ಕಲ್ಪ ಮೀಡಿಯಾ ಹೌಸ್ | ಮಂಗಳೂರು |
ಸುಮಾರು ನಾಲ್ಕು ತಿಂಗಳ ಹಿಂದೆ ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ #RoadAccident ತೀವ್ರವಾಗಿ ಗಾಯಗೊಂಡು ಬರೋಬ್ಬರಿ 134 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅಪೂರ್ವ ಭಟ್ ವಿಧಿಯಾಟಕ್ಕೆ ಬಲಿಯಾಗಿದ್ದು, ಈ ಮೂಲಕ ಸಾವಿರಾರು ಮಂದಿಯ ಪ್ರಾರ್ಥನೆ ವ್ಯರ್ಥವಾಗಿದೆ.
ಸುಮಾರು 134 ದಿನಗಳಿಂದ ಮಂಗಳೂರಿನ #Mangalore ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಅಪೂರ್ವ ಭಟ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆದರು.
ಹೇಗಾಗಿತ್ತು ಅಪಘಾತ?
ಸುಮಾರು ನಾಲ್ಕು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ-ಮೈಸೂರು #Mysore ರಾಷ್ಟ್ರೀಯ ಹೆದ್ದಾರಿಯ ಮುರ ಬಳಿ ಖಾಸಗಿ ಬಸ್ ಕಾರಿಗೆ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸಂಭವಿಸಿತ್ತು.
ಅಂಡೆಪುಣಿ ಈಶ್ವರ ಭಟ್ ಮತ್ತು ಪುತ್ರಿ ಅಪೂರ್ವ ಭಟ್(30) ಅವರು ಗಂಭೀರ ಗಾಯಗೊಂಡಿದ್ದರು. ಈಶ್ವರ ಭಟ್ ಅವರ ಮೊಮ್ಮಗಳು ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದರು. ಗಂಭೀರ ಗಾಯಗೊಂಡಿದ್ದ ಈಶ್ವರ ಭಟ್ ಮತ್ತು ಅವರ ಮಗಳು ಅಪೂರ್ವ ಅವರು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅಪೂರ್ವ ಅವರು, 134 ದಿನಗಳ ಕಾಲದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಪತ್ನಿ ಹುಷಾರಾಗಲಿ ಎಂದು ಆಶಿಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ತಾಯಿ ಪ್ರೀತಿಗೋಸ್ಕರ ಹಂಬಲಿಸುತ್ತಿರುವ ಮಗಳಿಗಾಗಿ ಪ್ರಾರ್ಥಿಸಿ ಎಂದು ನಿತ್ಯ ಪೋಸ್ಟ್ ಹಂಚಿಕೊಳ್ಳುತ್ತಿದ್ದರು. ಅದನ್ನು ನೋಡಿ ಅನೇಕರು ವಿಧ ವಿಧವಾಗಿ ಪ್ರಾರ್ಥಿಸಿದ್ದರು. ಸ್ವಲ್ಪವೂ ಧೃತಿಗೆಡದೆ ಆಶಿಶ್ ಅವರು ಪತ್ನಿ ಈ ಹೋರಾಟದಲ್ಲಿ ಗೆದ್ದು ಬರುತ್ತಾಳೆ ಎಂದುಕೊಂಡು ಪ್ರಯತ್ನಪಟ್ಟಿದ್ದರು. ಬೆಂಗಳೂರಿನಿಂದ ಮಂಗಳೂರಿಗೆ ಮನೆ ಶಿಫ್ಟ್ ಮಾಡಿದ್ದರು. ಆದರೆ ಯಾವ ಪ್ರಾರ್ಥನೆಯೂ ಫಲಿಸಲೇ ಇಲ್ಲ.
ಆಶಿಶ್ ಸರಡ್ಕ ಅವರೇ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದು, 134 ದಿನಗಳ ಪ್ರಯಾಣ ಇಂದು ಸಾಯಂಕಾಲ 6 ಗಂಟೆಗೆ ಮುಗಿಯಿತು. ಅಪೂರ್ವ ಈಗ ನಮ್ಮೊಂದಿಗೆ ಇಲ್ಲ! ಆಕೆ ಇನ್ನು ನೆನಪು ಮಾತ್ರ. ಪ್ರಾರ್ಥಿಸಿದ ಎಲ್ಲರಿಗೂ ನಾನು ಚಿರಋಣಿ! ಎಂದಿದ್ದಾರೆ.

