ ಕಡೆ, ಮಾಚೇನಹಳ್ಳಿ ಪ್ರದೇಶದಲ್ಲಿ ಕರೆಂಟ್ ಇರಲ್ಲ | ಇಲ್ಲಿದೆ ಪಟ್ಟಿ

ಗಮನಿಸಿ! ಮಾರ್ಚ್ 14-15ರಂದು ಶಿವಮೊಗ್ಗದ ಈ ಎಲ್ಲ ಬಡಾವಣೆಗಳಲ್ಲಿ ಕರೆಂಟ್ ಇರಲ್ಲ

March 13, 2026
ಮಾನವೀಯತೆ ಜಾಗೃತಗೊಳಿಸಲು ಸಾಹಿತ್ಯ ಮದ್ದಾಗಲಿದೆ: ವಿಮರ್ಶಕಿ ಆಶಾದೇವಿ

ಮಾನವೀಯತೆ ಜಾಗೃತಗೊಳಿಸಲು ಸಾಹಿತ್ಯ ಮದ್ದಾಗಲಿದೆ: ವಿಮರ್ಶಕಿ ಆಶಾದೇವಿ

March 13, 2026
ಎಪ್ರಿಲ್ 10ರಿಂದ 20 | ಪುತ್ತೂರು ಮಹಾಲಿಂಗೇಶ್ವರ ಜಾತ್ರೆ | ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ?

ಎಪ್ರಿಲ್ 10ರಿಂದ 20 | ಪುತ್ತೂರು ಮಹಾಲಿಂಗೇಶ್ವರ ಜಾತ್ರೆ | ಏನೆಲ್ಲಾ ಕಾರ್ಯಕ್ರಮ ನಡೆಯಲಿದೆ?

March 13, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL