No Result
View All Result
swr vigilance awareness campaign 2026 hubballi dharwad
English Articles

SWR Vigilance Dept Organizes Inter-School Competitions to Promote Integrity & Ethical Values

by kalpa News
September 24, 2026
0

Kalpa Media House  |  Hubballi | The Vigilance Department of South Western Railway (SWR) organized a series of inter-school competitions...

Read moreDetails
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
  • Advertise With Us
  • Grievances
  • About Us
  • Contact Us
Friday, September 25, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಕುತೂಹಲ ಮೂಡಿಸಿದೆ ಶಿವಮೊಗ್ಗದ ಪ್ರತಿಭೆಗಳೂ ನಟಿಸಿರುವ ‘ಮಾಲ್ಗುಡಿ ಡೇಸ್’ ಚಿತ್ರ

ವಿಜಯ್ ರಾಘವೇಂದ್ರ ಅವರ ಮೇಕಪ್, ನಟನೆ ಕಣ್ತುಂಬಿಕೊಳ್ಳಲು ಈ ಚಿತ್ರ ನೀವು ನೋಡಲೇಬೇಕು : ಟೀಸರ್’ಗೆ ಸಿನಿರಸಿಕರು ಫಿದಾ

kalpa News by kalpa News
January 14, 2020
in ಶಿವಮೊಗ್ಗ, ಸಿನೆಮಾ
0
ಕುತೂಹಲ ಮೂಡಿಸಿದೆ ಶಿವಮೊಗ್ಗದ ಪ್ರತಿಭೆಗಳೂ ನಟಿಸಿರುವ ‘ಮಾಲ್ಗುಡಿ ಡೇಸ್’ ಚಿತ್ರ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

‘ಮಾಲ್ಗುಡಿ ಡೇಸ್’ ಹೆಸರು ಕೇಳಿದಾಕ್ಷಣ ಆರ್.ಕೆ. ನಾರಾಯಣ್ ರವರ ಕಥೆಯಾಧಾರಿತ ಶಂಕರ್ ನಾಗ್ ರವರು ನಿರ್ದೇಶಿಸಿದ ಎಂಬತ್ತರ ದಶಕದ ಧಾರಾವಾಹಿ ನೆನಪಾಗುವುದು ಸಹಜವೇ! ಬಹುತೇಕರ ಬಾಲ್ಯದ ನೆನಪುಗಳು ಈ ಧಾರಾವಾಹಿಯೊಂದಿಗೆ ಅಡಕವಾಗಿವೆ ಎಂದರೂ ತಪ್ಪಾಗಲಾರದು. ಇದೀಗ ಮಾಲ್ಗುಡಿ ಡೇಸ್ ಶೀರ್ಷಿಕೆಯಡಿಯಲ್ಲಿ ಚಿತ್ರವೊಂದು ತಯಾರಾಗಿ ಬಿಡುಗಡೆಗೆ ಸಿದ್ದವಾಗಿದೆ. ಈ ಹಿಂದೆ ಅಪ್ಪೆ ಟೀಚರ್ ಎಂಬ ಯಶಸ್ವಿ ತುಳು ಚಿತ್ರವನ್ನು ನಿರ್ದೇಶಿಸಿದ ನಿರ್ದೇಶಕ ಕಿಶೋರ್ ಮೂಡುಬಿದ್ರೆ ಅವರು ಕನ್ನಡ ಭಾಷೆಯಲ್ಲಿ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿದ್ದಾರೆ.

ಮಾಲ್ಗುಡಿ ಡೇಸ್ ಧಾರಾವಾಹಿಗೂ, ಮಾಲ್ಗುಡಿ ಡೇಸ್ ಚಿತ್ರದ ಕಥೆಗೂ ಯಾವುದೇ ಸಂಬಂಧವಿಲ್ಲ. ಇದು ಕಾಲ್ಪನಿಕ ಊರಿನಲ್ಲಿ ನಡೆಯುವ ಕಥೆ ಎಂದು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಒಳ್ಳೆಯ ಕಥಾಹಂದರ, ಅನುಭವಿ ನಿರ್ದೇಶಕರು ಜೊತೆಗೆ ಉತ್ತಮ ‘ಪಾತ್ರಧಾರಿಯ’ ಇರುವಿಕೆ ಚಿತ್ರವನ್ನು ಯಶಸ್ಸಿನ ದ್ವಾರದತ್ತ ಕೊಂಡೊಯ್ಯಲು ಅತ್ಯವಶ್ಯಕ.

