No Result
View All Result
SWR food-safety-drive in Karnataka Railway Stations
English Articles

SWR Intensifies Food Safety Checks Across Karnataka Railway Stations

by kalpa News
August 28, 2026
0

Kalpa Media House  |  Hubballi   | In response to the special food safety inspection drive conducted at railway stations across...

Read moreDetails
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
  • Advertise With Us
  • Grievances
  • About Us
  • Contact Us
Sunday, August 30, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಮಾಯಾನಗರಿಯ ಇಟ್ಟಮಡುವಿನಲ್ಲಿ ಅಖಂಡ ಬ್ರಹ್ಮಚಾರಿ ಅಯ್ಯಪ್ಪನ ವೈಭವ

ಸತತ 35ನೆಯ ಬಾರಿ ಶಬರಿಮಲೆ ಯಾತ್ರೆ ಕೈಗೊಳ್ಳುತ್ತಿರುವ ಗಿರೀಶ್ ಗುರುಸ್ವಾಮಿ ಅವರ ಸಂದರ್ಶನ

kalpa News by kalpa News
January 13, 2020
in Special Articles, Small Bytes
0
ಮಾಯಾನಗರಿಯ ಇಟ್ಟಮಡುವಿನಲ್ಲಿ ಅಖಂಡ ಬ್ರಹ್ಮಚಾರಿ ಅಯ್ಯಪ್ಪನ ವೈಭವ
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಬೆಂಗಳೂರು: ಶ್ರೀ ಶಬರಿ ಗಿರೀಶ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ 7ನೆಯ ವಾರ್ಷಿಕೋತ್ಸವದ ಅಂಗವಾಗಿ ಬನಶಂಕರಿ 3ನೆಯ ಹಂತದ ಇಟ್ಟಮಡುವಿನಲ್ಲಿ ಶ್ರೀಧರ್ಮಶಾಸ್ತ ಅಯ್ಯಪ್ಪ ಸ್ವಾಮಿಯ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಅತ್ಯಂತ ಅದ್ದೂರಿ ಹಾಗೂ ವೈಭವಯುತವಾಗಿ ಧರ್ಮಶಾಸ್ತನ ಪೂಜೆಗಾಗಿ ಕತ್ತರಿಗುಪ್ಪೆಯ ದಿನೇಶ್ ಅವರು ಸುಂದರವಾಗಿ ಬಾಳೆ ದಿಂಡಿನ ಮಂಟಪ ನಿರ್ಮಿಸಿದ್ದರು. ಮಂಟಪದ ಬಲ ಹಾಗೂ ಎಡ ಬದಿಯಲ್ಲಿ ಸಂಕಷ್ಟ ನಿವಾರಕ ಗಣೇಶ ಹಾಗೂ ಶ್ರೀ ಸುಬ್ರಹಮಣ್ಯ ಸ್ವಾಮಿ ಹಾಗೂ ಮಧ್ಯ ಭಾಗದಲ್ಲಿ  ಶ್ರೀಧರ್ಮಶಾಸ್ತ ಅಯ್ಯಪ್ಪ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.

ಇರುಮುಡಿ ಹೊತ್ತಾಗ ಹದಿನೆಂಟು ಮೆಟ್ಟಿಲು ಏರಿಯೇ ಸಾಗಬೇಕು. ಹೀಗಾಗಿ ಇಲ್ಲೂ ಸಹ ಪ್ರತಿಷ್ಠಾಪನೆ ಮಾಡಿದ್ದ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿಯ ಮುಂಭಾಗದಲ್ಲಿ ಹದಿನೆಂಟು ನಂದಾದೀಪ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪೂಜೆಯ ನೇತೃತ್ವ ವಹಿಸಿದ್ದ ಅಯ್ಯಪ್ಪ ಸ್ವಾಮಿಯ ಪರಮಭಕ್ತರಾದ ಗಿರೀಶ್ ಗುರುಸ್ವಾಮಿ ಅವರು, ಮನದ ಅಭೀಷ್ಟಗಳನ್ನು ನೆರವೇರಿಸುವಂತೆ ಪ್ರಾರ್ಥಿಸಿದರು.

