ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಅಂತ್ಯ ಸಂಸ್ಖಾರ ನೆರವೇರಿಸಲು ಮರೀನಾ ಬೀಚ್‌ನಲ್ಲಿ ಅಲ್ಲಿನ ಸರ್ಕಾರ ಅವಕಾಶ ನಿರಾಕರಿಸಿರುವ ಹಿನ್ನೆಲೆಯಲ್ಲಿ, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ.
ಕರುಣಾನಿಧಿ ನಿಧನ: ಇಬ್ಬರ ಬಾಂಧವ್ಯ ನೆನೆದ ಪ್ರಧಾನಿ ಮೋದಿ
ಈ ಕುರಿತಂತೆ ಸರ್ಕಾರದ ನಿರ್ಧಾರದ ವಿರುದ್ದ ಡಿಎಂಕೆ ಹೈಕೋರ್ಟ್ ಮೆಟ್ಟಿಲೇರಿದ್ದು, ಇಂದು ರಾತ್ರಿಯೇ ನ್ಯಾಯಾಲಯ ಈ ಕುರಿತು ಕೈಗೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಪಳನಿಸ್ವಾಮಿ ನೇತೃತ್ವದ ಎಐಎಡಿಎಂಕೆ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಮರೀನಾ ಬೀಚ್ ಬದಲಿಗೆ ಗಿಂಡಿ ಪ್ರದೇಶದಲ್ಲಿ ಅಂತ್ಯಸಂಸ್ಕಾರ ಮಾಡಲು ಜಾಗ ನೀಡಿದೆ. ಮರೀನಾ ಬೀಚ್ ನಲ್ಲಿನ ಸ್ಮಾರಕಗಳ ಸಂಬಂಧ ಹಲವು ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿದ್ದು, ಗಾಂಧಿ ಮಂಟಪದ ಬಳಿ ಕರುಣಾನಿಧಿ ಅಂತ್ಯಸಂಸ್ಕಾರಕ್ಕೆ ಸ್ಥಳಾವಕಾಶ ಮಾಡಿಕೊಡುವುದಾಗಿ ಹೇಳಿದೆ.
ತಮಿಳು ಚಿತ್ರರಂಗ, ಸಾಹಿತ್ಯಕ್ಕೆ ಕರುಣಾನಿಧಿ ಕೊಡುಗೆ ಎಂತಹದ್ದು ಗೊತ್ತಾ?
ಆದರೆ, ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಡಿಎಂಕೆ, ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್, ಮಾಜಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮತ್ತು ಡಿಎಂಕೆ ಸ್ಥಾಪಕ ಅಣ್ಣಾದೊರೈ ಅವರನ್ನು ಮರೀನಾ ಬೀಚ್ ನಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗಿದೆ. ಆದರೆ ಈಗ ಅವರಷ್ಟೇ ಸಮಾನರಾದ ಕರಣಾನಿಧಿ ಅವರಿಗೆ ಜಾಗ ನೀಡಲು ನಿರಾಕರಿಸಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.














