ಕಲ್ಪ ಮೀಡಿಯಾ ಹೌಸ್ | ಮೈಸೂರು |
ರಾಜ್ಯದ ಹಲವು ಕಡೆಗಳಲ್ಲಿ ಚಿರತೆ ಹಾಗೂ ಬೀದಿ ನಾಯಿಗಳ ಹಾವಳಿ ಸುದ್ದಿಯಾಗುತ್ತಿದ್ದರೆ, ಇಲ್ಲಿನ ಕೊಳಚೆ ನೀರು ಸಂರಕ್ಷಣಾ ಘಟಕದ ಜಮೀನನ ಸುತ್ತಮುತ್ತ ಮೊಸಳೆಗಳು ಕಾಣಿಸಿಕೊಂಡಿವೆ ಎಂದು ವರದಿಯಾಗಿದೆ.
ಈ ಕುರಿತ ಸುದ್ದಿಯೊಂದು ವರದಿಯಾಗಿದ್ದು, ಮೈಸೂರು ದಕ್ಷಿಣದ ಕೊಳಚೆ ನೀರು ಸಂಸ್ಕರಣಾ ಘಟಕದ ಜಮೀನಿನ ಸುತ್ತಮುತ್ತ ಮೊಸಳೆಗಳು ಕಾಣಿಸಿಕೊಂಡಿರುವುದು ಇಲ್ಲಿನ ನಿವಾಸಿಗಳಿಗೆ ಅಚ್ಚರಿಯನ್ನುಂಟು ಮಾಡಿದೆ.
10 ದಿನಗಳ ಅವಧಿಯಲ್ಲಿ, ಘನತ್ಯಾಜ್ಯ ನಿರ್ವಹಣೆ ಮತ್ತು ಒಳಚರಂಡಿ ನೀರು ಸಂಸ್ಕರಣಾ ಘಟಕವನ್ನು ಹೊಂದಿರುವ ಒಳಚರಂಡಿ ಘಟಕದ ಆವರಣದಲ್ಲಿ ಕನಿಷ್ಠ ಎರಡು ಮೊಸಳೆಗಳು ಕಾಣಿಸಿಕೊಂಡಿವೆ. ಈ ಪೈಕಿ ಘಟಕದಲ್ಲಿ ಸಿಲುಕಿ ಗಾಯಗೊಂಡಿದ್ದ ಮೊಸಳೆಯನ್ನು ರಕ್ಷಿಸಲಾಗಿದೆ ಎನ್ನಲಾಗಿದೆ.
Also read: ಅಪ್ರಾಪ್ತ ಸ್ನೇಹಿತೆಗೆ ಮದ್ಯ ಕುಡಿಸಿ ಲೈಂಗಿಕ ಕಿರುಕುಳ ನೀಡಿದ ಸ್ನೇಹಿತ
ಆದರೆ, ಕೊಳಚೆ ನೀರಿಗೆ ಮೊಸಳೆಗಳು ಹೇಗೆ ಹೊಂದಿಕೊAಡಿವೆ ಎಂಬುದು ಆಶ್ಚರ್ಯ ಮೂಡಿಸಿದ್ದು, 6.5 ಲಕ್ಷ ಟನ್’ಗೂ ಅಧಿಕ ತ್ಯಾಜ್ಯದ ರಾಶಿಯಲ್ಲಿ ಮೊಸಳೆಗಳನ್ನು ಹುಡುಕುವುದು ಸಾಹಸದ ಕೆಲಸವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post