ಕಲ್ಪ ಮೀಡಿಯಾ ಹೌಸ್ | ಮೈಸೂರು |
ಖ್ಯಾತ ಲೇಖಕ ಎನ್.ವಿ. ರಮೇಶ್ ಅವರ 17 ಪುಸ್ತಕಗಳ ಲೋಕಾರ್ಪಣೆ ಮೇ 1ರ ನಾಳೆ ನಡೆಯಲಿದ್ದು, ಈ ಅಂಗವಾಗಿ ಕವಿಗೋಷ್ಠಿಯನ್ನೂ ಸಹ ಆಯೋಜಿಸಲಾಗಿದೆ.
ಮೈಸೂರಿನ ಅಭಿರುಚಿ ಬಳಗ ಹಾಗೂ ಆಸಕ್ತಿ ಪ್ರಕಾಶನ ಕಾರ್ಯಕ್ರಮವನ್ನು ಆಯೋಜಿಸಿದ್ದು, ನಾಳೆ ಬೆಳಗ್ಗೆ 10.30ಕ್ಕೆ ಜಯನಗರದಲ್ಲಿರುವ ಹೊಸ ನ್ಯಾಯಾಲಯದ ಎದುರಿನ ನೇಗಿಲಯೋಗಿ ಸಭಾಂಗಣದಲ್ಲಿ ನಡೆಯಲಿದೆ.
ಬೆಂಗಳೂರು ಆಕಾಶವಾಣಿ ಹಿರಿಯ ಉದ್ಘೋಷಕಿ ಬಿ.ಕೆ. ಸುಮತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕನ್ನಡ ಪ್ರಭ ಪತ್ರಿಕೆ ಸ್ಥಳೀಯ ಸಂಪಾದಕ ಅಂಶಿ ಪ್ರಸನ್ನಕುಮಾರ್ ಪುಸ್ತಕಗಳ ಲೋಕಾರ್ಪಣೆಗೊಳಿಸುವರು.
Also read: ಭದ್ರಾವತಿ: ಪ್ರೇಮ ವಿವಾಹಕ್ಕೆ ಮಗುವಿನ ಕೊಡುಗೆ: ಮತ್ತೆ ಅಡ್ಡಿಯಾದ ಜಾತಿ ಸಂಬಂಧ ಕಳಚಿತೇ?
ಮುಖ್ಯ ಅತಿಥಿಗಳಾಗಿ ಕರ್ನಾಟಕ ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿ ಸದಸ್ಯ ನಿ. ಗಿರಿಗೌಡ, ಕರ್ನಾಟಕ ಗ್ರಂಥಾಲಯ ಇಲಾಖೆಯ ಪುಸ್ತಕ ಆಯ್ಕೆ ಸಮಿತಿ ಸದಸ್ಯ ಡಿ.ಎನ್. ಲೋಕಪ್ಪ, ಮೈಸೂರು ನಿವೃತ್ತ ಪೊಲೀಸ್ ಅಧಿಕಾರಿ ಎನ್. ಸತ್ಯನಾರಾಯಣ, ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷರಾದ ಹಾಗೂ ಸಂಸ್ಕೃತಿ ಪೋಷಕರಾದ ಎ. ಹೇಮಗಂಗಾ, ರೇಡಿಯೋ-ರಂಗಭೂಮಿಯ ಕಲಾವಿದರಾದ ಹರಿಪ್ರಸಾದ್ ಪಾಲ್ಗೊಳ್ಳಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post