ಕಲ್ಪ ಮೀಡಿಯಾ ಹೌಸ್
ಕೊಪ್ಪಳ: ಗವಿಸಿದ್ದೇಶ್ವರ ಮಠದ ನೆರವಿನಿಂದ ಪ್ರಾರಂಭವಾಗಿರುವ ನೂರು ಹಾಸಿಗೆಯ ಕೊವೀಡ್ ಆಸ್ಪತ್ರೆಗೆ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ವತಿಯಿಂದ 100 ಎಂಎ ಪೋರ್ಟಬಲ್ ಡಿಜಿಟಲ್ ಎಕ್ಸ್-ರೇ ಯಂತ್ರವನ್ನು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಆರ್.ವಿ. ಗುಮಾಸ್ತೆ ಆಸ್ಪತ್ರೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
ಈ ಯಂತ್ರದಿಂದ ಕೊವೀಡ್ ಲಕ್ಷಣವಿರುವ ರೋಗಿಯ ರೋಗಲಕ್ಷಣದ ಜೊತೆಗೆ ಶ್ವಾಸಕೋಶದಲ್ಲಿ ಇರುವ ಸಮಸ್ಯೆಯನ್ನು ಸಹ ಪತ್ತೆಹಚ್ಚಬಹುದು. ಹಾಗೂ ಅಗತ್ಯವಿದ್ದರೆ ಇದರಿಂದ ಸಿಟಿ ಸ್ಕ್ಯಾನ್ ಮಾಡಿಸಲು ಸಹ ಬಳಸಬಹುದು.
ಈ ಸಂದರ್ಭದಲ್ಲಿ ಕಾರ್ಖಾನೆಯ ಹಿರಿಯ ವೈದ್ಯಕೀಯ ಅಧಿಕಾರಿ ಡಾ.ಪ್ರವೀಣ್ ಕುಮಾರ್ ಮತ್ತು ಕಿರ್ಲೋಸ್ಕರ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ ಉದವ್ ಕುಲಕರ್ಣಿ ಉಪಸ್ಥಿತರಿದ್ದರು.
ವರದಿ: ಮುರುಳಿಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post