ಅಪೂರ್ವ ಸಾವು ಅಪಘಾತದಿಂದ ಆದ ಕಾರಣ ಎಲ್ಲದಕ್ಕೂ ಪೊಲೀಸರು ಬಂದೇ ಆಗಬೇಕು… ಅವರಿಗೆ ಕಾಯ್ತಾ ಇದ್ದೇವೆ.. ಫೇಸ್ಬುಕ್ ತುಂಬಾ ಅಪೂರ್ವ ಇದ್ದಾಳೆ.. ನಿನ್ನೆ ತುಂಬಾ ಜನ ಬರೆದಿರುವ ಲೇಖನಗಳಲ್ಲಿ ಅಪೂರ್ವ 4 ತಿಂಗಳಿನಿಂದ ಕೋಮಾದಲ್ಲಿ ಇದ್ದಳು ಅಂತಾ ಬರೆದಿರುವುದನ್ನು ನಾನು ಓದಿದ್ದೇನೆ..
ಆದರೆ ತೀರಾ ಆಪ್ತರಿಗೆ ಮಾತ್ರ ಗೊತ್ತಿದ್ದ, ನಮ್ಮ ಮನಸ್ಸಿಗೆ ತುಂಬಾ ಆಘಾತವನ್ನು, ಈ ನೋವನ್ನು amplify ಮಾಡಿದ ಕಾರಣಗಳನ್ನು ಈಗ ಹೇಳಬೇಕು ಅಂತಾ ಅನ್ನಿಸ್ತಾ ಇದೆ..
ಅಪೂರ್ವ ಅಪಘಾತ ಆದಾಗ ಅನುಭವಿಸಿದ ತಲೆಯ ಪೆಟ್ಟು ತೀವ್ರ ಸ್ವರೂಪದ್ದಾಗಿತ್ತು .. diffused axonal injury ಆದ ಕಾರಣ ಮೊದಲ ಕೆಲವು ದಿನಗಳು ಏನಾಗಿದೆ ಅನ್ನುವ ಅರಿವು ಇರಲಿಲ್ಲ.. ಸ್ವಲ್ಪ ಸೆಟಲ್ ಡೌನ್ ಆದ ಮೇಲೆ 10 ದಿನಗಳ ನಂತರ ಮಾಡಿದ MRI ಆಕೆಯ MIDBRAIN ಪೆಟ್ಟು ತಿಂದಿದೆ ಅನ್ನೋದನ್ನು ಹೇಳಿತ್ತು.. Age is the only positive she has, ಅಂದಿದ್ದ ವೈದ್ಯರು, ಯಾವ ಗ್ಯಾರೆಂಟಿ ಕೊಡೋಕೂ ಸಾಧ್ಯ ಇಲ್ಲ ನಮಗೆ ಅಂತಾ ಹೇಳಿದ್ರು..
ಆದರೆ ನಾವು ಅಲ್ಲಿಂದ ನಾವು ಮಾಡಿದ ಹೋರಾಟ ತುಂಬಾ ಕ್ಲಿಷ್ಟಕರವಾದದ್ದು.. 24 ದಿನಗಳ ನಂತರ ಅವಳನ್ನು ವಾರ್ಡಿಗೆ ಶಿಫ್ಟ್ ಮೂಡಿಸಿದ್ದು ಕೂಡಾ ಆಕೆಗೆ ಮ್ಯೂಸಿಕ್ ಥೆರಪಿ, ನಮ್ಮ ಮಾತು, ಸೌಂಡ್ ಥೆರಪಿ ಫಿಸಿಕಲ್ stimulation, ರೇಕಿ ಹೀಲಿಂಗ್, ಪ್ರಾಣಿಕ್ ಹೀಲಿಂಗ್ ಮಾಡಬಹುದು ಅನ್ನುವ ಕಾರಣಕ್ಕೆ.. ಸಾಧಾರಣ ಜುಲೈ ಮಧ್ಯದ ವರೆಗೆ ಅಪೂರ್ವ ಯಾವ ರೆಸ್ಪಾನ್ಸ್ ಕೂಡಾ ಮಾಡ್ತಾ ಇರಲಿಲ್ಲ.. ಆದರೆ ಮತ್ತೆ ನಿಧಾನಕ್ಕೆ ನಾವು ಹೇಳುವ ವಿಚಾರಗಳು ಅವಳಿಗೆ ಅರ್ಥ ಆಗೋಕೆ ಶುರುವಾಯಿತು.. ಕರೆದಾಗ ಕಣ್ಣು ಬಿಡೋಕೆ ಪ್ರಯತ್ನ ಮಾಡ್ತಾ ಇದ್ಲು… ಒಮ್ಮೆ thumbs up ಮಾಡು ಅಂದಾಗ ಮಾಡಿದ್ಲು… wow! ಈ ರಿಕವರಿ ಬಂದರೆ ತುಂಬಾ ಜನ ಮೇಲೆ ಬೀಳ್ತಾರೆ ಅಂದರು ವೈದ್ಯರು.. ಅದು ಆಗಸ್ಟ್ ಒಂದು..