ಈ ಮಾಲ್ಗುಡಿಯ ಅಮೂಲ್ಯ ಚೇತನವೇ ಕರ್ನಾಟಕದ ಚಿನ್ನಾರಿಮುತ್ತ ವಿಜಯ ರಾಘವೇಂದ್ರ. ವಿಭಿನ್ನ, ವಿನೂತನ ಪಾತ್ರಗಳಿಗೆ ತಮ್ಮನ್ನು ತಾವು ತೆರೆದುಕೊಳ್ಳುವ ವಿಜಯ ರಾಘವೇಂದ್ರರವರ ವೃತ್ತಿ ಬದುಕಿನಲ್ಲಿ ಇದೊಂದು ವಿನೂತನ ಪ್ರಯತ್ನವಾಗಲಿದೆ. ಸಿನಿಮಾ ಮಾತ್ರವಲ್ಲದೆ ತಮ್ಮ ಉತ್ತಮ ಕಂಠ, ಸೌಮ್ಯತೆ ಹಾಗೂ ಝೀ ವಾಹಿನಿಯ ರಿಯಾಲಿಟಿ ಶೋಗಳ ಮುಖೇನ ವಿಜಯ ರಾಘವೇಂದ್ರರವರು ಪ್ರೇಕ್ಷಕರಿಗೆ ಮತ್ತಷ್ಟು ಪ್ರಿಯವಾಗಿದ್ದಾರೆ.


ಈ ಹಿಂದೆ ನವರಸನಾಯಕ ಜಗ್ಗೇಶ್ ರವರು ಚಿತ್ರದ ಫಸ್ಟ್‌’ಲುಕ್ ಬಿಡುಗಡೆ ಮಾಡುವುದರರೊಂದಿಗೆ, ‘ಮಾಲ್ಗುಡಿ ಡೇಸ್’ ಚಿತವೂ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳಲಿ ಎಂದು ಶುಭ ಹಾರೈಸಿದ್ದರು. ಚಿತ್ರದ ಮೊದಲ ಪೋಸ್ಟರ್’ನಲ್ಲಿಯೇ ವಿಜಯ ರಾಘವೇಂದ್ರರವರ 60 ವರ್ಷ ದಾಟಿದ ವಯೋವೃದ್ಧರ ವಿಭಿನ್ನ ಗೆಟ್ಟಪ್ಪನ್ನು ಕಂಡು ಪ್ರೇಕ್ಷಕರ ಕುತೂಹಲಕ್ಕೆ ರೆಕ್ಕೆ ಬಂದಂತಾಗಿತ್ತು. ಈ ವಿಭಿನ್ನ ಗೆಟಪ್’ನ ಹಿಂದೆ ಪ್ರೋಸ್ಥೆಟಿಕ್ ಮೆಕ್ ಅಪ್ ಆರ್ಟಿಸ್ಟ್‌ ’ರೋಷನ್’ ಅವರ ಕ್ರಿಯಾಶೀಲ ಕೈಗಳ ಜಾದುವಿದೆ. ಈ ವಿನೂತನ ಗೆಟ್ಟಪ್ಪಿಗೆಂದೇ ವಿಜಯ್ ಅವರು ಸತತ ಮೂರರಿಂದ ನಾಲ್ಕು ಗಂಟೆಗಳ ಕಾಲ ಪ್ರತಿನಿತ್ಯ ಮೇಕಪಲ್ಲಿ ತೊಡಗುತ್ತಿದ್ದರಂತೆ, ಈ ವಿಶೇಷವಾದ ಮೇಕಪ್ ಅನ್ನು ನಿರ್ದೇಶಕರಾದ ಕಿಶೋರ್ ಮೂಡುಬಿದ್ರೆಯವರು ಮೊದಲು ತಮ್ಮ ಮೇಲೇ ಪ್ರಯೋಗಿಸಿಕೊಂಡು ಏನೂ ತೊಂದರೆಗಳಿಲ್ಲ ಎಂದು ಖಚಿತಪಡಿಸಿಕೊಂಡದ್ದು ಪ್ರಶಂಸಾರ್ಹ ಸಂಗತಿ.

