ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಉತ್ತರ ನಕ್ಷತ್ರ, ಕನ್ಯಾರಾಶಿಯಲ್ಲಿ ಹುಟ್ಟಿದವರು ಇವರು. ಬಹಳ ಶಿಸ್ತಿನ ಮನುಷ್ಯನೂ, ಅವಸರದ ಸ್ವಭಾವದವರೂ ಆಗಿರುವವರು. ಅಲ್ಲದೇ ಪ್ರಾಮಾಣಿಕರೂ, ಕರ್ಮ ಶ್ರದ್ಧೆಯುಳ್ಳವರೂ ಆಗಿರುವವರು ಇವರಿಗೆ ಸದ್ಯ ಶನಿದಶೆ ನಡೆಯುತ್ತಿದೆ. ಇದರಲ್ಲಿ ಈಗ ಶುಕ್ರ ಭುಕ್ತಿ ನಡೆಯುವುದು. 23ನೆಯ ಇಸವಿಯ ವರೆಗೆ ಶುಕ್ರ ಭುಕ್ತಿ ಇದೆ.
ಒಂದು ಪಕ್ಷದ ಅಧ್ಯಕ್ಷ ಎಂದರೆ ಯಜಮಾನಿಕೆ ಎಂದರ್ಥ. ಯಜಮಾನನ ಜಾತಕ ಅಪಾಯ ಸೂಚಿಸಿದರೆ ಪಕ್ಷಕ್ಕೇ ಅಪಾಯ ಎಂದರ್ಥ. ಹೇಗೆ ಬಸ್ಸೊಂದರ ಚಾಲಕನಿಗೆ ಆಕಸ್ಮಿಕ ತೊಂದರೆಯಾದರೆ ಬಸ್ಸಿನ ಪ್ರಯಾಣಿಕರಿಗೆ ತೊಂದರೆ ಬರುತ್ತದೆಯೋ ಹಾಗೆಯೇ ಮನೆಯ ಯಜಮಾನನ ಕೈಯಲ್ಲಿ ಮನೆ ಮಂದಿ ಇರುವಂತದ್ದು. 2023ರವರೆಗೆ ಇವರ ಶನಿದಶೆಯ ಶುಕ್ರ ಭುಕ್ತಿಯು ಉತ್ತಮ ಫಲ ಕಾಲ. ಅಂದರೆ ಮುಂದಿನ ಬಾರಿ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಪೂರಕ ಗ್ರಹಸ್ಥಿತಿ, ದಶಾ ಭುಕ್ತಿಗಳು ಇವರಲ್ಲಿದೆ.ಇವರಲ್ಲೊಂದು ಶೀಘ್ರ ಕೋಪದ ಗುಣವಿದೆ. ಆದರೂ ವಿವೇಚನೆ ಜಾಸ್ತಿ ಇರುವುದರಿಂದ ಅಪಾಯವಿಲ್ಲ. ಇವರ ಜಾತಕದಲ್ಲಿ ಸಂಗ್ರಾಮ ಅಗ್ನಿ ತತ್ವದ ರಾಶಿ ಧನುವಿನಲ್ಲಿ ಶನಿ ಇರುವುದರಿಂದ, ಇವರ ಅಧ್ಯಕ್ಷತೆಯು ಕೆಲವು ಬಾರಿ ನಿರ್ಣಾಯಕ ಚಿಂತನೆಯಲ್ಲಿ ಇರುತ್ತದೆ. ಅಂತಃಕಲಹಗಳಿಗೆ ಸೂಕ್ತ ವ್ಯವಸ್ಥೆ(ಶಾಸನ ಬದ್ಧವಾಗಿ) ಮಾಡಬೇಕಾಗುತ್ತದೆ ಮತ್ತು ಇವರು ಮಾಡಿಯೇ ಮಾಡುತ್ತಾರೆ.
ಇವರ ಕುಂಭ ಲಗ್ನಕ್ಕೆ ದಶಮದಲ್ಲಿ ಬುಧಾದಿತ್ಯ(ನಿಪುಣ ಯೋಗ) ಯೋಗ ಇರುವುದರಿಂದ ಮಾತಿನಲ್ಲಿ, ಸಂಘಟನೆಯಲ್ಲಿ ನಿಪುಣತೆ ಇರುತ್ತದೆ. ಅಮಿತ್ ಷಾ ಅವರ ಹಾಗೆ ಉಗ್ರತ್ವದ ಮುಖ ಇವರದ್ದಲ್ಲ. ಅಂತೂ ಪುನರುತ್ಥಾನಕ್ಕೆ ಯಾವ ಕಾಲಕ್ಕೆ ಯಾವುದು ಬೇಕೋ ಅದು ಬಿಜೆಪಿಗೆ ಲಭಿಸುವುದಂತೂ ಖಂಡಿತ. ಇದಕ್ಕೆ ಪೂರಕವಾಗಿ ಗೆಲುವು ಅಸಾಧ್ಯವಾದಂತಹ ವಿಚಾರಗಳಿಗೆ ಈಗಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಕೈ ಹಾಕುತ್ತಾರೆ. ಅಂದರೆ ಪರೋಕ್ಷವಾಗಿ ನಡ್ಡಾ ಅಧ್ಯಕ್ಷಗಿರಿಗೆ ಸಹಾಯವೇ ಆಗುತ್ತದೆ. ಶನಿಗೆ ನವಮದಲ್ಲಿ ರಾಹು ಇದ್ದಾಗ ಆ ವ್ಯಕ್ತಿಯು ಯಜ್ಞಯಾಗಾದಿ(ಅಂದರೆ ಸತ್ಕರ್ಮ ನಿರತ) ಮಾಡುತ್ತಾನೆ ಎಂದರ್ಥ. ಈಗ ನೋಡುವುದಾದರೆ ಇವರ ಅಧ್ಯಕ್ಷತೆಯಲ್ಲಿ ರಾಮ ಮಂದಿರದ ಕುಂಭಾಭಿಷೇಕ ನಡೆಯಲ್ಪಡುತ್ತದೆ.