ಈ ವೇಳೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಅವರು, ನಾವು ಸತತ 34 ವರ್ಷಗಳಿಂದ ಮಾಲೆ ಧರಿಸುತ್ತ ಬಂದಿದ್ದು ಶ್ರೀ ಸ್ವಾಮಿಯ ದಯೆಯಿಂದ ಸಕಲ ಇಷ್ಟಾರ್ಥಗಳು ನೆರವೇರುತ್ತಾ ಬಂದಿವೆ ಎಂದರು.

ಜೀವನದಲ್ಲಿ ಒಂದು ಬಾರಿಯಾದರೂ ಶಬರಿಮಲೆ ಯಾತ್ರೆ ಕೈಗೊಳ್ಳಬೇಕೆಂಬ ಆಸೆ ಇಟ್ಟುಕೊಂಡವರ ಸಂಖ್ಯೆ ಅಗಣಿತ. ವರ್ಷಕ್ಕೊಮ್ಮೆ ಹೋಗಿ ಬರುವವರ ಸಂಖ್ಯೆಯೂ ಅಔರಿಮಿತ (ಅಪರಮಿತ) 18 ವರ್ಷ ಇರುಮುಡಿ ಹೊತ್ತು ’’ಪದಿನೆಟ್ಟಾಂಪಡಿ’ ಏರಿ ಸ್ವಾಮಿ ದರ್ಶನ ಮಾಡಿ ಬಂದರೆ ಮಹಾ ಪುಣ್ಯ ಎಂಬ ನಂಬಿಕೆಯವರು ಅಸಂಖಾ ಎನ್ನುತ್ತಾರೆ.

ಮಾಲೆ ಧರಿಸಿ, ವ್ರತಾಚರಣೆ ಕೈಗೊಂಡು ಇರುಮುಡಿ ಹೊತ್ತುಕೊಂಡೇ ಹೋಗಿ ಬಂದಿದ್ದೇವೆ. ಇನ್ನೂ ವಿಶೇಷವೆಂದರೆ ಒಂದೇ ಒಂದು ಬಾರಿಯೂ ಒಬ್ಬರೇ ಹೋಗಿಲ್ಲ. ಪ್ರತೀ ಬಾರಿ ಶಿಷ್ಯ ವೃಂದಕ್ಕೆ ಮಾಲೆ ಹಾಕಿ ಕರೆದುಕೊಂಡೇ ಹೋಗುತ್ತೇವೆ. ಸರಾಸರಿ ಪ್ರತೀ  ಬಾರಿ ಯಾತ್ರೆ  ಕೈಗೊಂಡಾಗ 30 ಸ್ವಾಮಿಗಳು ನನ್ನ ಜೊತೆ ಇರುತ್ತಾರೆ ಎನ್ನುತ್ತಾರೆ.

ಬನಶಂಕರಿಯ 3ನೆಯ ಹಂತದ ಇಟ್ಟಮಡುವಿನಲ್ಲಿ ಮುಂಬರುವ ದಿನಗಳಲ್ಲಿ ಅಖಂಡ ಬ್ರಹ್ಮಚಾರಿ ಅಯ್ಯಪ್ಪ ಸ್ವಾಮಿಯ ದೇವಾಲಯ ನಿರ್ಮಾಣ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಭಕ್ತರ ಸಹಾಯಹಸ್ತದಿಂದ ಹಾಗೂ ನಮ್ಮ ಜೊತೆ ಮಾಲೆ ಧರಿಸಿ ಬರುವ ಸ್ವಾಮಿಗಳು ಜೊತೆ ಸೇರಿಸಿ ದೇವಾಲಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎನ್ನುತ್ತಾರೆ ಗಿರೀಶ್ ಗುರುಸ್ವಾಮಿ.

