ಮುಂಬೈ: ವಾಣಿಜ್ಯ ನಗರಿ ಮುಂಬೈ ಭಾರೀ ಮಳೆಯಿಂದ ತತ್ತರಿಸಿದ್ದು, ಭಾರೀ ಅನಾಹುತಗಳು ಸಂಭವಿಸಿವೆ.
ನಿನ್ನೆಯಿಂದ ಭಾರೀ ಪ್ರಮಾಣದಲ್ಲಿ ಸುರಿಯತ್ತಿರುವ ಮಳೆಯಿಂದಾಗಿ ಹಲವೆಡೆ ಭೂ ಕುಸಿತ ಉಂಟಾಗಿ, ವಾಹನಗಳು ಮಣ್ಣಿನಲ್ಲಿ ಸಿಲುಕಿವೆ. ವಡಲಾ ಪೂರ್ವ ಅಂತೋಪ್ ಹಿಲ್‌ಸ್ ಪ್ರದೇಶದಲ್ಲಿ ಭೂಕುಸಿತ ಉಂಟಾದ ಪರಿಣಾಮ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದಿದೆ. ಭೂ ಕುಸಿತಕ್ಕೆ ಸುಮಾರು 7ಕ್ಕೂ ಅಧಿಕ ಕಾರುಗಳು ಹಾನಿಯಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿದ ಕುರಿತಾಗಿ ವರದಿಯಾಗಿಲ್ಲ.
Seven cars damaged after wall of an under construction building collapsed at Vidyalankar road in Wadala's Antop Hill following heavy rain. #MumbaiRains pic.twitter.com/h2yril46bU
— ANI (@ANI) June 25, 2018
ಇನ್ನು, ಹಲವಾರು ಜನವಸತಿ ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜನರು ತಮ್ಮ ಮನೆಯಿಂದ ಹೊರಬರಲಾರದೇ, ಮನೆಯಲ್ಲೂ ಇರಲಾಗದೆ ಪರಿತಪಿಸುತ್ತಿದ್ದಾರೆ. ಈ ರೀತಿ ಸಿಲುಕಿರುವವರನ್ನು ರಕ್ಷಣೆ ಮಾಡಲು ಕಾರ್ಯಾಚರಣೆ ಆರಂಭಿಸಲಾಗಿದೆ.
Visuals of water-logging from #Mumbai's Matunga East area. According to India Meteorological Department, heavy to very heavy rain is likely to continue in the region. #Maharashtra pic.twitter.com/VPQqpaArYz
— ANI (@ANI) June 25, 2018
ಇನ್ನು, ಮುಂಬೈ ಸಮುದ್ರದಲ್ಲಿ ಭಾರೀ ಬಿರುಗಾಳಿ ಎದ್ದಿದೆ ಎಂದು ವರದಿಯಾಗಿದ್ದು, ಸುಮಾರು ನಾಲ್ಕು ಮೀಟರ್ ಎತ್ತರದ ಅಲೆಗಳಿಂದ ಮಿನಿ ಸುನಾಮಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
Visuals of heavy water-logging from #Mumbai's Sion area. According to India Meteorological Department, heavy to very heavy rain is likely to continue in the region. #Maharashtra pic.twitter.com/jE8HzilQDm
— ANI (@ANI) June 25, 2018
Discussion about this post