ನವದೆಹಲಿ: ಸ್ವತಂತ್ರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಕಾಂಗ್ರೆಸ್ ಮಾಡಿದ್ದ ಅನ್ಯಾಯಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ನ್ಯಾಯ ಒದಗಿಸಿದ್ದು, ಇಂದು ದೇಶವಾಸಿಗಳ ಪಾಲಿಗೆ ಐತಿಹಾಸಿಕ ದಿನವನ್ನಾಗಿ ಮಾಡಿದ್ದಾರೆ ಮೋದಿ.
ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ‘ಆಜಾದ್ ಹಿಂದ್ ಸರ್ಕಾರ್’ ಘೋಷಣೆಯ 75 ನೆಯ ವಾರ್ಷಿಕೋತ್ಸವದ ನೆನಪಿಗಾಗಿ ನವದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜವನ್ನು ಇಂದು ಹಾರಿಸುವ ಮೂಲಕ ನೇತಾಜಿಗೆ ಗೌರವ ಸಲ್ಲಿಸಿದರು.
Addressing a programme marking 75 years of the establishment of the Azad Hind Government. https://t.co/B2gmDL8dWt
— Narendra Modi (@narendramodi) October 21, 2018
ಈ ವೇಳೆ ಭಾವುಕರಾಗಿ ಮಾತನಾಡಿದ ಪ್ರಧಾನಿ ಮೋದಿ, ನೇತಾಜಿ ಸುಭಾಷ್ ಚಂದ್ರ ಬೋಸರು ರಾಷ್ಟ್ರ ನಿರ್ಮಾಣದಲ್ಲಿ ಈಶಾನ್ಯ ರಾಜ್ಯಗಳ ಮಹತ್ವವನ್ನು ಮನಗಂಡಿದ್ದರು, ಅಂತೆಯೇ ನಮ್ಮ ಸರ್ಕಾರ ಸಹ ಈಶಾನ್ಯ ರಾಜ್ಯಗಳ ಮಹತ್ವವನ್ನು ಅರಿತಿದೆ ಎಂದಿದ್ದಾರೆ.
ನೇತಾಜಿ ಬೋಸರ ನೇತೃತ್ವದಲ್ಲಿ ಆಝಾದ್ ಹಿಂದ್ ಫೌಜ್ ನ ಸಾಧನೆಗಳನ್ನು ಸ್ಮರಿಸಿದ್ದು, ಸೂರ್ಯ ಮುಳುಗದ ಸಾವ್ರಾಜ್ಯದವರ ವಿರುದ್ಧ ನೇತಾಜಿ ಜನತೆಯನ್ನು ಒಗ್ಗೂಡಿಸಿದ್ದರು ಎಂದಿದ್ದಾರೆ.
ಬೋಸರ ಕಲ್ಪನೆಯ ಸೇನೆಯನ್ನು ಭಾರತ ನಿರ್ಮಿಸುತ್ತಿದೆ ಎಂದಿರುವ ಮೋದಿ, ನೇತಾಜಿ ಅವರಿಗೆ ಸಂಬಂಧಿಸಿದ ರಹಸ್ಯ ಕಡತಗಳನ್ನು ಬಹಿರಂಗಗೊಳಿಸುವ ನಿರ್ಧಾರವನ್ನು ನಮ್ಮ ಸರ್ಕಾರ ತೆಗೆದುಕೊಂಡಿತು. ಈಗ ನೇತಾಜಿ ಅವರ ಗೌರವಾರ್ಥ ಪ್ರಶಸ್ತಿಯೊಂದನ್ನು ಸ್ಥಾಪಿಸಲಾಗುತ್ತಿದೆ ಎಂದು ಘೋಷಿಸಿದ್ದಾರೆ.
1943 ರ ಅಕ್ಟೋಬರ್ 21 ರಂದು ಸಿಂಗಾಪುರದಲ್ಲಿ ಪ್ರಾಂತೀಯ ಆಜಾದ್ ಹಿಂದ್ ಸರಕಾರವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಸ್ಥಾಪಿಸಿದರು. 1944 ರ ಆ. 14 ರಂದು ಕರ್ನಲ್ ಸೌಕಾತ್ ಅಲಿ ಮಲಿಕ್ ನೇತೃತ್ವದಲ್ಲಿ ಐಎನ್‌ಎದ ಬಹದ್ದೂರ್ ಬ್ರಿಗೇಡ್ ಮಣಿಪುರದಲ್ಲಿ ಇಂಡಿಯಾ- ವ್ಯಾನ್ಮಾರ್ ಗಡಿಯಲ್ಲಿರುವ ಮೊಇರಂಗ್ ನ್ನು ಆಕ್ರಮಿಸಿಕೊಂಡಿತ್ತು. ಆಜಾದ್ ಹಿಂದ್ ಫೌಜ್ ಗೆ ಇಂಡಿಯನ್ ನ್ಯಾಷನಲ್ ಆರ್ಮಿ ಎಂದೂ ಕರೆಯಲಾಗುತ್ತದೆ.
ಮೋದಿ ಮಾತಿನ ಪ್ರಮುಖಾಂಶ:
- ಸ್ವಾಮಿ ವಿವೇಕಾನಂದರಿಂದ ಸುಭಾಷ್ ಚಂದ್ರ ಬೋಸರು ಪ್ರೇರೇಪಿತರಾಗಿದ್ದರು
- ದಕ್ಷಿಣ ಆಫ್ರಿಕಾದ ವಿದ್ಯಾರ್ಥಿ ಚಳುವಳಿಯ ನಾಯಕರು ಬೋಸರನ್ನು ತಮ್ಮ ಹೀರೋ ಎಂದು ಪರಿಗಣಿಸಿದ್ದರೆಂದು ನೆಲ್ಸನ್ ಮಂಡೇಲಾ ಬೋಸರ ಬಗ್ಗೆ ಉಲ್ಲೇಖಿಸಿದ್ದರು
- ತಮ್ಮ ಸಂಪ್ರದಾಯಗಳ ಬಗ್ಗೆ ಹೆಮ್ಮೆ ಇರುವ ಎಲ್ಲಾ ರಂಗಗಳಲ್ಲಿಯೂ ಬೆಳವಣಿಗೆ ಸಾಧಿಸುವ ಸಂಮೃದ್ಧ ರಾಷ್ಟ್ರದ ಕಲ್ಪನೆಯನ್ನು ಬೋಸರು ಹೊಂದಿದ್ದರು
- ಸ್ವತಂತ್ರ ಚಳುವಳಿಯಲ್ಲಿ ಕಾಂಗ್ರೆಸ್ ಹೋರಾಟದ ಬದಲಾಗಿ ಸಶಸ್ತ್ರ ಹೋರಾಟವನ್ನು ಆರಂಭಿಸಿದ್ದರು
- ಇಂದಿಗೂ ನೇತಾಜಿ ಕಲ್ಪನೆಯ ಭಾರತ ಸಾಕಾರವಾಗಲು ಸಾಧ್ಯವಾಗಿಲ್ಲ
- ನಮ್ಮ ಸರ್ಕಾರ ನೇತಾಜಿ ಕನಸನ್ನು ನನಸು ಮಾಡಲು ಪ್ರಯತ್ನಿಸುತ್ತಿದೆ
Discussion about this post