ಕಲ್ಪ ಮೀಡಿಯಾ ಹೌಸ್ | ಮೈಸೂರು |
ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿಯ ಕ್ರೆಡಿಟ್ ನಮ್ಮ ಸರ್ಕಾರದ್ದು ಎಂದು ಸಂಸದ ಪ್ರತಾಪ್ ಸಿಂಹ Prathap Simha ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ Siddaramaiah ತಿರುಗೇಟು ನೀಡಿದ್ದಾರೆ.
ಈ ಕುರಿತಂತೆ ನಗರದಲ್ಲಿಂದು ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರ ಲೋಕಸಭಾ ವ್ಯಾಪ್ತಿಗೆ ಈ ಹೆದ್ದಾರಿಯ ಕೆಲವು ಕಿಲೋಮೀಟರ್ ಮಾತ್ರ ಸೇರುತ್ತದೆ. ಎಚ್.ಸಿ. ಮಹಾದೇವಪ್ಪನವರಿಗೆ ಈ ರಸ್ತೆಯ ಪ್ರತಿ ಮಾಹಿತಿಯೂ ಸಹ ಇದೆ. ಮಹಾದೇವಪ್ಪ ಅವರೇ ಮುಂದೆ ನಿಂತು ಈ ರಸ್ತೆಯನ್ನು ಮಾಡಿಸಿದ್ದು. ಆದರೆ, ಪ್ರತಾಪ್ ಸಿಂಹ ತಮ್ಮಿಂದ ಆಯಿತು ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಈ ರಸ್ತೆಯ ಕ್ರೆಡಿಟ್ ನಮ್ಮ ಸರ್ಕಾರಕ್ಕೆ ಸಲ್ಲಿಬೇಕಿದೆ. ಇದರಲ್ಲಿ ಪ್ರತಾಪ್ ಸಿಂಹ ಹಾಗೂ ಬಿಜೆಪಿ ಸರ್ಕಾರದ ಯಾವುದೇ ಪಾತ್ರ ಇಲ್ಲ ಎಂದರು.
ಮಾರ್ಚ್ 9ರಂದು ಈ ದಶಪಥ ಹೆದ್ದಾರಿಯ ಪರಿಶೀಲನೆ ನಡೆಸುತ್ತೇನೆ ಎಂದರು.
Also read: ಶಿವಮೊಗ್ಗದ ಇಂದಿನ ಸುದ್ಧಿ | ಸಮಾನ ವೇತನಕ್ಕೆ ಆಗ್ರಹಿಸಿ ಶಿವಮೊಗ್ಗ ಪಾಲಿಕೆ ನೀರು ಸರಬರಾಜು ನೌಕರರ ಮುಷ್ಕರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post