ಕಲ್ಪ ಮೀಡಿಯಾ ಹೌಸ್ | ಕಲಬುರಗಿ |
ಅನ್ಯ ಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕಾಗಿ ಯುವತಿಯ ಅಣ್ಣ ಹಾಗೂ ಸಹಚರರು ಯುವಕನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದ ಹಿಂದೂ ದಲಿತ ಯುವಕ ವಿಜಯ್ ಕಾಂಬ್ಲೆ ಎನ್ನುವಾತನನ್ನು ಯುವತಿಯ ಅಣ್ಣ ಹಾಗೂ ಆತನ ಸಹಚರರು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.
ವಿಜಯ್ ರೈಲ್ವೆ ನಿಲ್ದಾಣದ ಬಳಿ ತೆರಳುತ್ತಿದ್ದ ವೇಳೆ ಆತನನ್ನು ತಡೆದ ಯುವತಿಯ ಅಣ್ಣ ಹಾಗೂ ಆತನ ಸಹಚರರು ವಿನಾಕಾರಣ ಕ್ಯಾತೆ ತೆಗೆದು ಲಾಂಗ್ ಹಾಗೂ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಇದೊಂದು ಮರ್ಯಾದೆ ಹತ್ಯೆ ಎಂದು ವರದಿಯಾಗಿದೆ. ಯುವಕನ ಕುಟುಂಬಸ್ಥರ ರೋಧನ ಮುಗಿಲುಮುಟ್ಟಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















