ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹೇಶ್ ಲಲಿತಕಲಾ ಸಂಸ್ಥೆ ವತಿಯಿಂದ ಹುತಾತ್ಮ ಯೋಧರ ಸ್ಮರಣೆಗಾಗಿ ಸ್ಮರಣಾಂಜಲಿ- ಸಂಗೀತ ನೃತ್ಯ ನಮನ ಹಾಗೂ ಕಾಯಕಯೋಗಿ ಶ್ರೀ ಶಿವಕುಮಾರ ಸ್ವಾಮೀಜಿ ಸದ್ಭಾವನಾ ಪ್ರಶಸ್ತಿ ಸಮಾರಂಭವನ್ನು ಮೇ 25 ಶನಿವಾರ ಸಂಜೆ 5 ಗಂಟೆಗೆ ಕಮಲಾನಗರದ ಪ್ರಭಾತ್ ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.
ಸಮಾರಂಭದ ದಿವ್ಯಸಾನ್ನಿಧ್ಯವನ್ನು ಕುಪ್ಪೂರು ಡಾ. ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಉದ್ಘಾಟಿಸಲಿದ್ದಾರೆ. ಬಿಜೆಪಿ ಎಸ್’ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಚಿ.ನಾ. ರಾಮು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾರುತಿ ಮೆಡಿಕಲ್ಸ್ ಮಹೇಂದ್ರ ಮುನೋತ್, ಬಿಬಿಎಂಪಿ ಸದಸ್ಯ ಎಂ. ಶಿವರಾಜ್ ಸೇರಿದಂತೆ ಅನೇಕ ಪ್ರಮುಖರು ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಪರಿಸರ ಪ್ರೇಮಿ ಡಾ. ಈಶ್ವರ್ ಎಸ್. ರಾಯುಡು, 515 ಆರ್ಮಿ ದಾರ್ಲ ವೆಂಕಟೇಶ್ವರುಲು, ಸಮಾಜ ಸೇವಕ ಎ. ವೆಂಕಟೇಶ್, ಉತ್ತರ ಕರ್ನಾಟಕ ನವನಿರ್ಮಾಣ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ನದಾನಿ ಹಿರೇಮಠ್, ವೀರಶ್ಯೆವ ಲಿಂಗಾಯತ ಯುವ ವೇದಿಕೆ ಅಧ್ಯಕ್ಷ ಪ್ರಶಾಂತ್ ಕಲ್ಲೂರು ಮತ್ತು ಲಯನ್ಸ್ ಕ್ಲಬ್ ಡಿಸ್ಟಿಕ್ ಚೇರ್ ಪರ್ಸನ್ ಲಯನ್ ಡಿ. ಪಿಲಿಪ್ಸ್ ರಾಜು ಅವರಿಗೆ ಕಾಯಕಯೋಗಿ ಶ್ರೀಶಿವಕುಮಾರ ಸ್ವಾಮೀಜಿ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಏನು: ಹುತಾತ್ಮ ಯೋಧರ ಸ್ಮರಣೆಗಾಗಿ ಸ್ಮರಣಾಂಜಲಿ – ಸಂಗೀತ ನೃತ್ಯ ನಮನ
ಎಲ್ಲಿ: ಕರ್ನಾಟಕ ಇಂಜಿನಿಯರ್ ಅಕಾಡೆಮಿ, ಪ್ರಭಾತ್ ರಂಗಮಂದಿರ, ಕಮಲಾನಗರ
ಯಾವಾಗ: ಮೇ 25 ಶನಿವಾರ ಸಂಜೆ 5 ಗಂಟೆಗೆ
Discussion about this post