ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಮೇ ಡೇ ಕಾರ್ಮಿಕ ದಿನಾಚರಣೆ ಅಂಗವಾಗಿ ಇಂದು ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ Kirloskar Ferus Industries Ltd ಕಾರ್ಖಾನೆಯ ಉದ್ಯೋಗಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ಕಾರ್ಖಾನೆಯನ್ನು ಸಂದರ್ಶಿಸಲು ಇಂದು ಆಡಳಿತ ಮಂಡಳಿ ಅನುವು ಮಾಡಿಕೊಟ್ಟಿದ್ದು, ಇಂದು ಬೆಳಿಗ್ಗೆ 7:30ರಿಂದ ಮಧ್ಯಾಹ್ನ 1:30ರ ತನಕ ಕಾರ್ಖಾನೆಯ ವಿವಿಧ ವಿಭಾಗಗಳನ್ನು ಸಂದರ್ಶಿಸಲು ಅವಕಾಶ ನೀಡಲಾಗಿತ್ತು.
ಕೊಪ್ಪಳ ಹೊಸಪೇಟೆ ಹಾಗೂ ಇನ್ನಿತರ ಭಾಗಗಳಿಂದ ಕಾರ್ಖಾನೆಯ ಉದ್ಯೋಗಿಗಳು ತಮ್ಮ ಕುಟುಂಬದ ಸದಸ್ಯರುಗಳನ್ನು ಕರೆದುಕೊಂಡು ಬಂದು, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಾರ್ಖಾನೆಯನ್ನು ವೀಕ್ಷಣೆ ಮಾಡಿ ಸಂತಸ ವ್ಯಕ್ತಪಡಿಸಿದರು.
ಕಾರ್ಖಾನೆಯ ವೀಕ್ಷಿಸಲು ತೊಂದರೆಯಾಗದಂತೆ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಆಡಳಿತ ಮಂಡಳಿಯು, ತಂಪು ಪಾನೀಯ, ಸಾರಿಗೆ ವ್ಯವಸ್ಥೆ ಮತ್ತು ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಖಾನೆಯ ಸಂದರ್ಶನವನ್ನು ವಿವಿಧ ವಿಭಾಗದ ಉದ್ಯೋಗಿಗಳ ಸ್ವಯಂ ಸೇವಕರ ಸಹಕಾರದೊಂದಿಗೆ ವೀಕ್ಷಣೆಯನ್ನು ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಕಾರ್ಖಾನೆಯ ಒಳಭಾಗದಲ್ಲಿ ಪ್ರತ್ಯೇಕವಾಗಿ ಶಾಮಿಯಾನ ಹಾಕಿ ಉದ್ಯೋಗಿಯ ಕುಟುಂಬದ ಸದಸ್ಯರು ವಿಶ್ರಾಂತಿ ತೆಗೆದುಕೊಳ್ಳಲು ಅವಕಾಶ ಮಾಡಲಾಗಿತ್ತು.
ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಪಿ. ನಾರಾಯಣ್ ಹಾಗೂ ಕಾರ್ಖಾನೆಯ ಪ್ರೆಸಿಡೆಂಟ್ ಸಿ. ರಮೇಶ ಅವರು ಈ ಸಂದರ್ಭದಲ್ಲಿ ಹಾಜರಿದ್ದು ಎಲ್ಲಾ ಉದ್ಯೋಗಿಗಳಿಗೆ ಕಾರ್ಮಿಕ ದಿನಾಚರಣೆಯ ಶುಭಾಶಯಗಳು ಕೋರಿದರು.
ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತ ವಿಭಾಗದ ಎಲ್ಲಾ ಉದ್ಯೋಗಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ಒಟ್ಟಾರೆ 2009ರಲ್ಲಿ ನಡೆದಂತಹ ಈ ಕಾರ್ಖಾನೆಯ ಸಂದರ್ಶನ ಮತ್ತೆ ಮರು ಕಳಿಸಿ ಈ ವರ್ಷ ಪ್ರಾರಂಭ ಮಾಡಿದ್ದಕ್ಕೆ ಕಾರ್ಮಿಕ ಸಂಘದ ಪ್ರದಾನ ಕಾರ್ಯದರ್ಶಿ ವಿಜಯ ಭಾಸ್ಕರ್ ರೆಡ್ಡಿ ಅವರು ಹರ್ಷವನ್ನ ವ್ಯಕ್ತಪಡಿಸುವುದರ ಮೂಲಕ ಆಡಳಿತ ಮಂಡಳಿಯ ಸದಸ್ಯರಿಗೆ ಧನ್ಯವಾದವನ್ನು ತಿಳಿಸಿದರು.
ಇಂದಿನ ಈ ಕಾರ್ಖಾನೆ ವೀಕ್ಷಣೆಗಾಗಿ ಸುಮಾರು 1000ಕ್ಕೂ ಹೆಚ್ಚು ಉದ್ಯೋಗಿ ಸದಸ್ಯರು ಭಾಗವಹಿಸಿ ಸಂತಸವನ್ನು ಹಂಚಿಕೊಂಡರು.
ವರದಿ: ಮುರುಳಿಧರ್ ನಾಡಿಗೇರ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post