ಶಿವಮೊಗ್ಗ: ತಮ್ಮ ಅಧಿಕಾರವಧಿಯಲ್ಲಿ ಮಲೆನಾಡಿಗೆ ಅದರಲ್ಲೂ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ನಿರಂತರವಾಗಿ ಹಲವು ಕೊಡುಗೆಗಳನ್ನು ನೀಡುತ್ತಾ ಬಂದಿರುವ ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ ಈಗ ಮಲೆನಾಡಿಗರ ಮತ್ತೊಂದು ಕನಸು ನನಸಾಗುತ್ತಿದೆ.
ಹೌದು… ಶಿವಮೊಗ್ಗದಿಂದ ತಮಿಳುನಾಡು ರಾಜಧಾನಿ ಚೆನ್ನೈ ಹಾಗೂ ವಿಶ್ವವಿಖ್ಯಾತ ಧಾರ್ಮಿಕ ಕ್ಷೇತ್ರ ಆಂಧ್ರಪ್ರದೇಶದ ತಿರುಪತಿಗೆ ನೇರ ರೈಲಿನ ಕನಸು ನನಸಾಗುತ್ತಿದ್ದು, ನವೆಂಬರ್ 10ರ ಭಾನುವಾರ ಈ ರೈಲುಗಳಿಗೆ ಅಧಿಕೃತ ಚಾಲನೆ ದೊರೆಯಲಿದೆ.
ಶಿವಮೊಗ್ಗದಿಂದ ಚೆನ್ನೈ, ಶಿವಮೊಗ್ಗದಿಂದ ತಿರುಪತಿ ಹಾಗೂ ಶಿವಮೊಗ್ಗದಿಂದ ಮೈಸೂರಿಗೆ ವೀಕ್ಲಿ ಸ್ಪೆಶಲ್ ಎಕ್ಸ್’ಪ್ರೆಸ್ ರೈಲುಗಳಿಗೆ ಭಾನುವಾರ ಸಂಸದ ರಾಘವೇಂದ್ರ ಚಾಲನೆ ನೀಡಲಿದ್ದಾರೆ.
ಅಂದು ಮುಂಜಾನೆ 11 ಗಂಟೆಗೆ ಶಿವಮೊಗ್ಗ ಮುಖ್ಯ ರೈಲು ನಿಲ್ದಾಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯ್ಕ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
ನೂತನ ಮೂರು ರೈಲುಗಳ ವಿವರ ಹೀಗಿದೆ:
ಶಿವಮೊಗ್ಗ ಟೌನ್-ಚೆನ್ನೈ-ಶಿವಮೊಗ್ಗ ಟೌನ್ ವೀಕ್ಲಿ ಸ್ಪೆಷಲ್ ಎಕ್ಸ್’ಪ್ರೆಸ್
ರೈಲು ಸಂಖ್ಯೆ: 06221/06222
ಶಿವಮೊಗ್ಗದಿಂದ ಹೊರಡುವ ವೇಳೆ: ಪ್ರತಿ ಸೋಮವಾರ ರಾತ್ರಿ 11.55 ಗಂಟೆ
ಚೆನ್ನೈ ತಲುಪುವ ವೇಳೆ: ಮಂಗಳವಾರ ಬೆಳಗ್ಗೆ 11.15 ಗಂಟೆ
ಚೆನ್ನೈನಿಂದ ಹೊರಡುವ ವೇಳೆ: ಪ್ರತಿ ಮಂಗಳವಾರ ಮಧ್ಯಾಹ್ನ 3 ಗಂಟೆ
ಶಿವಮೊಗ್ಗ ತಲುಪುವ ವೇಳೆ: ಬುಧವಾರ ಬೆಳಗಿನ ಜಾವ 3.55 ಗಂಟೆ
ಮಾರ್ಗ: ಶಿವಮೊಗ್ಗ-ಭದ್ರಾವತಿ-ತರೀಕೆರೆ-ಬೀರೂರು-ಕಡೂರು-ಅರಸೀಕೆರೆ-ತುಮಕೂರು-ಚಿಕ್ಕಬಾಣಾವರ-ಬಾಣಸವಾಡಿ-ಕೃಷ್ಣರಾಜಪುರಂ- ಬಂಗಾರಪೇಟೆ-ಜೋಲಾರ್’ಪೇಟೆ- ಕಾಟ್ಪಾಡಿ-ಪೆರಂಬೂರು-ಚೆನ್ನೈ ಸೆಂಟ್ರಲ್
ಶಿವಮೊಗ್ಗ ಟೌನ್-ತಿರುಪತಿ(ರೇಣಿಗುಂಟ)-ಶಿವಮೊಗ್ಗ ಟೌನ್ ವೀಕ್ಲಿ ಸ್ಪೆಷಲ್ ಎಕ್ಸ್’ಪ್ರೆಸ್
ರೈಲು ಸಂಖ್ಯೆ: 06223/06224
ಶಿವಮೊಗ್ಗದಿಂದ ಹೊರಡುವ ವೇಳೆ: ಪ್ರತಿ ಬುಧವಾರ ಬೆಳಗ್ಗೆ 6.15 ಗಂಟೆ
ತಿರುಪತಿ(ರೇಣಿಗುಂಟ) ತಲುಪುವ ವೇಳೆ: ಬುಧವಾರ ರಾತ್ರಿ 8.05 ಗಂಟೆ
ತಿರುಪತಿ(ರೇಣಿಗುಂಟ)ದಿಂದ ಹೊರಡುವ ವೇಳೆ: ಪ್ರತಿ ಬುಧವಾರ ರಾತ್ರಿ 9.45 ಗಂಟೆ
ಶಿವಮೊಗ್ಗ ತಲುಪುವ ವೇಳೆ: ಗುರುವಾರ ಬೆಳಗ್ಗೆ 11.45 ಗಂಟೆ
ಮಾರ್ಗ: ಶಿವಮೊಗ್ಗ-ಭದ್ರಾವತಿ-ತರೀಕೆರೆ-ಬೀರೂರು-ಅಜ್ಜಂಪುರ-ಹೊಸದುರ್ಗ ರೋಡ್-ಚಿಕ್ಕಜಾಜೂರು-ಚಿತ್ರದುರ್ಗ-ಮೊಳಕಾಲ್ಮೂರು-ರಾಯದುರ್ಗ- ಬಳ್ಳಾರಿ-ಗುಂತಕಲ್-ಗೂಟಿ-ತಾಡಪತ್ರಿ-ಕೊಂಡಾಪುರಂ-ಯೆರಗುಂಟ್ಲಾ- ಕಡಪಾ-ರಾಜಂಪೇಟ-ರೇಣಿಗುಂಟ
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿರುವ ಜನಪ್ರಿಯ ಸಂಸದ ಶ್ರೀ ಬಿ.ವೈ. ರಾಘವೇಂದ್ರ ಅವರ ಪ್ರಯತ್ನದಿಂದಾಗಿ ಮಲೆನಾಡಿಗೆ ಈ ಮೂರು ನೂತನ ರೈಲುಗಳು ದೊರೆತಿವೆ. ಇದರಿಂದಾಗಿ ತಮಿಳುನಾಡು ಹಾಗೂ ಆಂಧ್ರಪ್ರದೇಶಕ್ಕೆ ಜಿಲ್ಲೆಯಿಂದ ತೆರಳುವ ಪ್ರಯಾಣಿಕರಿಗೆ ಸಹಕಾರಿಯಾಗುವ ಜೊತೆಯಲ್ಲಿ ಮಲೆನಾಡಿನ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹ ಇದು ಪೂರಕವಾಗಿದೆ. ಕನಿಷ್ಠ ಅವಧಿಯಲ್ಲಿ ಗರಿಷ್ಠ ಪ್ರಯತ್ನ ಮಾಡಿ ಮೂರು ನೂತನ ರೈಲನ್ನು ಜಿಲ್ಲೆಯ ತರುವಲ್ಲಿ ಯಶಸ್ವಿಯಾಗಿರುವ ಸಂಸದರನ್ನು ತುಂಬು ಹೃದಯದಿಂದ ಅಭಿನಂದಿಸುತ್ತೇವೆ.
-ಶ್ರೀ ಲಕ್ಷ್ಮೀನಾರಾಯಣ ಕಾಶಿ,
ಅಧ್ಯಕ್ಷರು, ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ,
ಸದಸ್ಯರು, ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಟಾಸ್ಕ್ ಫೋರ್ಸ್-ಎನ್. ಗೋಪಿನಾಥ್, ಕಾರ್ಯದರ್ಶಿ, ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ
-ಮಂಜುನಾಥ ಶರ್ಮಾ, ನಿರ್ದೇಶಕರು, ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ
-ಡಾ.ಎನ್. ಸುಧೀಂದ್ರ, ಹಿರಿಯ ಸಲಹಾ ಸಂಪಾದಕರು, ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
-ಎಸ್.ಆರ್. ಅನಿರುದ್ಧ ವಸಿಷ್ಠ, ಪ್ರಧಾನ ಸಂಪಾದಕರು, ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮೈಸೂರು-ಶಿವಮೊಗ್ಗ ಟೌನ್-ಮೈಸೂರು ಜನಸಾಧಾರಣ್ ವೀಕ್ಲಿ ಎಕ್ಸ್’ಪ್ರೆಸ್
ರೈಲು ಸಂಖ್ಯೆ: 06225/06226
ಮೈಸೂರಿನಿಂದ ಹೊರಡುವ ವೇಳೆ: ಪ್ರತಿ ಸೋಮವಾರ ಸಂಜೆ 4.40 ಗಂಟೆ
ಶಿವಮೊಗ್ಗ ತಲುಪುವ ವೇಳೆ: ರಾತ್ರಿ 10.30 ಗಂಟೆ
ಶಿವಮೊಗ್ಗದಿಂದ ಹೊರಡುವ ವೇಳೆ: ಪ್ರತಿ ಗುರುವಾರ ಮಧ್ಯಾಹ್ನ 1 ಗಂಟೆ
ಮೈಸೂರು ತಲುಪುವ ವೇಳೆ: ಸಂಜೆ 7.05 ಗಂಟೆ
ಮಾರ್ಗ: ಮೈಸೂರು-ಕೆ.ಆರ್. ನಗರ-ಹೊಳೆನರಸೀಪುರ-ಹಾಸನ- ಅರಸೀಕೆರೆ-ಕಡೂರು-ಬೀರೂರು-ತರೀಕೆರೆ-ಭದ್ರಾವತಿ-ಶಿವಮೊಗ್ಗ
(ವರದಿ: ಡಾ.ಸುಧೀಂದ್ರ)
Get In Touch With Us info@kalpa.news Whatsapp: 9481252093, 94487 22200
Discussion about this post