ಅದಾಗಿ ಬರೋಬ್ಬರಿ 15 ದಿನ ಅಪೂರ್ವಗೆ urinary infection ಮತ್ತು ಅದಕ್ಕೆ ಕೊಟ್ಟ ಆಂಟಿಬಯೋಟಿಕ್ ಕಾರಣದಿಂದ ಸುಸ್ತಾಗಿ ಹೋದಳು.. ಆಗ ಹೋದ ರೆಸ್ಪಾನ್ಸಿವ್ನೆಸ್ ಮತ್ತೆ ವಾಪಸ್ ಆಗಿದ್ದು ಸೆಪ್ಟೆಂಬರ್ ತಿಂಗಳಲ್ಲಿ.. ಫಿಸಿಯೋಥೆರಪಿ ಆಗುವಾಗ ಹೇಳಿದ್ದು ಎಲ್ಲಾ ಅರ್ಥ ಆಗೋಕೆ ಶುರುವಾಯಿತು.. ಬಲಗೈಗೆ ಸ್ವಲ್ಪ ಬಲ ಕಮ್ಮಿಯಿತ್ತು.. ಆದರೆ ಎಡಕೈಗೆ ಬಾಲ್ ಕೊಟ್ಟರೆ ಹಿಡಿಯೋದು ಬಿಡೋದು ಮಾಡಿದ್ಲು.. ಎರಡೆರಡು ಗಂಟೆ ಅವಳ ಮುಂದೆ ಕೂತು ಮಾತಾಡಿಸುತ್ತಾ ಇದ್ದೇ .. ನಾನಿಲ್ಲದೆ ಇದ್ದಾಗ ಅಪ್ಪ ಮತ್ತೆ ಚಿಕ್ಕಮ್ಮನ ಮಗ Gaurav Surya ಈ ಕೆಲಸ ಮಾಡ್ತಾ ಇದ್ದಾ.. ಇನ್ನೂ ಹೇಗೆ ಇಂಪ್ರೂವ್ ಮಾಡೋದು ಅಂತಾ ಇರೋ ಬರೋ ವೀಡಿಯೋಗಳನ್ನು ರೀಸರ್ಚ್ ಪೇಪರ್ ಗಳನ್ನು ತಿರುವಿಹಾಕಿ ಆಗಿತ್ತು.. ಸೆಪ್ಟೆಂಬರ್ ಮಧ್ಯಭಾಗದಲ್ಲಿ ಅಪೂರ್ವ ಬೆರಳುಗಳ ಮೂಲಕ ಕೌಂಟ್ ಮಾಡೋಕೆ , ಕಣ್ಣು ಮೂವ್ ಮಾಡಿ ಆಚೆ ಈಚೆ ನೋಡೋಕೆ ಶುರು ಮಾಡಿದ್ಲು… ಸೆಪ್ಟೆಂಬರ್ ಕೊನೆಯ 10 ದಿನದಲ್ಲಿ yes/ no ಅನ್ನೋದನ್ನು ತಲೆ ಅಲ್ಲಾಡಿಸುವ ಮೂಲಕ ಮಾಡಿದ್ಲು.. ಮಗಳ ನೆನಪು, ನನ್ನ ನೆನಪು, ಮನೆಯವರ ನೆನಪು ಎಲ್ಲಾ ಅವಳಿಗೆ ಇತ್ತು.. she should fully recover with this ಅಂತಾ ವೈದ್ಯರು ಹೇಳಿದ್ರು.. ಅವಳ ಬಳಿ, ಅಪೂರ್ವ ನೀನು ನಡೆದುಕೊಂಡು ಇಲ್ಲಿಂದ ಹೋಗಬೇಕು ಅಂದಿದ್ರು.. ಮಗಳನ್ನು ಒಂದೆರಡು ಸರ್ತಿ ಕರೆದುಕೊಂಡು ಬಂದು ಮಾತಾಡಿಸಿದೆ.. ಅವಳ ಪ್ರೆಸೆನ್ಸ್ ಫೀಲ್ ಮಾಡಿ ಕಣ್ಣೀರು ಬಂದಿತ್ತು ಅವಳಿಗೆ ಒಮ್ಮೆ.. ಫಿಸಿಯೋಥೆರಪಿ ಮಾಡುವವರು ಮಾತಾಡಿಸಿ, ಅವಳನ್ನು ಪ್ರಚೋದಿಸಿ, ಕೂರಿಸುವುದು ಮಾಡ್ತಾ ಇದ್ರು..