ಇನ್ನು ಮೊನ್ನೆ ಮೊನ್ನೆಯಷ್ಟೇ ಹ್ಯಾಟಿಕ್ ಹೀರೋ ‘ಡಾ. ಶಿವರಾಜ್ ಕುಮಾರ್’ರವರು ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದು, ಇದೀಗ ಟೀಸರ್ ಯುಟ್ಯೂಬ್, ಹಲೋ, ಶೇರ್ ಚಾಟ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಜನರ ಮನಸ್ಸು ಗೆಲ್ಲುವುದರೊಂದಿಗೆ ಸಾಕಷ್ಟು ಪ್ರಶಂಸೆಗೆ ಪಾತ್ರವಾಗುತ್ತಿದೆ. ಟೀಸರ್’ನಲ್ಲಿರುವ ವಿಜಯ ರಾಘವೇಂದ್ರರವರ ವಿನೂತನ ಗೆಟ್ಟಪ್ ಗೆ ಪೂರಕವಾಗಿ ಅತ್ಯುತ್ತಮ ಹಿನ್ನೆಲೆ ಸಂಗೀತ ನೀಡಿರುವುದು ಗಗನ್ ಬಡೇರಿಯರವರು.ಇನ್ನು ಚಿತ್ರದಲ್ಲಿನ ’ಉದಯ್ ಲೀಲಾ’ರವರ ಕ್ಯಾಮೆರಾ ಕರಾಮತ್ತು ಟೀಸರ್’ನಿಂದಲೇ ಊಹಿಸಬಹುದಾಗಿದೆ. ಬೆಂಗಳೂರು, ಪಾಂಡಿಚೇರಿ, ತೀರ್ಥಹಳ್ಳಿ, ಆಗುಂಬೆ ಸೇರಿದಂತೆ ಇನ್ನೂ ಹಲವೆಡೆ ಮಾಲ್ಗುಡಿ ಡೇಸ್ ಚಿತ್ರೀಕರಿಸಲಾಗಿದೆ. ಚಿತ್ರದ ನಾಯಕಿ ಪಾತ್ರದಲ್ಲಿ ಗ್ರೀಷ್ಮಾ ಶ್ರೀಧರ್ ಕಾಣಿಸಿಕೊಳ್ಳಲಿದ್ದಾರೆ ಮತ್ತು ತಾರಾಗಣದಲ್ಲಿ ಧನರಾಜ್, ತೇಜು ಉತ್ತಪ್ಪ, ವಿದ್ಯಾ ಮೂರ್ತಿ, ರಿಚರ್ಡ್ ಲೂಯಿಸ್, ಶಿವಮೊಗ್ಗದ ಕಲಾತರಂಗ ಸಂಸ್ಥೆಯ ಅನೇಕ ಕಲಾವಿದರು ಹಾಗೂ ತೀರ್ಥಹಳ್ಳಿಯ ಸುತ್ತಮುತ್ತಲಿನ ಕಲಾವಿದರು ಸೇರಿದಂತೆ ಇನ್ನೂ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ.

ಚಿತ್ರಕ್ಕೆ ಶಿಲ್ಪಾ ಹೆಗ್ಡೆ ಹಾಗೂ ರೋಷನ್ ಅಯ್ಯಪ್ಪರವರ ವಸ್ತ್ರ ವಿನ್ಯಾಸವಿದೆ, ಕಿಶೋರ್ ಮೂಡುಬಿದ್ರೆ ಅವರೊಂದಿಗೆ ಶಶಾಂಕ ನಾರಾಯಣ, ಸಾತ್ವಿಕ್ ಹೆಬ್ಬಾರ್, ಕರುಣಾಕರ್, ಸಂದೀಪ ಸೇರಿದಂತೆ ಅನೇಕ ಯುವಕರು ನಿರ್ದೇಶನ ತಂಡದಲ್ಲಿದ್ದರೆ, ಇಡೀ ತಂಡವನ್ನು ಮುನ್ನಡೆಸುವ ಹೊಣೆ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ರವಿಶಂಕರ್ ಪೈ ಹೊತ್ತಿದ್ದು, ಒಟ್ಟಾರೆಯಾಗಿ ತಂಡದ ಶ್ರಮದ ಫಲವಾಗಿ ಇದೀಗ ಸಿನೆಮಾಗೆ ಒಂದು ರೂಪ ದೊರೆತು, ಪ್ರೇಕ್ಷಕರ ಮನಮುಟ್ಟಲು ತಯಾರಾಗಿದೆ. ಅನೇಕ ಅನುಭವಿ ತಂತ್ರಜ್ಞರು ಕಾರ್ಯನಿರ್ವಹಿಸಿರುವ ಮಾಲ್ಗುಡಿ ಡೇಸ್ ಚಿತ್ರವನ್ನು ‘ರತ್ನಾಕರ್ ಕಾಮತ್ ಅವರು ನಿರ್ಮಿಸಿದ್ದಾರೆ. ಭಾವನಾತ್ಮಕ ಜೀವಿಯೊಬ್ಬರ ಸುತ್ತಲು ನಡೆಯುವ ಕಥೆಯನ್ನು ಹೆಣೆಯುವುದರ ಮೂಲಕ ನಿರ್ದೇಶಕ ಕಿಶೋರ್ ಮೂಡುಬಿದ್ರಿರವರು ಮೊದಲ ಬಾಲ್’ನಲ್ಲೇ ಸಿಕ್ಸರ್ ಹೊಡೆಯುವ ಎಲ್ಲಾ ಸಾಧ್ಯತೆಗಳು ಗೋಚರವಾಗುತ್ತಿವೆ.

