ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಭದ್ರಾ ಜಲಾಶಯ ಭರ್ತಿಯಾಗಲು ಇನ್ನು ಕೇವಲ ಅರ್ಧ ಅಡಿ ಮಾತ್ರ ಬಾಕಿಯಿದ್ದು, ಒಳಹರಿವು ಕಡಿಮೆಯಾಗಿರುವ ಕಾರಣ ನಾಳೆ ಅಲ್ಪ ಪ್ರಮಾಣದ ನೀರು ಹರಿಸುವ ಸಾಧ್ಯತೆಯಿದೆ.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಬಿಆರ್’ಪಿ ಎಇಇ ಮಂಜುನಾಥ್ ಅವರು, 186 ಅಡಿಗಳ ಪೂರ್ಣ ಮಟ್ಟದ ಜಲಾಶಯದಲ್ಲಿ ಇಂದು ಮುಂಜಾನೆಯ ಮಾಹಿತಿಯಂತೆ 185′ 1¾ ಅಡಿಗಳಷ್ಟು ನೀರು ಸಂಗ್ರಹವಾಗಿದ್ದು, ಗರಿಷ್ಠ ಮಟ್ಟ ತಲುಪಲು ಕೇವಲ ಅರ್ಧ ಅಡಿ ಮಾತ್ರ ಬಾಕಿಯಿದೆ ಎಂದಿದ್ದಾರೆ.
ಹಿನ್ನೀರು ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿ ಒಳಹರಿವು 6551 ಕ್ಯೂಸೆಕ್ಸ್’ನಷ್ಟು ಮಾತ್ರ ಇದ್ದು, ಸೋಮವಾರ ಅಂದಾಜು 2 ಸಾವಿರ ಕ್ಯೂಸೆಕ್ಸ್’ನಷ್ಟು ನೀರು ಹರಿಸುವ ಸಾಧ್ಯತೆಯಿದೆ. ಒಳಹರಿವು ಹೆಚ್ಚಾದಲ್ಲಿ ಮಾತ್ರ ನೀರು ಹರಿಸಲಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಇಂದು ನೀರು ಹರಿಸುವುದಿಲ್ಲ ಎಂದಿದ್ದಾರೆ.
ಇನ್ನು, ಕಳೆದ ವರ್ಷ ಇದೇ ದಿನ ಗಳಷ್ಟು ನೀರು ಸಂಗ್ರಹವಾಗಿತ್ತು. 71,064 ಟಿಎಂಸಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯವಿದ್ದು, ಇಂದು ಮುಂಜಾನೆಗೆ 70,462 ಟಿಎಂಸಿ ನೀರು ಸಂಗ್ರವಾಗಿದೆ.
ನೀರು ಸಂಗ್ರಹಣೆ ಗರಿಷ್ಠ ಮಟ್ಟಕ್ಕೆ ತಲುಪುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಿ ಗೇಟ್ ತೆರೆದು ನದಿಗೆ ನೀರು ಹರಿಸುವ ಸಾಧ್ಯತೆಯಿದೆ. ಹೀಗಾಗಿ, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವುದು ಸೂಕ್ತ.
Get In Touch With Us info@kalpa.news Whatsapp: 9481252093















