ಕಲ್ಪ ಮೀಡಿಯಾ ಹೌಸ್ | ಕಾರ್ಕಳ |
ಈ ಬಾರಿಯ ಕೆಸಿಇಟಿ ಫಲಿತಾಂಶ #KCET Result ಪ್ರಕಟಗೊಂಡಿದ್ದು ಕಾರ್ಕಳದ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜಿನ #Christking PU College ಅನಂತ್ ಎನ್ ಕೆ ಇಂಜಿನಿಯರಿಂಗ್‌ನಲ್ಲಿ ರಾಜ್ಯಕ್ಕೆ 57ನೇ ರ್‍ಯಾಂಕ್ ಹಾಗೂ ಬಿ-ಫಾರ್ಮಾದಲ್ಲಿ 333ನೇ ರ್‍ಯಾಂಕ್ ಪಡೆದುಕೊಳ್ಳುವುದರ ಮೂಲಕ ಸಂಸ್ಥೆಯು ಅಮೋಘ ಸಾಧನೆಯನ್ನು ದಾಖಲಿಸಿದೆ.
ಇದರ ಜೊತೆಗೆ ಸಂಹಿತ್ ಎಸ್ ಆಚಾರ್ಯ ಅಗ್ರಿಕಲ್ಚರ್‌ನಲ್ಲಿ 826 ನೇ ರ್‍ಯಾಂಕ್ ಹಾಗೂ ಬಿಎನ್‌ವೈಎಸ್‌ನಲ್ಲಿ 1888ನೇ ರ್‍ಯಾಂಕ್, ಇಂಜಿನಿಯರಿಂಗ್‌ನಲ್ಲಿ 2527ನೇ ರ್‍ಯಾಂಕ್ ಪಡೆದುಕೊಂಡಿದ್ದಾನೆ. ಶ್ರೀಯಾ ಅಗ್ರಿಕಲ್ಚರ್‌ನಲ್ಲಿ 1591ನೇ ರ್‍ಯಾಂಕ್ ಪಡೆದುಕೊಂಡಿದ್ದಾಳೆ.

ಗ್ರಾಮೀಣ ಹಾಗೂ ಬಡ ಸಮುದಾಯದ ವಿದ್ಯಾರ್ಥಿಗಳ ಆಶಾಕಿರಣವಾಗಿ, ದಾಖಲಾತಿಗೆ ಯಾವುದೇ ಅಂಕಗಳ ಮಿತಿಯಿಲ್ಲದೆ ದಾಖಲಾತಿ ನೀಡಿ ಸಿಇಟಿ ತರಬೇತಿ ಪಡೆದ 124 ವಿದ್ಯಾರ್ಥಿಗಳಲ್ಲಿ ಹದಿನೈದು ಸಾವಿರದ ಒಳಗೆ 40 (32%) ರ್‍ಯಾಂಕುಗಳನ್ನು ಗಳಿಸುವ ಮೂಲಕ ಕ್ರೈಸ್ಟ್‌ಕಿಂಗ್ ಪದವಿಪೂರ್ವ ಕಾಲೇಜು ಗಮನಾರ್ಹ ಸಾಧನೆ ಮಾಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post