ಚಿತ್ರದ ಹಾಡುಗಳು ಪಿಆರ್’ಕೆ ಆಡಿಯೋದಲ್ಲಿ ಹೊರಹೊಮ್ಮಲಿದ್ದು ಮುಂಬರುವ ಫೆಬ್ರವರಿ 7ರಂದು ಕರ್ನಾಟಕ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

ಲೇಖನ: ಸುಮುಖ
ಪತ್ರಿಕೋದ್ಯಮ ವಿದ್ಯಾರ್ಥಿ
ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ

Get in Touch With Us info@kalpa.news Whatsapp: 9481252093

Tags: Actor JaggeshActor Vijay RaghavendraChandanavanaKalatarangaKannada MoviesKannada News WebsiteMalgudi Days MoviesandalwoodShivamoggaTeaserಕನ್ನಡ ಚಿತ್ರಕಲಾತರಂಗ ಪರ್ಫಾರ್ಮಿಂಗ್ ಆರ್ಟ್ಸ್ಮಾಲ್ಗುಡಿ ಡೇಸ್ವಿಜಯ್ ರಾಘವೇಂದ್ರಶಿವಮೊಗ್ಗ
Share228Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷ ನಡ್ಡಾ ನೇತೃತ್ವದಲ್ಲಿ ‘ಸರ್ವಂ ಕೇಸರಿಮಯಂ’ ನಿಶ್ಚಿತ

Next Post

ಭಾರತ ಅರಿತಿದೆ: ಸಿಎಎ ಕುರಿತು ತಪ್ಪು ಸಂದೇಶ ರವಾನೆಯ ಕುತಂತ್ರ ತುಂಬಾ ದಿನ ನಡೆಯುವುದಿಲ್ಲ ನೆನಪಿಡಿ

kalpa News

kalpa News

Next Post
ಭಾರತ ಅರಿತಿದೆ: ಸಿಎಎ ಕುರಿತು ತಪ್ಪು ಸಂದೇಶ ರವಾನೆಯ ಕುತಂತ್ರ ತುಂಬಾ ದಿನ ನಡೆಯುವುದಿಲ್ಲ ನೆನಪಿಡಿ

ಭಾರತ ಅರಿತಿದೆ: ಸಿಎಎ ಕುರಿತು ತಪ್ಪು ಸಂದೇಶ ರವಾನೆಯ ಕುತಂತ್ರ ತುಂಬಾ ದಿನ ನಡೆಯುವುದಿಲ್ಲ ನೆನಪಿಡಿ

Leave a Reply Cancel reply

Your email address will not be published. Required fields are marked *

No Result
View All Result
swr vigilance awareness campaign 2026 hubballi dharwad
English Articles

SWR Vigilance Dept Organizes Inter-School Competitions to Promote Integrity & Ethical Values

by kalpa News
September 24, 2026
0

Kalpa Media House  |  Hubballi | The Vigilance Department of South Western Railway (SWR) organized a series of inter-school competitions...

Read moreDetails
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
Hubballi railway Station Swacchata Pakhwada

Hubballi Division : Swachhata Hi Seva and Swachhata Pakhwada–2026 Launched in

September 18, 2026
swr mysuru division swacchata hi seva 2026 campaign

SWR : Mysuru Division Launches Swachhata Hi Seva 2026 Campaign

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL