ಕಲ್ಪ ಮೀಡಿಯಾ ಹೌಸ್ | ಸೊರಬ |
ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿದ ತಾಲೂಕು ಪ್ರಮುಖರಾದ ವಿ.ಜಿ. ಪರಶುರಾಮ್ ಅವರು ನಾಳೆ ಬಿಜೆಪಿ #BJP ಸೇರ್ಪಡೆಗೊಳ್ಳಲಿದ್ದು, ಈ ಮೂಲಕ ತಾಲೂಕು ಬಿಜೆಪಿಗೆ ಮತ್ತಷ್ಟು ಬಲ ಬಂದಂತಾಗಿದೆ.
ಸಮಾಜವಾದಿ #SamajavadiParty ಪಕ್ಷದಲ್ಲಿ ಮುಖಂಡರಾಗಿ ಪರಶುರಾಮ್ ಅವರು ಗುರುತಿಸಿಕೊಂಡಿದ್ದರು. ಆದರೆ, ಎಸ್’ಪಿ ಪಕ್ಷ ಈಗ ಕಾಂಗ್ರೆಸ್ ಜೊತೆ ಕೈಜೋಡಿಸಿರುವ ಕಾರಣದಿಂದ ಬೇಸತ್ತಿದ್ದಾರೆ. ಅಲ್ಲದೇ, ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ #NarendraModi ಹಾಗೂ ಜಿಲ್ಲೆಯಲ್ಲಿ ಸಂಸದ ಬಿ.ವೈ. ರಾಘವೇಂದ್ರ #BYRaghavendra ಅವರ ಕಾರ್ಯವೈಖರಿಯನ್ನು ಮೆಚ್ಚಿ, ಬೆಂಬಲ ಸೂಚಿಸಿ ಬಿಜೆಪಿ ಸೇರಲು ಮುಂದಾಗಿದ್ದಾರೆ.

ಹಿಂದೆ ಕಾಂಗ್ರೆಸ್’ನಲ್ಲೂ ಪ್ರಮುಖ ಪಾತ್ರ
ಇನ್ನು, ಹಿಂದಿನ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿನ ಯಶಸ್ವಿ ಕಾರ್ಯವೈಖರಿಯನ್ನು ಮೆಚ್ಚಿ ವಿ.ಜಿ. ಪರಶುರಾಮ್ ಅವರಿಗೆ ತೆಲಂಗಾಣ ಮತ್ತು ಲಕ್ಷ ದ್ವೀಪ ರಾಜ್ಯಗಳ ಎಐಸಿಸಿ ಎಲ್’ಡಿಎಂಆರ್’ಸಿ ಸಂಯೋಜಕರಾಗಿ ನೇಮಕ ಮಾಡಲಾಗಿತ್ತು.

ಸೊರಬ ತಾಲೂಕಿನವರಾದ ವಿ.ಜಿ. ಪರಶುರಾಮ್ ಮಾಜಿ ಮುಖ್ಯಮಂತ್ರಿ ದಿ. ಬಂಗಾರಪ್ಪರವರ ನಿಕಟವರ್ತಿಗಳಾಗಿದ್ದರು.
ಎಲ್’ಡಿಎಂಆರ್’ಸಿ ರಾಜ್ಯ ಸಂಯೋಜಕರಾಗಿ ಸೌತ್ ಗೋವಾ 2019ರ ಲೋಕಸಭಾ ಮತ್ತು ಪಂಜಿಮ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.
ಇವರ ಸಾಧನೆಯನ್ನು ಗುರುತಿಸಿ ಅಮೇಥಿ ಲೋಕಸಭಾ ಚುನಾವಣೆ, ಮಹಾರಾಷ್ಟçದ ಕೊಂಕಣ ವಿಭಾಗ ಮತ್ತು 2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post