‘ಸರ್ವಂ ಕೇಸರಿಮಯಂ’ ಎಂದು ಇಡೀ ಜಗತ್ತೇ ಕೇಸರಿಮಯವಾಗಿ, ಮುಂದಿನ ಚುನಾವಣೆಯ ವೇಳೆಗೆ ವಿಪಕ್ಷಕ್ಕೆ ಬಿಜೆಪಿಯವರೇ ನಾಯಕನಾಗಿ ಹೋಗುವ ಪ್ರಸಂಗ ಬಂದೊದಗುತ್ತದೆ. ಈಗಾಗಲೇ ಮತಾಂತರಿಗಳೊಡನೆ ಬೃಹತ್ ಮೂರ್ತಿ ಸ್ಥಾಪನೆ, ನುಸುಳುಕೋರ ಅಕ್ರಮಿಗರಿಗೆ ಬೆಂಬಲವಾಗಿ ನಿಲ್ಲುವುದು, ರಾಜ ಧರ್ಮವನ್ನು ಸರಾಸಗಟಾಗಿ ತಿರಸ್ಕರಿಸಿ ಕಲ್ಲು ತೂರಾಟ ಮುಂತಾದ ಅನೈತಿಕ ಕಾರ್ಯಕ್ಕೆ ವಿಪಕ್ಷಗಳು ಒಗ್ಗಟ್ಟಾಗುವುದನ್ನು ನೋಡಿದರೆ ಇದ್ದ ನೀರನ್ನು ಬಂದ ನೀರು ಕೊಚ್ಚಿಕೊಂಡು ಹೋಯ್ತು ಎಂಬ ಗಾದೆಯ ಮಾತು ನೆನಪಾಗುತ್ತದೆ. ಯಾವಾಗ ಒಬ್ಬ ಮನುಷ್ಯನೋ, ಪಕ್ಷವೋ ನೈತಿಕ ಸಾಮರ್ಥ್ಯ ಕಳೆದುಕೊಂಡು, ಪ್ರಜ್ಞೆಯನ್ನೂ ಕಳೆದುಕೊಂಡರೆ ಹೀನ ಕಾರ್ಯಗಳನ್ನೆಸಗುತ್ತಾ ಮೂಲೆಗುಂಪಾಗುತ್ತಾನೆ.
ದೇಶದ ಮುಕ್ಕಾಲು ಪಾಲು ಜನರಿಗೆ ಈಗಾಗಲೇ ಅರಿವಾಗಿದೆ. ಅಲ್ಪಸಂಖ್ಯಾತರಿಗೂ ಅರಿವಾಗುತ್ತಿದೆ. ನಮ್ಮ ಉದ್ಧಾರಕ್ಕಾಗಿ ನಮಗೆ ಬೆಂಬಲ ನೀಡುವುದಲ್ಲ, ಕೇವಲ ಮತಕ್ಕಾಗಿ ಓಲೈಕೆ ಮಾಡುತ್ತಾರೆ ಎಂಬ ಅರಿವು ಎಲ್ಲರಿಗೂ ಬರುತ್ತಲಿದೆ ಮತ್ತು ಬಂದಾಗ ಈ ದೇಶದಲ್ಲಿ ಬೆರಳೆಣಿಕೆಯಲ್ಲಿ ಕಾಂಗ್ರೆಸ್ ಪರಿವಾರಗಳಿರುತ್ತದೆ. ಏನೋ ಕೆಲವು ರಾಜ್ಯಗಳಲ್ಲಿ ಬಿಜೆಪಿ ಹಿನ್ನಡೆ ಕಂಡಿರಬಹುದು. ಅದು ಕೇವಲ ಪ್ರಾದೇಶಿಕ ವಿಚಾರಗಳಿಂದಾಗಿ ಆಗಿದೆಯೇ ಹೊರತು, ರಾಷ್ಟ್ರೀಯ ವಿಚಾರಕ್ಕಾಗಿ ಅಲ್ಲವೇ ಅಲ್ಲ. ಈ ವಿರೋಧಿಸುವ ನೇತೃತ್ವ ಹೊತ್ತ ರಾಜಕಾರಣಿಗಳು ಜೈಲು ಸೇರಲಿದ್ದಾರೆ ಮತ್ತು ಪ್ರಜಾ ಹಕ್ಕನ್ನು ಕಳೆದುಕೊಂಡು ದೇಶ ಬಿಟ್ಟು ಹೋಗುವ ದಿನವೂ ದೂರವಿಲ್ಲ.
Get in Touch With Us info@kalpa.news Whatsapp: 9481252093
Discussion about this post