ಕಲ್ಪ ಮೀಡಿಯಾ ಹೌಸ್ | ಮೈಸೂರು |
ಭಾರತದ ಪ್ರಜೆಗಳಾದ ನಾವು ಸ್ವಾತಂತ್ರವಾಗಿ ಬದುಕಲು, ದುಡಿಯಲು, ಸಂಪಾದಿಸಲು, ಸಾರ್ವಜನಿಕವಾಗಿ ಜೀವಿಸಲು ನಮಗೆ ಸಂವಿಧಾನವೆ ಆಧಾರ ಎಂದು ಶ್ರೀರಾಂಪುರ ಪಪಂ ಕಂದಾಯ ಅಧಿಕಾರಿ ಕುಮಾರ್ ಅಭಿಪ್ರಾಯಪಟ್ಟರು.
ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣಾ ಸಮಿತಿ (ರಿ)ಯು ಬಡಾವಣೆಯ ನಿವಾಸಿಗಳಿಗೆ ಶ್ರೀರಾಂಪುರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಶ್ರೀಧರ್ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದ ಸಂವಿಧಾನದ ಮಹತ್ವ ತಿಳಿಸುವ ಕಾರ್ಯಕ್ರಮದಲ್ಲಿ ದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು.
ಭಾರತದ ಸಂವಿಧಾನ ನಮಗೆ ಕೇವಲ ಕಾನೂನುಗಳ ಪುಸ್ತಕ ಮಾತ್ರವಲ್ಲ ಅದೊಂದು ನಮ್ಮ ಜೀವನ ಶೈಲಿಯ ಗ್ರಂಥ. ಭಾರತ ದೇಶದಲ್ಲಿ ವಾಸಿಸುವ ನಾವೆಲ್ಲರೂ ಸಂವಿಧಾನಕ್ಕೆ ಅತ್ಯಂತ ಗೌರವವನ್ನು ನೀಡಬೇಕು ಎಂದರು.
Also read: ದಕ್ಷಿಣ ಕನ್ನಡ | ಗಣೇಶ ಶೋಭಾಯಾತ್ರೆಗೆ ಶಾಸ್ತಾರ ಕುಣಿತ ಭಜನೆಯ ರಂಗು
ಆಳುವ ಸರ್ಕಾರದಿಂದ ಹಿಡಿದು ನ್ಯಾಯಾಲಯ ಸೇರಿದಂತೆ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಮಾನವಾದ ಶ್ರೇಷ್ಠ ಪುಸ್ತಕವಿದೆ ಅಂದರೆ ಅದು ನಮ್ಮ ಸಂವಿಧಾನ. ನಮ್ಮ ಸಂವಿಧಾನವನ್ನು ಅತ್ಯಂತ ಹೆಚ್ಚು ಅಧ್ಯಯನ ಮಾಡಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚಿಸಿದ್ದಾರೆ ಈ ಸಂದರ್ಭದಲ್ಲಿ ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಆರ್. ಗಣೇಶ್ ಮಾತನಾಡಿ, ನಮ್ಮ ಬಡಾವಣೆಯಲ್ಲಿ ನಾವೆಲ್ಲರೂ ಯಾವುದೇ ಬೇಧ ಭಾವವಿಲ್ಲದೆ ಅತ್ಯಂತ ಅನ್ಯೋನ್ಯವಾಗಿ ವಾಸಿಸುತ್ತಿದ್ದೇವೆ ಇದೇ ಸಂವಿಧಾನದ ಆಶಾಯವೂ ಆಗಿದೆ. ಸಂವಿಧಾನದಂತೆ ಬದುಕಿದಾಗ ಮಾತ್ರ ಸರ್ವ ಸಮಾನವಾದ ಸಮಾಜ ನಿರ್ಮಾಣ ಸಾಧ್ಯ ಹಾಗೂ ನಮ್ಮ ಬಡಾವಣೆಯಲ್ಲಿ ಸಂವಿಧಾನದ ಆಶಯದಂತೆ ಸಮಾನತೆ, ಸ್ವಾತಂತ್ರ ಹಾಗೂ ಭ್ರಾತೃತ್ವ ಸೌಹಾರ್ದತೆಯಿಂದ ನಾವು ಬದುಕುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀರಾಂಪುರ ಪಟ್ಟಣ ಪಂಚಾಯಿತಿ ಸಂವಹನಾಧಿಕಾರಿ ಶ್ರೀನಿವಾಸ್, ಆರೋಗ್ಯಾಧಿಕಾರಿ ಪರಮೇಶ್ವರ್, ಜಲ ನಿರ್ವಹಣಾ ವ್ಯವಸ್ಥಾಪಕ ಪರಮೇಶ್, ಜಲ ಗಂಟಿ ಶ್ರೀನಿವಾಸ್, ಉಪಾಧ್ಯಕ್ಷ ರಾಮಕೃಷ್ಣ, ಪ್ರಧಾನ ಕಾರ್ಯದರ್ಶಿ ಪುನೀತ್, ನಿರ್ದೇಶಕರಾದ ಮಹೇಶಪ್ಪ ಪಿ ಟಿ, ಶೈಲಜಾ, ಶೈಲಶ್ರೀ, ಬಿ.ಕೆ. ಮುರುಡಿ, ತೇಜಸ್, ನಿರ್ಮಲ, ಯಶ್ವಂತ್, ಉಮಾ ಪುಟ್ಟರಾಜು , ಮಂಜುಳಾ, ನೀತು, ಕಿರಣ್, ಮಹೇಶ್, ಮೋಹನ್ ಸೇರಿದಂತೆ ಬಡಾವಣೆಯ ನಿವಾಸಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post