ನವೆಂಬರ್ 16ರಂದು ಶಬರಿಮಲೆಯಲ್ಲಿ ಮಂಡಲ ಪೂಜೆ ಆರಂಭವಾದಾಗ ಮಾಲೆ ಧರಿಸಿ ಜನವರಿ 21 ರಂದು ಶಬರಿಮಲೆಯಲ್ಲಿ ಮಕರವಿಳಕ್ಕು’ (ವಿಕಲಮ್)ರಂದು ಮಾಲೆ ತೆಗೆಯುವುದಾಗಿ ಹೇಳುತ್ತಾರೆ.

ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಬೇಕೆಂದರೆ ಅಯ್ಯಪ್ಪ ಭಕ್ತರು ಕಠಿಣ ವ್ರತ ನಿಯಮಗಳನ್ನು ಪಾಲಿಸಬೇಕು. ಒಟ್ಟು 48 ದಿನಗಳ ಕಾಲ ವ್ರತ ಕೈಗೊಳ್ಳುತ್ತೇವೆ. ಅದರಿಂದ ನನ್ನಗೆ ಎಲ್ಲವೂ ಒಳಿತು ಆಗಿದ್ದು ಮನಸ್ಸಿಗೆ ನೆಮ್ಮದ್ದಿ ಸಿಗುತ್ತದೆ ಎನ್ನುತ್ತಾರೆ.

ಶಬರಿಮಲೆಯಲ್ಲಿ ಮಕರವಿಳಕ್ಕು’(ವಿಕಲಮ್) ನಂತರ ತಿಂಗಳಲ್ಲಿ 5 ದಿನಗಳ ಬಾಗಿಲು ತೆರೆದಿರುತ್ತದೆ. ಆದರೆ ಶಬರಿಗಿರಿಯಲ್ಲಿ ಮಕರವಿಳಕ್ಕು’ ಸಮಯದಲ್ಲಿ ದರ್ಶನ ಮಾಡಲು ಹೋಗಲು ಸಾಧ್ಯವಾಗದೆ ಇದ್ದ ಕಾರಣವನ್ನು ಮೊದಲೇ ದೇವಾಲಯದ ಆಡಳಿತ ಮಂಡಳಿಯಲ್ಲಿ ತಿಳಿಸಿದರೆ ಅಲ್ಲಿ ದರ್ಶನ ಲಭ್ಯವಾಗುತ್ತದೆ ಎನ್ನುತ್ತಾರೆ ಗಿರೀಶ್ ಗುರುಸ್ವಾಮಿ!!

ಪುಣ್ಯಕ್ಷೇತ್ರ ಶಬರಿಮಲೆ

ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ಕೇರಳದಲ್ಲಿರುವ ಹಿಂದೂಗಳ ಪ್ರಸಿದ್ಧ ಪುಣ್ಯ ಯಾತ್ರಾ ಸ್ಥಳ. ಇದು ಕೇರಳದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿರುವ ಪತ್ತನಂತಿಟ್ಟ ಜಿಲ್ಲೆಯಲ್ಲಿದೆ.

ಶಬರಿಮಲೆಯ ಅಯ್ಯಪ್ಪ ದೇವಸ್ಥಾನ ದೇಶದ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ಶಾಸ್ತ ದೇವಾಲಯಗಳಲ್ಲಿ ಒಂದಾಗಿದೆ. ಶಬರಿಮಲೆಯ ದೇವಾಲಯ ದಕ್ಷಿಣ ಭಾರತದ ಅತ್ಯಂತ ದೂರದ ದೇವಾಲಯಗಳಲ್ಲಿ ಒಂದಾಗಿದೆ ಆದರೂ ಮೂರು ನಾಲ್ಕು ದಶಲಕ್ಷದಷ್ಟು ಯಾತ್ರಿಗಳನ್ನು ಪ್ರತಿ ವರ್ಷ ಸೆಳೆಯುತ್ತದೆ.


ಹದಿನೆಂಟು ಮೆಟ್ಟಿಲು, ಮಾಲೆಯನ್ನು ಧರಿಸುವುದು, ವ್ರತಾಚರಣೆ, ಇರುಮುಡಿ ಹೀಗೆ ಎಲ್ಲದಕ್ಕೂ ಪ್ರಾಚೀನ ಪರಂಪರೆಯ ತಾತ್ವಿಕತೆಗೂ ಸದ್ಯದ ಶ್ರದ್ಧೆಗೂ ನಂಟಿರುವುದು ಸ್ಪಷ್ಟವಾಗುತ್ತದೆ.

