ಬೆಂಗಳೂರು: ಹಲವು ದಾಖಲೆಗಳನ್ನು ಬರೆದಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ 10ನೆಯ ದಿನಕ್ಕೆ 150 ಕೋಟಿ ಕ್ಲಬ್ ಸೇರುವ ಮೂಲಕ ಈಗ ಕನ್ನಡ ಚಿತ್ರರಂಗದಲ್ಲೇ ಹೊಸ ದಾಖಲೆಯನ್ನು ನಿರ್ಮಿಸಿದೆ.
ಈ ಕುರಿತಂತೆ ಚಿತ್ರವಿಮರ್ಷಕ ತರುಣ್ ಆದರ್ಶ್ ಟ್ವೀಟ್ ಮಾಡಿದ್ದು, ಕೆಜಿಎಫ್ ಚಿತ್ರ 150 ಕೋಟಿ ಕ್ಲಬ್ ಸೇರಿರುವುದನ್ನು ದೃಢಪಡಿಸಿದ್ದಾರೆ. ಚಿತ್ರ ಬಿಡುಗಡೆಯಾಗಿ 11 ದಿನ ಕಳೆದರೂ ಇನ್ನು ಚಿತ್ರವನ್ನು ನೋಡಲು ಥಿಯೇಟರ್ ಗಳತ್ತ ಪ್ರೇಕ್ಷಕರು ದಾಂಗುಡಿ ಹಿಡುತ್ತಿರುವುದರಿಂದ ಚಿತ್ರದ ಕಲೆಕ್ಷನ್ ಸಹ ಜೋರಾಗಿದೆ.
#KGF maintains well in Weekend 2… Decline in Weekend 2 [vis-à-vis Weekend 1]: 42.93%, which indicates a strong hold… Mumbai circuit continues to dominate… [Week 2] Fri 1.25 cr, Sat 1.75 cr, Sun 2.25 cr. Total: ₹ 26.70 cr. India biz. Note: HINDI version.
— taran adarsh (@taran_adarsh) December 31, 2018
ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರ ಒಟ್ಟಾರೆ 75 ಕೋಟಿ ಗಳಿಸಿ ಮೊದಲ ಸ್ಥಾನದಲ್ಲಿತ್ತು. ಇದೀಗ ಈ ದಾಖಲೆಯನ್ನು ಕೆಜಿಎಫ್ ಮುರಿದಿದೆ.
#KGF biz at a glance…
Week 1: ₹ 21.45 cr
Weekend 2: ₹ 5.25 cr
Total: ₹ 26.70 cr
India biz.
Note: HINDI version.— taran adarsh (@taran_adarsh) December 31, 2018
Discussion about this post