ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಸ್ವಚ್ಛತಾ ಹಿ ಸೇವಾ ಅಭಿಯಾನಕ್ಕೆ ಬೆಂಗಳೂರು ಕೆಎಸ್’ಆರ್ ರೈಲ್ವೆ ನಿಲ್ದಾಣ ಹಾಗೂ ಯಶವಂತಪುರ ನಿಲ್ದಾಣಗಳಲ್ಲಿ ಚಾಲನೆ ನೀಡಲಾಗಿದ್ದು, ಅಭಿಯಾನ ಅಕ್ಟೋಬರ್ 2ರವರೆಗೂ ಮುಂದುವರೆಯಲಿದೆ.
ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದಲ್ಲಿ ಇಂದು ಸ್ವಚ್ಛತಾ ಹಿ ಸೇವಾ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಬೆಂಗಳೂರು ವಿಭಾಗದಾದ್ಯಂತ ಮುಂದುವರೆಯಲಿದೆ.
ಬೆಂಗಳೂರಿನ ವಿಭಾಗೀಯ ಕಚೇರಿಯಲ್ಲಿ ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪ್ರವೀಣ್ ಕಾತರಕಿ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸ್ವಚ್ಛತಾ ಪ್ರತಿಜ್ಞೆಯನ್ನು ಬೋಧಿಸಿದರು.
ಹಿರಿಯ ವಿಭಾಗೀಯ ಸಿಬ್ಬಂದಿ ಅಧಿಕಾರಿ ಉಮಾ ಶರ್ಮಾ, ಹಿರಿಯ ವಿಭಾಗೀಯ ಪರಿಚಾಲನಾ ವ್ಯವಸ್ಥಾಪಕಿ ಸುಶ್ರೀ ಪ್ರಿಯಾ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕೆಎಸ್’ಆರ್ ಬೆಂಗಳೂರು ಮತ್ತು ಯಶವಂತಪುರ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿಯೂ ಕಾರ್ಯಕ್ರಮ ನಡೆಯಿತು.
ಕೆಎಸ್’ಆರ್ ಬೆಂಗಳೂರಿನಲ್ಲಿ, ಹಿರಿಯ ಕೋಚಿಂಗ್ ಡಿಪೋ ಅಧಿಕಾರಿ ರಾವ್ ಉತ್ಸವ ದೀಪಕ್ ಭಾಯ್ ಅವರು ಅಲ್ಲಿ ನೆರೆದಿದ್ದ, ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಸ್ವಚ್ಛತಾ ಪ್ರತಿಜ್ಞೆಯನ್ನು ಬೋಧಿಸಿದರು.
ಯಶವಂತಪುರ ನಿಲ್ದಾಣದಲ್ಲಿ, ಹಿರಿಯ ಕೋಚಿಂಗ್ ಡಿಪೋ ಅಧಿಕಾರಿ ಧರ್ಮೇಂದ್ರ ಸೀರ್ವಿ ಅವರು ಸ್ವಚ್ಛತಾ ಪ್ರತಿಜ್ಞೆಯನ್ನು ಬೋಧಿಸಿದರು.
ರೈಲ್ವೆ ಸಿಬ್ಬಂದಿ, ಹೌಸ್ ಕೀಪಿಂಗ್ ತಂಡಗಳು ಮತ್ತು ಮೇಲ್ವಿಚಾರಕರು ಸಕ್ರಿಯವಾಗಿ ಅಭಿಯಾನದಲ್ಲಿ ಭಾಗವಹಿಸಿದರು. ರ‍್ಯಾಲಿಗಳು, ಕರಪತ್ರ ವಿತರಣೆ 
ಮತ್ತು ನಿಲ್ದಾಣದ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ನಡೆಸಲಾಯಿತು. ಪ್ರತಿಜ್ಞೆಯ ನಂತರ, ನಿಲ್ದಾಣದ ಆವರಣದಲ್ಲಿ ಸ್ವಚ್ಛತಾ ಶ್ರಮದಾನವನ್ನು ನಡೆಸಲಾಯಿತು.
ಏನೆಲ್ಲಾ ಚಟುವಟಿಕೆಗಳು ನಡೆಯಲಿವೆ?
ಸ್ವಚ್ಛತಾ ಹೀ ಸೇವಾ ಅಭಿಯಾನದ ಭಾಗವಾಗಿ, ಬೆಂಗಳೂರು ವಿಭಾಗವು ವಿವಿಧ ಚಟುವಟಿಕೆಗಳನ್ನು ಆಯೋಜಿಸುತ್ತಿದೆ.
ನಿಲ್ದಾಣಗಳು, ರೈಲುಗಳು, ಕಚೇರಿಗಳು ಮತ್ತು ಹಳಿಗಳಲ್ಲಿ ಸಾಮೂಹಿಕ ಸ್ವಚ್ಛತಾ ಅಭಿಯಾನಗಳು, ಸ್ವಚ್ಛತಾ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣೆ ಮತ್ತು ಸಿಬ್ಬಂದಿ ಕಲ್ಯಾಣ ಯೋಜನೆಗಳ ಮಾಹಿತಿ ನೀಡಲು ಸಫಾಯಿ ಮಿತ್ರ ಸುರಕ್ಷಾ ಶಿಬಿರಗಳು, ಏಕ-ಬಳಕೆಯ ಪ್ಲಾಸ್ಟಿಕ್ ನ ಅಪಾಯಗಳ ಕುರಿತು ಜಾಗೃತಿ ಮತ್ತು ಪರಿಸರ ಸ್ನೇಹಿ ಪರ್ಯಾಯಗಳ ಬಳಕೆಗೆ ಉತ್ತೇಜನ, ಗಿಡ ನೆಡುವಿಕೆ ಅಭಿಯಾನಗಳು ಮತ್ತು ಇತರ ಸುಸ್ಥಿರತೆಯ ಉಪಕ್ರಮಗಳನ್ನು ಒಳಗೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