ನವೆಂಬರ್-ಡಿಸೆಂಬರ್ ಮಂಡಲ ಪೂಜಾ ಅವಧಿಯಲ್ಲಿ ದೇವಸ್ಥಾನದ ಬಾಗಿಲು ತೆರೆದಿರುತ್ತದೆ. ಜನವರಿ 14 ಮಕರ ಸಂಕ್ರಾಂತಿ, ಏಪ್ರಿಲ್ 14 ಮಹಾ ವಿಶು ಸಂಕ್ರಾಂತಿ ಮತ್ತು ಪ್ರತಿ ಮಲಯಾಳಂ ಮಾಸದ ಮೊದಲ ಐದು ದಿನ ಅಯ್ಯಪ್ಪನ ದರ್ಶನ ಮುಕ್ತವಾಗಿರುತ್ತದೆ.

ಈ ಸಂದರ್ಭದಲ್ಲಿ ಅಯ್ಯಪ್ಪನ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ತೀರ್ಥಯಾತ್ರೆ ನವೆಂಬರ್ ತಿಂಗಳಲ್ಲಿ ಪ್ರಾರಂಭವಾಗಿ, ಜನವರಿಯಲ್ಲಿ ಸಂಪನ್ನವಾಗುತ್ತದೆ.


Get in Touch With Us info@kalpa.news Whatsapp: 9481252093

Tags: Ayyappa SwamyBENGALURUDharmadasasthaKannada News WebsiteKeralaLatestNewsKannadaಅಖಂಡ ಬ್ರಹ್ಮಚಾರಿಅಯ್ಯಪ್ಪ ಸ್ವಾಮಿಕೇರಳಬೆಂಗಳೂರುಮಾಯಾನಗರಿಶಬರಿಮಲೆ ಅಯ್ಯಪ್ಪಶ್ರೀಧರ್ಮಶಾಸ್ತ
Share207Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗದಲ್ಲಿ ಎಫ್’ಎಂ ಸ್ಟೇಷನ್ ಮಂಜೂರಾತಿಗೆ ಪುನಃ ಪ್ರಯತ್ನಿಸಿದ ಸಂಸದ ರಾಘವೇಂದ್ರ

Next Post

ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷ ನಡ್ಡಾ ನೇತೃತ್ವದಲ್ಲಿ ‘ಸರ್ವಂ ಕೇಸರಿಮಯಂ’ ನಿಶ್ಚಿತ

kalpa News

kalpa News

Next Post
ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷ ನಡ್ಡಾ ನೇತೃತ್ವದಲ್ಲಿ ‘ಸರ್ವಂ ಕೇಸರಿಮಯಂ’ ನಿಶ್ಚಿತ

ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷ ನಡ್ಡಾ ನೇತೃತ್ವದಲ್ಲಿ 'ಸರ್ವಂ ಕೇಸರಿಮಯಂ' ನಿಶ್ಚಿತ

Leave a Reply Cancel reply

Your email address will not be published. Required fields are marked *

No Result
View All Result
SWR food-safety-drive in Karnataka Railway Stations
English Articles

SWR Intensifies Food Safety Checks Across Karnataka Railway Stations

by kalpa News
August 28, 2026
0

Kalpa Media House  |  Hubballi   | In response to the special food safety inspection drive conducted at railway stations across...

Read moreDetails
Kriti Sanon Raksha Bandhan Controversy GIVA Withdraw Advt copy

Kriti Sanon’s Raksha Bandhan Ad Faces Backlash; GIVA Withdraws Campaign

August 26, 2026
b-y-raghavendra-freedom-fighters-independence-day

Remembering Freedom Fighters Is the Duty of Every Indian: MP B.Y. Raghavendra

August 17, 2026
Indriya - Krithi Shetty - Brand Ambassador

Indriya announces Krithi Shetty as Brand Ambassador for Southern Markets

August 14, 2026
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL