ಕಲ್ಪ ಮೀಡಿಯಾ ಹೌಸ್ | ಮುಳಬಾಗಿಲು |
ಶ್ರೀಪಾದರಾಜ ಮಠಾಧೀಶರಾದ ಶ್ರೀಕೇಶವನಿಧಿ ತೀರ್ಥ ಶ್ರೀಪಾದಂಗಳವರು ಇಂದು ಮುಂಜಾನೆ ಹರಿಪಾದ ಸೇರಿದ್ದಾರೆ.
ಈ ಕುರಿತಂತೆ ಮಠದ ಕಿರಿಯ ಶ್ರೀಗಳಾದ ಶ್ರೀ ಸುಜಯನಿಧಿ ತೀರ್ಥ ಸ್ವಾಮೀಜಿಯವರು ಪ್ರಕಟಣೆ ಹೊರಡಿಸಿದ್ದು, ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮುಂಜಾನೆ 4.30ರ ವೇಳೆಗೆ ಬೆಂಗಳೂರಿನಲ್ಲಿ ಹರಿಪಾದ ಸೇರಿದ್ದಾರೆ.
ಮುಂಜಾನೆ 10.30ರವರೆಗೂ ಚಾಮರಾಜಪೇಟೆಯ ಶ್ರೀಮಠದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. 12 ಗಂಟೆ ನಂತರ ಮುಳಬಾಗಿಲು ಶ್ರೀಮಠದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನದ ನಂತರ ಮುಳಬಾಗಿಲು ನಗರದ ಹೊರವಲಯದಲ್ಲಿರುವ ನರಸಿಂಹ ತೀರ್ಥ ಕ್ಷೇತ್ರದಲ್ಲಿ ಬೃಂದಾವನ ಕಾರ್ಯ ನೆರವೇರಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post