ತಿರುವನಂತಪುರಂ: ದೇವರ ನಾಡು ಕೇರಳದ ಪ್ರವಾಹದಲ್ಲಿ ಸಿಲುಕಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಅಪಾಯದಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಭಾರತೀಯ ಸೇನೆಯ ಯೋಧರ ಸಾಹಸಕ್ಕೆ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ.
ಇಂತಹ ಒಂದು ಸಂದರ್ಭದಲ್ಲಿ ಮನೆಯ ಮೇಲ್ಛಾವಣಿಯೊಂದರ ಮೇಲೆ ಹೆಲಿಕಾಪ್ಟರ್ ಇಳಿಸಿ, ಸಂತ್ರಸ್ತರನ್ನು ರಕ್ಷಿಸಿದ ಪೈಲಟ್ ಬಿಚ್ಚಿಟ್ಟ ಸತ್ಯ ಎಂತಹವರ ಎದೆಯನ್ನೂ ಸಹ ಝಲ್ ಎನಿಸುತ್ತದೆ.
ಈ ಕುರಿತಂತೆ ಮಾತನಾಡಿರುವ ಲೆ. ಕಮಾಂಡರ್ ಅಭಿಜಿತ್ ಗರುಢ್, ಅದೊಂದು ಅತ್ಯಂತ ರಿಸ್‌ಟ್ ಇದ್ದ ಕಾರ್ಯಾಚರಣೆಯಾಗಿತ್ತು. ಮನೆಯ ಮೇಲೆಯೇ ಸಂಪೂರ್ಣ ಭಾರ ಹಾಕಿ ಹೆಲಿಕಾಪ್ಟರನ್ನು ಇಳಿಸಲು ಸಾಧ್ಯವಿಲ್ಲ. ಹೀಗಾಗಿ, ಲೈಟ್ ಆನ್ ವ್ಹೀಲ್‌ಸ್ ಎಂದು ಕರೆಯಲ್ಪಡುವ ಸ್ಥಿತಿಯಲ್ಲಿ ಅಂದರೆ ಹೆಲಿಕಾಪ್ಟರ್ ಗಾಳಿಯಲ್ಲಿಯೇ ತೇಲುವಂತೆ, ಗಾಳಿಯಲ್ಲಿಯೇ ಪೂರ್ಣ ಭಾರ ಇರುವಂತೆ ನೋಡಿಕೊಳ್ಳಲಾಯಿತು.
Yup. We can land just about anywhere. That’s a @indiannavy Seaking 42B on a narrow rooftop evacuating people in #KeralaFlood The story gets even more amazing. (See my next tweet) pic.twitter.com/3GPg2JC0ra
— Shreya Dhoundial (@shreyadhoundial) August 18, 2018
ಇನ್ನು, ಹಗ್ಗ ಇಳಿಬಿಟ್ಟು ನಾಲ್ವರನ್ನು ಹೇಗೋ ಹತ್ತಿಸಿಕೊಳ್ಳಲಾಯಿತು. ಆದರೆ, ಉಳಿದವರನ್ನೆಲ್ಲಾ ಹಾಗೆಯೇ ಹತ್ತಿಸಿಕೊಳ್ಳುವುದು ಅಸಾಧ್ಯ ಎನಿಸಿತು.
ಸಿಬ್ಬಂದಿಗಳ ಸಹಾಯ ತೆಗೆದುಕೊಂಡು ಧೈರ್ಯ ಮಾಡಿ ಕೆಳಗಿಳಿದು ಉಳಿದವರನ್ನೆಲ್ಲಾ ಹತ್ತಿಸಿಕೊಂಡೆವು. ಈ ವೇಳೆ ಕೊಂಚ ಏನಾದರೂ ಪ್ರಮಾದ ಸಂಭವಿಸಿದ್ದರೆ, ಕೇವಲ ಮೂರೇ ಸೆಕೆಂಡ್‌ಗಳಲ್ಲಿ ಹೆಲಿಕಾಪ್ಟರ್ ಪುಡಿ, ಪುಡಿಯಾಗುತ್ತಿತ್ತು ಎಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.
Discussion about this post