ಅಲ್ಲಿಂದ ಏನೇನೋ ಪ್ರಯತ್ನಗಳನ್ನು ನಾವೂ ಮಾಡಿದ್ವಿ.. ಅವರು ಎಲ್ಲರೂ ಮಾಡಿದ್ರು.. ಸಾರ್ ದುಡ್ಡು ಎಷ್ಟು ಖರ್ಚಾಗುತ್ತೆ ಅಂತಾ ಯೋಚನೆ ಮಾಡಬೇಡಿ, ಏನು ಮಾಡಬೇಕು ಅನ್ನುವ ಆಲೋಚನೆ ಮಾತ್ರ ನೀವು ಮಾಡಿ, ನೀವು ಏನು ಹೇಳಿದ್ರೂ ನಾವು ಅದನ್ನು ಮಾಡ್ತೇವೆ ಅಂತಾ ನಾವೂ ಹೇಳಿದ್ವಿ.. ಇರುವ ಎಲ್ಲ ಮದ್ದು try ಮಾಡಿದ್ರು, ಬೇರೆ ಬೇರೆ ವೈದ್ಯರ opinion ತೆಗೊಂಡು ಆಯಿತು.. ಪ್ರಾಜ್ಞರ, ಜ್ಯೋತಿಷಿಗಳ ಬಳಿ ಕೇಳಿಸಿಯಾಯಿತು. ಗುರುಗಳು, ಹಿರಿಯರು ಅಂತಾ ಎಲ್ಲರ ಬಳಿ ನಾನು ಬೇಡಿಕೊಂಡೆ.. 134 ದಿನದಲ್ಲಿ ನಾನು ಮಾಡದೇ ಇದ್ದ ಪೂಜೆಗಳು, ಪ್ರಾರ್ಥನೆಗಳು ಇಲ್ಲ.. ಆದರೂ ಅಪೂರ್ವ ಕೊನೆಗೆ ಯಾಕೋ ಮನಸ್ಸು ಬದಲಾಯಿಸಿದಳು.. ಪ್ರಾಯಶಃ ಆಕೆಗೆ ಈ ದೇಹದಲ್ಲಿ ಇದ್ದುಕೊಂಡು ತನ್ನ ಕಾರ್ಯಗಳನ್ನು ಮಾಡುವುದು ಕಷ್ಟ, ಡಿಪೆಂಡೆಂಟ್ ಆಗ್ತೇನೆ ಅಂತಾ ಅನ್ನಿಸಿತೋ ಏನೋ… ನಿನ್ನೆ ಸಾಯಂಕಾಲ 5 ಗಂಟೆಯವರೆಗೆ ಆಕೆಯ ಮನಸ್ಸು ಬದಲಾಯಿಸುವ ಪ್ರಯತ್ನ ತುಂಬಾ ಮಾಡಿದೆ…. But ನಿನ್ನೆ she didn’t want to fight.. ಇದಕ್ಕಿಂತ ಕಷ್ಟದ ಕ್ಲಿಷ್ಟಕರವಾದ ಪರಿಸ್ಥಿತಿಯಿಂದ ಹೊರಬಂದಿದ್ದ ಅಪೂರ್ವ ನಿನ್ನೆ ಸಾಕಿನ್ನು ಇದು ಅಂತಾ ನಿರ್ಧಾರ ಮಾಡಿ ಹೋದದ್ದು.. She was not someone who didn’t fight. She fought till the very end.. ನಮಗೆ ಯಾರಿಗೂ ಭಾರ ಆಗೋದು ಬೇಡ ಅಂತ ಹೋಗಿದ್ದು ಅವಳು… ಅದೆಷ್ಟೋ ಪ್ರೀತಿ/ ನೋವು ಮನಸ್ಸಲ್ಲಿ ಇಟ್ಟುಕೊಂಡು ಕೂತಿದ್ಲು ಗೊತ್ತಿಲ್ಲ!
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post