ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಎಲ್ಲಾದರೂ ಇರು, ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು.. ಕನ್ನಡವೇ ಸತ್ಯ, ಕನ್ನಡವೇ ನಿತ್ಯ
ರಾಷ್ಟ್ರಕವಿ ಕುವೆಂಪುರವರ ಈ ಮೇಲಿನ ಕಾವ್ಯ ಕರ್ನಾಟಕದ ಕನ್ನಡ ಅಭಿಮಾನಿಗಳಿಗೆ ಪ್ರೇರಣೆಯಿಂದ ಪ್ರಭಾವವನ್ನು ಬೀರಿದೆ. ಅದರಂತೆ ಈ ಕಾವ್ಯದ ಮೇಲೆ ಪ್ರಭಾವಿ ಪ್ರೇರಣೆಯಾದ ಮಾನವ ಸಂಪನ್ಮೂಲ ಮತ್ತು ಸಮಾಜಕಾರ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೃತ್ತನಿರತರು ನಿರಾತಂಕ ಸಂಸ್ಥೆಯ ಜೊತೆಗೂಡಿ ರಾಜ್ಯ ಮಟ್ಟದ ಮಾನವ ಸಂಪನ್ಮೂಲ ವೃತ್ತಿ ನಿರಂತರ ಕನ್ನಡ ಸಮ್ಮೇಳನವನ್ನು ಕಳೆದ 3 ವರ್ಷಗಳಿಂದ ಯಶಸ್ವಿಯಾಗಿ ಆಯೋಜಿಸಿಕೊಂಡು ಬಂದಿದೆ. ಅದರಂತೆ ನಾಲ್ಕನೆಯ ರಾಜ್ಯ ಮಟ್ಟದ ಮಾನವ ಸಂಪನ್ಮೂಲ ವೃತ್ತಿ ನಿರಂತಕ ಕನ್ನಡ ಸಮ್ಮೇಳನವನ್ನು ಕಳೆದ 3 ಸಮ್ಮೇಳನಕ್ಕಿಂತಲೂ ವಿಭಿನ್ನವಾಗಿ ಬೆಂಗಳೂರಿನ ಯಶವಂತಪುರದ ತಾಜ್ ವಿವಾಂತ ಹೋಟಲ್ ಆವರಣದಲ್ಲಿ ಆಯೋಜಿಸಲಾಗಿತ್ತು.
ಬೆಂಗಳೂರಿನ ನಿರಾತಂಕ ಸಂಸ್ಥೆ 2017ರಿಂದ 2019ರ ಮಟ್ಟದ ಮಾನವ ಸಂಪನ್ಮೂಲ ವೃತ್ತಿ ನಿರಂತರ ಕನ್ನಡ ಸಮ್ಮೇಳನವನ್ನು 2017ರಲ್ಲಿ ಹೆಸರಾಂತ ಕನ್ನಡಾಭಿಮಾನಿ ಅತಿಥಿಗಳಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, 2018ರಲ್ಲಿ ಕ್ರಿಯೇಟಿವ್ ಅಕಾಡೆಮಿ ಅಧ್ಯಕ್ಷ ಡಾ.ಗುರುರಾಜ ಕರಜಗಿ, 2019ರಲ್ಲಿ ಜ್ಞಾನ ಪೀಠ ಪ್ರಶಸ್ತಿ ವಿಜೇತ ಡಾ.ಚಂದ್ರಶೇಖರ ಕಂಬಾರ ಅವರುಗಳ ಸಮ್ಮುಖದಲ್ಲಿ ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಆಯೋಜಿಸಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ್ದಾರೆ. ಕಳೆದ ಈ 3 ಸಮಾರಂಭದಲ್ಲಿ ನಿರಂತರವಾಗಿ ಮಾನವ ಸಂಪನ್ಮೂಲ ವೃತ್ತಿ ನಿರಂತರ ಕನ್ನಡ ಸೇವಕರನ್ನು/ಅಧಿಕಾರಿಗಳನ್ನು ಸನ್ಮಾನಿಸುತ್ತಾ ಬಂದಿದ್ದಾರೆ.
ಏನೆಲ್ಲಾ ಮಾಡಲಾಗುತ್ತಿದೆ?
ಈ ಸಂಸ್ಥೆ ಕನ್ನಡ ಬಳಸಿ, ಕಲಿಸಿ ಮತ್ತು ಉಳಿಸಿ ಕಾರ್ಯಕ್ರಮದಡಿಯಲ್ಲಿ, ಅನೇಕ ತನ್ನದೆಯಾದ ಉದ್ದೇಶವನ್ನು ಇಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿದೆ.
ಮಾನವ ಸಂಪನ್ಮೂಲ ವೃತ್ತಿ ನಿರತರ ಮೂಲಕ ಕನ್ನಡದ ಬಳಕೆ ಮತ್ತು ಕಲಿಕೆಯನ್ನು ಪ್ರೋತ್ಸಾಹಿಸುವುದು, ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಪಟ್ಟ ಸಾಹಿತ್ಯವನ್ನು ಕನ್ನಡದಲ್ಲಿ ಸೃಷ್ಠಿಸುವುದು, ಪ್ರಕಟಿಸುವುದು ಮತ್ತು ಬೆಳೆಸುವುದು.
ಯುವ ಮಾನವ ಸಮಪನ್ಮೂಲ ವೃತ್ತಿನಿರತರಿಗೆ, ಹಿರಿಯ ಮಾನವ ಸಂಪನ್ಮೂಲ ವೃತ್ತಿನಿರತರ ಸಹಕಾರದೊಂದಿಗೆ, ಅವಕಾಶಗಳನ್ನು ಕಲ್ಪಿಸುವುದು ಮತ್ತು ಪ್ರೋತ್ಸಾಹಿಸಿವುದು.
ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಸಾಧನೆಗೈದ ವೃತ್ತಿನಿರತರನ್ನು ಹಾಗೂ ಕನ್ನಡ ಬಳಕೆಯನ್ನು ಅನುಷ್ಠಾನ ಮಾಡುತ್ತಿರುವ ಸಂಸ್ಥೆಗಳನ್ನು ಗೌರವಿಸುವುದು.
ಭವಿಷ್ಯದ ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಮರುರೂಪಿಸುವಿಕೆಯ ಬಗ್ಗೆ ಅರಿವು ಮೂಡಿಸುವುದು.
ಪರಿವರ್ತನೆಯತ್ತ ಮಾನವ ಸಂಪನ್ಮೂಲ
ಇನ್ನು ಈಗ ನಾಲ್ಕನೆಯ ರಾಜ್ಯ ಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ ಆಯೋಜಿಸಲಾಗಿತ್ತು, ‘‘ಪರಿವರ್ತನೆಯತ್ತ ಮಾನವ ಸಂಪನ್ಮೂಲ’’ ಸಮ್ಮೇಳನದ ಕಾರ್ಯಕ್ರಮವನ್ನು ಬಿಸಿಪಿ ಅಸೋಸಿಯೇಟ್ಸ್ ಕರ್ನಾಟಕ ಮಾಲೀಕರ ಸಂಘದ ಅಧ್ಯಕ್ಷರು ಹಾಗೂ ವಕೀಲರಾದ ಬಿ.ಸಿ. ಪ್ರಭಾಕರ್, ಎನ್’ಐಪಿಎಂ ಕರ್ನಾಟಕ ಚಾಪ್ಟರ್ ಅಧ್ಯಕ್ಷ ಪಿ.ಆರ್. ಬಸವರಾಜ್, ನಿವೃತ್ತ ಕನ್ನಡ ಪ್ರಾಧ್ಯಾಪಕರು, ಪ್ರಖ್ಯಾತ ಹಾಸ್ಯ ಕಲಾವಿದ ಪ್ರೊ. ಕೃಷ್ಣೇಗೌಡ, ನಿರಾತಂಕ ಟ್ರಸ್ಟ್’ನ ಎಚ್. ಕುಸುಮಾ ಸೇರಿದಂತೆ ಹಲವರು ಉದ್ಘಾಟಿಸಿದರು.
ಮಾನವ ಸಂಪನ್ಮೂಲ ವಿಭಾಗದಲ್ಲಿ ಹೆಸರನ್ನು ಗಳಿಸಿರುವ ಕೊಪ್ಪಳ ತಾಲೂಕಿನ ಬೇವಿನಹಳ್ಳಿಯಲ್ಲಿ ಸ್ಥಾಪಿತವಾಗಿರುವ ಮೇ. ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷರು ಮತ್ತು ಕಾರ್ಖಾನೆಯ ವ್ಯವಸ್ಥಾಪಕರಾದ ಪಿ. ನಾರಾಯಣ ಅವರ ಸೇವಾವಧಿಯಲ್ಲಿ ಸಾಧನೆ ಮತ್ತು ಕನ್ನಡದ ಅನುಷ್ಠಾನಕ್ಕಾಗಿ ಮಾಡಿದ ಸಾಧನೆಯನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಶ್ರೀಯುತ ಪಿ. ನಾರಾಯಣ ಅವರು ಬಳ್ಳಾರಿ ಜಿಲ್ಲೆಯ ವೇಣಿ ವೀರಾಪುರದಲ್ಲಿ 1963 ರ ಅಕ್ಟೋಬರ್ 1ರಂದು ಜನಿಸಿದ್ದು, ಇವರು ಬಿಕಾಂ, ಎಲ್‌ಎಲ್’ಬಿ ಮುಗಿಸಿ ನಂತರ ಪಿಜಿ ಡಿಪ್ಲೊಮಾ ಮಾಡಿದ್ದಾರೆ.
1988ರಿಂದ ವೃತ್ತಿ ಜೀವನ ಪ್ರಾರಂಭಿಸಿ ಕರ್ನಾಟಕದ ಹೆಸರಾಂತ ಕಾರ್ಖಾನೆಗಳಾದ ಮೆ. ಬಳ್ಳಾರಿ ಸ್ಟೀಲ್ಸ್ ಅಂಡ್ ಅಲಾಯ್ಸ್ ಲಿಮಿಟೆಡ್ ಬಳ್ಳಾರಿ, ಮೆ. ಗ್ರಾಸಿಮಾ ಇಂಡಸ್ಟೀಸ್ ಲಿಮಿಟೆಡ್ ಹರಿಹರ, ಮೆ. ಜೆಎಸ್‌ಡಬ್ಲೂ ಸ್ಟೀಲ್ಸ್ ಲಿಮಿಟೆಡ್ ತೋರಣಗಲ್ಲು, ಬಳ್ಳಾರಿಯಲ್ಲಿ ಕಾರ್ಯ ನಿರ್ವಹಿಸಿ ಪ್ರಸ್ತುತ ಮೆ. ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ಹಿರಿಯ ಉಪಾಧ್ಯಕ್ಷರು ಮತ್ತು ಕಾರ್ಖಾನೆಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಇವರು ಅನೇಕ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅನೇಕ ಸಂಘ ಸಂಸ್ಥೆಯಲ್ಲಿ ಸದಸ್ಯರಾಗಿ ಮತ್ತು ಅಜೀವ ಸದಸ್ಯರಾಗಿ ಕಾರ್ಯ ನಿರ್ವಹಿಸಿ, ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ಅನೇಕ ಜನಪರ ಕಾರ್ಯಕ್ರಮಗಳನ್ನು ಸಮಾಜಕ್ಕೆ ಮತ್ತು ವೃತ್ತಿಯಲ್ಲಿ ಕನ್ನಡಕ್ಕೆ ಕೊಡುಗೆಯಾಗಿ ನೀಡಿ ಸಾಧನೆ ಮಾಡಿದ್ದಾರೆ. ವೃತ್ತಿಯಲ್ಲಿ ಉದ್ಯೋಗಿಗಳಿಗೆ ಮತ್ತು ಕಾರ್ಮಿಕ ವೃಂದಕ್ಕೆ ಅಭಿವೃದ್ದಿ ಕಾರ್ಯಗಳನ್ನು ಕಾರ್ಖಾನೆಗಳಲ್ಲಿ ಆಯೋಜಿಸಿ, ಅವರ ಜೀವನ ಸುಗಮವಾಗಿ ನಡೆಯುವಂತೆ ಸಹ ಮಾಡಿದ್ದಾರೆ.
ಮೇ. ಜಿಂದಾಲ್ ಕಾರ್ಖಾನೆಯ ಆಡಳಿತ ಅವಧಿಯಲ್ಲಿ ಇವರು ಆಡಳಿತ ವರ್ಗದ ಸಹಕಾರದೂಂದಿಗೆ 2006 ರಲ್ಲಿ 300 ಆಸನಗಳ ಒಪಿಜೆವನ್ನು ಸ್ಥಾಪಿಸಿದ್ದು, ಇದರಡಿಯಲ್ಲಿ ಸುತ್ತಮುತ್ತಲಿನ ಹಳ್ಳಿಯ ಜನರಿಗೆ ಅನುಕೂಲ, ಕೌಶಲ್ಯ ತರಬೇತಿಯನ್ನು ನೀಡಿ ಸಹಕಾರ ಮಾಡಿದ್ದಾರೆ. ಅದು ಇಂದಿಗೂ ನಿರಂತರವಾಗಿ ಮುಂದುವರೆದು ಬಂದಿದೆ.
ಜಿಂದಾಲ್ ಕಂಪನಿಯಲ್ಲಿ ಎನ್‌ಟಿಟಿಎಫ್ ಸಹಯೋಗದಿಂದ ತಾಂತ್ರಿಕ ತರಬೇತಿ ಕೇಂದ್ರ 36 ವಿದ್ಯಾರ್ಥಿಗಳಿಂದ ಸ್ಥಾಪನೆ ಮಾಡಿದ್ದಾರೆ. ಇದರಿಂದ ಸುಮಾರು 6000 ವಿದ್ಯಾರ್ಥಿಗಳು ಪ್ರಯೋಜನ ಪಡೆದು ಸದುಪಯೋಗವನ್ನು ಪಡೆದಿದ್ದಾರೆ.
ನ್ಯಾಷನಲ್ ಇನ್ಸಸ್ಟೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್ – ನಾರ್ಥ್ ಕರ್ನಾಟಕ ಘಟಕ (ಎನ್’ಐಪಿಎಂ) 2016 ರಿಂದ 2019ರತನಕ ಅಧ್ಯಕ್ಷರಾಗಿ ಅನೇಕ ಕಾರ್ಯಕ್ರಮಗಳನ್ನು ನೆಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಇವರ ಅಧಿಕಾರದ ಅವಧಿಯಲ್ಲಿ ಉತ್ತರ ಕರ್ನಾಟಕ ಭಾಗದ ಅಂದರೆ ಬಳ್ಳಾರಿ, ಬೆಳಗಾವಿ, ಧಾರವಾಡ, ಗದಗ್, ಗುಲಬರ್ಗಾ, ಹಾವೇರಿ, ಕೊಪ್ಪಳ, ಬೀದರ್, ರಾಯಚೂರು ಯಾದಗಿರಿ, ವಿಜಯಪುರ, ಬಾಗಲಕೋಟೆ, ಕಾರವಾರ ಮತ್ತು ದಾವಣಗರೆ ಜಿಲ್ಲೆಗಳ ಕಾರ್ಖಾನೆಗಳ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಮತ್ತು ಮುಖ್ಯಸ್ಥರು ಮತ್ತು ಕೊಪ್ಪಳ ಮತ್ತು ಬಳ್ಳಾರಿ ಭಾಗದ ಎಸಿಸಿ, ಜಿಂದಾಲ್, ಎಂಎಸ್‌ಪಿಎಲ್, ಕಲ್ಯಾಣಿ, ಕೆಪಿಸಿಎಲ್, ಬಿಟಿಪಿಎಸ್, ಅಲ್ಟ್ರಾಟೆಕ್ , ಎಂಎಸ್ ಮೆಟಲ್ಸ್ , ಬಿಎಂಎಂ, ಎಸ್’ಎಲ್’ಆರ್ ಹಾಗೂ ಇನ್ನಿತರ ಹೆಸರಾಂತ ಕಾರ್ಖಾನೆಗಳಿಂದ ಎಚ್‌ಆರ್’ಎಂ ವಿಭಾಗದ ಮುಖ್ಯಸ್ಥರು, ಅಧಿಕಾರಿಗಳು ಮತ್ತು ಪ್ರೌಢದೇವರಾಯ ಇಂಜಿನೀಯರಿಂಗ್ ಮತ್ತು ಬಳ್ಳಾರಿಯ ಬಿಐಟಿಎಂ ಕಾಲೇಜು ವಿದ್ಯಾರ್ಥಿಗಳು ಮತ್ತು ಅನೇಕ ಎಂಬಿಎ ವಿದ್ಯಾರ್ಥಿಗಳನ್ನು ಒಂದೇ ಸಮಾರಂಭದಲ್ಲಿ ಸೇರಿ ಕಾರ್ಯಕ್ರಮ ಅವರಿಗೆ ಅವರವರ ವೃತ್ತಿಗೆ ಬೇಕಾಗುವ ಅವಶ್ಯಕ ವಿಷಯಗಳ ಮೇಲೆ ಕಾರ್ಯಾಗಾರ ನಡೆಸಿ ಅದರ ಯಶಸ್ವಿಗೆ ಕಾರಣೀಭೂತರಾಗಿರುತ್ತಾರೆ.
ಈ ಸಮಾರಂಭದಲ್ಲಿ ನೆರೆರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ ರಾಜ್ಯಗಳಿಂದಲೂ ಸಹ ಹಿರಿಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳನ್ನು ಸೇರಿಸಿ ಭಾಂದವ್ಯ ವೃದ್ದಿಯಾಗಲು ಸಹಕಾರಿಯಾಗಿದ್ದಾರೆ.
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯ ಸಾಂಘಿಕ ಸಾಮಾಜಿಕ ಹೊಣೆಗಾರಿಕೆಯನ್ನು ಕ್ರಮಬದ್ಧವಾಗಿ ನಡೆಸಲು 2011 ರಲ್ಲಿ ಕಿರ್ಲೋಸ್ಕರ್ ಗ್ರಾಮೀಣಾಭಿವೃದ್ಧಿ ಟ್ರಸ್ಟನ್ನು ಸ್ಥಾಪಿಸಲಾಗಿದ್ದು, ಇದನ್ನು ಮುಂದುವರೆಸಿ ಪಿ. ನಾರಾಯಣ ಅವರು ಈ ಟ್ರಸ್ಟ್‌ನ ಮುಖಾಂತರ ಗ್ರಾಮದ ಮೂಲಭೂತ ಸೌಕರ್ಯ, ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ ಮೊದಲಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ.
ಪರಿಸರ ಪ್ರೇಮಿಗಳು, ಕನ್ನಡ ಅಭಿಮಾನಿಗಳು ಮತ್ತು ವಸುಂಧರಾ ಪ್ರೇಮಿ, ಗ್ರಾಮೀಣಜನರ ಬದುಕಿಗೆ ಸ್ಪಂದನ, ಗಣಿಧೂಳು ನಿಯಂತ್ರಣಕ್ಕೆ ಪರಿಣಾಕಾರಿ ಪರಿಸ್ಥಿತಿ ನಿರ್ಮಾಣ, ಎಸ್’ವಿ ಫೌಂಡೇಶನ್ ಸಂಪ್ಥಾಪನೆ ಮಾಡಿ ಸಾಕಷ್ಟು ವೈದ್ಯಕೀಯ ಶಿಬಿರಗಳು, ಮಧ್ಯಪಾನ ವ್ಯಸನ ಮುಕ್ತ ಶಿಬಿರಗಳು, ಕ್ಯಾನ್ಸರ್ ತಪಾಸಣಾ ಶಿಬಿರ, ಕಾರ್ಮಿಕರ ಭವಿಷ್ಯ ನಿಧಿ ಮತ್ತು ವಿಮಾ ಚಿಕಿತ್ಸಾ ಸೌಲಭ್ಯಗಳ ಕುರಿತು ಶಿಬಿರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರಿಗೆ ಮತ್ತು ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿಗಳನ್ನು, ಶಿಬಿರಗಳನ್ನು ಆಯೋಜಿಸಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಇನ್ನೂ ಅನೇಕ ಸಾಧಕರಿಗೆ ಸನ್ಮಾನಿಸಲಾಯಿತು. ಸನ್ಮಾನಿತ ಶ್ರೀ ಪಿ. ನಾರಾಯಣ ಅವರ ಅತ್ಯುತ್ತಮ ವೃತ್ತಿಪರ, ಸಾಮಾಜಿಕ ಸೇವೆಗೆ ಕಲ್ಪ ಮೀಡಿಯಾ ಹೌಸ್ ಅಭಿನಂದನೆಯನ್ನು ಸಲ್ಲಿಸುತ್ತದೆ.
ವರದಿ: ಮುರಳೀಧರ್ ನಾಡಿಗೇರ್, ಕೊಪ್ಪಳ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post