ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಶಾಲಾ ಮಕ್ಕಳಿದ್ದ ರಾಜ್ಯ ಸಾರಿಗೆ ಬಸ್ ಪಲ್ಟಿಯಾಗಿರುವ #Bus Accident ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಬಳಿ ನಡೆದಿದೆ.
ಹಂಪಿ ಪ್ರವಾಸಕ್ಕೆ ತೆರಳಿದ್ದ ಕಲ್ಬುರ್ಗಿ ಜಿಲ್ಲೆಯ ಗುರುಮಿಟ್ಕಲ್ ನ ಶಾಲಾ ಮಕ್ಕಳಿದ್ದ ಸಾರಿಗೆ ಬಸ್ ಇಂದು ಬೆಳಗ್ಗೆ 4:30ರ ಸುಮಾರಿಗೆ ಗಂಗಾವತಿಯ ಮರಳಿ ಸಮೀಪ ರಸ್ತೆ ಬದಿಯ ಹೊಲಕ್ಕೆ ಉರುಳಿದೆ. ಆದರೆ ಅದೃಷ್ಟವಶಾತ್ ಬಸ್‌ನಲ್ಲಿದ್ದ ಎಲ್ಲಾ ಮಕ್ಕಳು ಕೂಡ ಸುರಕ್ಷಿತವಾಗಿದ್ದಾರೆ.
Also read: ದೆಹಲಿ | ಪ್ರಶಾಂತ್ ವಿಹಾರ್ ಪ್ರದೇಶದ ಪಿವಿಆರ್ ಬಳಿಯಲ್ಲಿ ಸ್ಪೋಟ | ಘಟನೆ ನಡೆದಿದ್ದು ಹೇಗೆ?
ಬಸ್‌ನಲ್ಲಿ 60 ಮಕ್ಕಳು ಪ್ರಯಾಣಿಸುತ್ತಿದ್ದು, ಓರ್ವ ವಿದ್ಯಾರ್ಥಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಶಾಲಾ ಮಕ್ಕಳು ಬುಧವಾರ ರಾತ್ರಿ ಪ್ರವಾಸ ಹೊರಟಿದ್ದರು. ಬೆಳಗ್ಗೆ ಮರಳಿ ಸಮೀಪ ಪೇಪರ್ ಸಾಗಿಸುವ ವಾಹನ ರಸ್ತೆ ಮಧ್ಯೆ ಎದುರಾಗಿದೆ. ಚಾಲಕ ಅಪಘಾತ ತಪ್ಪಿಸಲು ಹೋಗಿದ್ದರಿಂದ ನಿಯಂತ್ರಣ ಕಳೆದುಕೊಂಡ ಬಸ್ ಅಪಘಾತಕ್ಕೀಡಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post