ಕಲ್ಪ ಮೀಡಿಯಾ ಹೌಸ್ | ಬಾಗಲಕೋಟೆ |
ಮಹಾಭಾರತದ ಶಿಶುಪಾಲ ನೂರು ತಪ್ಪು ಮಾಡಿ ಬಲಿಯಾದಂತೆ ಸಿದ್ದರಾಮಯ್ಯ #Siddharamaiah ಸಹ ನೂರು ತಪ್ಪು ಮಾಡಿದ್ದು, ಅವರಿಗೆ ರಾಜಕೀಯ ಅಸ್ಥಿತ್ವವಿಲ್ಲ ಎಂದು ಸಚಿವ ಕೆ.ಎಸ್. ಈಶ್ವರಪ್ಪ #KSEshwarappa ಕಿಡಿ ಕಾರಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಹಿಜಾಬ್ #Hijab ವಿಚಾರದಲ್ಲಿ ಅಲ್ಪ ಸಂಖ್ಯಾತರ ಓಲೈಕೆಗಾಗಿ ಹಿಂದೂ ಸ್ವಾಮೀಜಿಗಳ ವಿಚಾರವನ್ನು ಎಳೆದು ತಂದು ಸಿದ್ದರಾಮಯ್ಯ ಅತ್ಯಂತ ದೊಡ್ಡ ತಪ್ಪು ಮಾಡಿದ್ದಾರೆ. ಸಿದ್ದರಾಮಯ್ಯನವರಿಗೆ ಇನ್ನು ಮುಂದೆ ರಾಜಕೀಯ #Politics ಅಸ್ಥಿತ್ವವಿಲ್ಲ ಎಂದಿದ್ದಾರೆ.
ಸ್ವಾಮೀಜಿಗಳ #Saint ವಿಚಾರದಲ್ಲಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಸ್ವತಃ ಕಾಂಗ್ರೆಸ್’ನ #Congress ಯಾವುದೇ ನಾಯಕರು ಬೆಂಬಲ ನೀಡಿದೇ, ಎಲ್ಲರೂ ಅಂತರ ಕಾಯ್ದುಕೊಂಡಿದ್ದಾರೆ. ವಿಧಿಯಿಲ್ಲದೇ ಅವರ ಪುತ್ರ ಯತೀಂದ್ರ ಮಾತ್ರ ಅಪ್ಪನ ಪರ ಹೇಳಿಕೆ ನೀಡಿದ್ದಾರೆ ಎಂದು ಕುಹಕವಾಡಿದರು.
ಇಂತಹ ಹೇಳಿಕೆ ನೀಡಿ ವಿವಾದ ಸೃಷ್ಠಿಸಿರುವ ಸಿದ್ದರಾಮಯ್ಯನವರನ್ನು ತಾಕತ್ತಿದ್ದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ #DKShivakumar ಅವರು ವಜಾ ಮಾಡಲಿ. ಅವರಿಗೆ ಸಾಧ್ಯವಿಲ್ಲದೇ ಇದ್ದರೆ ಸೋನಿಯಾಗಾಂಧಿಯವರಿಗೆ ಪತ್ರ ಬರೆದು ವಜಾ ಮಾಡಿಸಲಿ ನೋಡೋಣ ಎಂದು ಸವಾಲು ಹಾಕಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post