ಕಲ್ಪ ಮೀಡಿಯಾ ಹೌಸ್ | ಕೊಚ್ಚಿ |
ಭಾರತದ ಮೊಟ್ಟ ಮೊದಲ ಸ್ವದೇಶಿ ನಿರ್ಮಿತ ವಿಮಾನ ವಾಹಕ ಐಎನ್’ಎಸ್ ವಿಕ್ರಾಂಕ್ INS Vikranth ಇಂದು ಲೋಕಾರ್ಪಣೆಗೊಂಡಿದ್ದು, ಸಮಸ್ತ ಭಾರತೀಯರ ಹೆಮ್ಮೆಯ ಪ್ರತೀಕವಾಗಿ ಇದು ಸಮರ್ಪಣೆಗೊಂಡಿದೆ.
A short film on the first indigenous aircraft carrier #INSVikrant traces the glorious history & might of the of the Indian Naval forces & its rich maritime legacy, nurtured over the years!@indiannavy pic.twitter.com/4gN1M2xFqS
— PIB India (@PIB_India) September 2, 2022
ಕೊಚ್ಚಿಯ ನೌಕಾಪಡೆಯ ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು PM Narendra Modi ಇಂದು ಇದನ್ನು ದೇಶಕ್ಕೆ ಸಮರ್ಪಣೆ ಮಾಡಿದ್ದಾರೆ.
ಕಾರ್ಯಕ್ರಮಕ್ಕೂ ಮುನ್ನ ಕೊಚ್ಚಿ ಬಂದರು ತಾಣಕ್ಕೆ ಆಗಮಿಸಿದ ಪ್ರಧಾನಿಯವರಿಗೆ ಗೌರವ ವಂದನೆ ಸಲ್ಲಿಸಲಾಯಿತು.
ಭಾರತೀಯ ನೌಕಾಪಡೆಯ ಆಂತರಿಕ ಯುದ್ಧನೌಕೆ ವಿನ್ಯಾಸ ಕೇಂದ್ರ ವಿನ್ಯಾಸಗೊಳಿಸಿದ ಮತ್ತು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಅಡಿಯಲ್ಲಿ ಸಾರ್ವಜನಿಕ ವಲಯದ ನೌಕಾನೆಲೆ ಕೊಚ್ಚಿನ್ ಶಿಪ್ಯಾರ್ಡ್ ಲಿಮಿಡ್‌ನಿಂದ ನಿರ್ಮಿಸಲಾಗಿದೆ. 1971 ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತದ ಮೊದಲ ವಿಮಾನವಾಹಕ ನೌಕೆಯಾದ ವಿಕ್ರಾಂತ್ ಹೆಸರನ್ನು ಈ ಸ್ವದೇಶಿ ವಿಮಾನವಾಹಕ ನೌಕೆಗೆ ಇಡಲಾಗಿದೆ. ವಿಕ್ರಾಂತ್ ಕಾರ್ಯಾರಂಭದೊAದಿಗೆ, ಭಾರತವು ಎರಡು ಕಾರ್ಯಾಚರಣೆಯ ವಿಮಾನವಾಹಕ ನೌಕೆಗಳನ್ನು ಹೊಂದಿರುತ್ತದೆ, ಇದು ರಾಷ್ಟçದ ಕಡಲ ಭದ್ರತೆಯನ್ನು ಹೆಚ್ಚಿಸುತ್ತದೆ.
ಐಎನ್’ಎಸ್ ವಿಕ್ರಾಂತ್ ವಿಶೇಷತೆಯೇನು?
- ಅತ್ಯಾಧುನಿಕ ಯಾಂತ್ರೀಕೃತಗೊಂಡ ವೈಶಿಷ್ಟ್ಯಗಳೊಂದಿಗೆ ನಿರ್ಮಾಣ
- ಭಾರತದ ಕಡಲ ಇತಿಹಾಸದಲ್ಲಿ ಈವರೆಗೆ ನಿರ್ಮಿಸಲಾದ ಅತಿದೊಡ್ಡ ಹಡಗು
- ಇದು ದೊಡ್ಡ ಪ್ರಮಾಣದ ಸ್ಥಳೀಯ ಉಪಕರಣ ಹಾಗೂ ಯಂತ್ರೋಪಕರಣಗಳನ್ನು ಹೊಂದಿದೆ
- ದೇಶದ ಪ್ರಮುಖ ಕೈಗಾರಿಕಾ ಮನೆಗಳು ಮತ್ತು 100 ಕ್ಕೂ ಹೆಚ್ಚು ಸಣ್ಣ, ಮಧ್ಯಮ ಮತ್ತು ಅತಿಸಣ್ಣ ಪ್ರಮಾಣದ ಕೈಗಾರಿಕೆ ಒಳಗೊಂಡಿದೆ
- 262 ಮೀಟರ್ ಉದ್ದದ ವಾಹಕವು 45,000 ಟನ್’ಗಳ ಸ್ಥಳಾಂತರ (ಹಿಂದಿನ ವಿಕ್ರಾಂತ್ ವಿಮಾನ ವಾಹಕಕ್ಕಿಂತಲೂ ದೊಡ್ಡದು)
ಇದು ಎಂಐಜಿ 29ಕೆ ಯುದ್ಧ ವಿಮಾನವನ್ನು ವಾಯು ವಿರೋಧಿ, ಮೇಲ್ಮೈ ವಿರೋಧಿ, ಭೂ ದಾಳಿಯಲ್ಲಿ ಬಳಕೆ - ಐಎನ್’ಎಸ್ ವಿಕ್ರಾಂತ್ ಸುಮಾರು 30 ವಿಮಾನಗಳನ್ನು ಒಯ್ಯುತ್ತದೆ
- ಭಾರತೀಯ ನೌಕಾ ದಾಸ್ತಾನುಗಳಲ್ಲಿ ಅತಿದೊಡ್ಡ ಯುದ್ಧನೌಕೆ
- ಈ ವಿಮಾನ ವಾಹಕ ನೌಕೆ ವಿಕ್ರಾಂತ್ 14 ಡೆಕ್-2300 ಕಂಪಾರ್ಟ್‌ಮೆಂಟ್ ಹೊಂದಿದೆ
- ಅಂದಾಜು 1500 ಯೋಧರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ
- ಸಿಬ್ಬಂದಿಗಳ ಆಹಾರಕ್ಕಾಗಿ 10 ಸಾವಿರ ಚಪಾತಿ/ರೊಟ್ಟಿ ತಯಾರಿಸುವ ಸಾಮರ್ಥ್ಯ ಹೊಂದಿದೆ
- ಹಡಗಿನ ಗ್ಯಾಲಿ ಎಂದು ಕರೆಯಲಾಗುತ್ತದೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post