ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸಂಸಾರದಲ್ಲಿನ ವಿಷವನ್ನು ನಿವಾರಿಸಿ ಜ್ಞಾನವೆಂಬ ಅಮೃತ ಉಣಿಸುವುದೇ ಭಾಗವತ ಶ್ರವಣ ಎಂದು ಪಂಡಿತ ಅನಿರುದ್ಧಾಚಾರ್ಯ ಪಾಂಡುರಂಗಿ ಅಭಿಪ್ರಾಯಪಟ್ಟರು.
ನಗರದ ಅಗ್ರಹಾರದ ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಉತ್ತರಾದಿ ಮಠದಲ್ಲಿ ಅಧಿಕ ಶ್ರಾವಣ ಅಂಗವಾಗಿ ಏರ್ಪಡಿಸಿರುವ ಉಪನ್ಯಾಸ ಮಾಲಿಕೆಯಲ್ಲಿ ಅವರು ಗುರುವಾರ ಪ್ರವಚನ ನೀಡಿದರು.

ಪುರಾಣ, ಪ್ರವಚನ ಕೇಳುವವರಿಗೆ ಭಕ್ತಿ ಎಷ್ಟು ಮುಖ್ಯವೋ, ಅದನ್ನು ಹೇಳುವವರಿಗೂ ಶ್ರೇಷ್ಠತೆ ಇರಬೇಕು. ಆಗ ಮಾತ್ರ ಜ್ಞಾನ ಕಾರ್ಯ ಸಾರ್ಥಕವಾಗುತ್ತದೆ ಎಂದವರು ನುಡಿದರು.

Also read: ಕಲಾಪದಿಂದ 10 ಬಿಜೆಪಿ ಶಾಸಕರ ಅಮಾನತು: ಎಸ್. ದತ್ತಾತ್ರಿ ಖಂಡನೆ
ಭಾಗವತ ಶ್ರವಣ ಇದ್ದಲ್ಲಿ ಯಾವ ಋಣಾತ್ಮಕ ಶಕ್ತಿಗಳೂ, ವಿಧ್ವಂಸಕ ಚಟುವಟಿಕೆಗಳೂ ನಿಷ್ಕ್ರೀಯವಾಗುತ್ತವೆ. ಸಂಸಾರದಲ್ಲಿ ಅತಿ ಹೆಚ್ಚು ಇರುವ ವಿಷವನ್ನು ನಿವಾರಿಸಿ ಜ್ಞಾನವೆಂಬ ಅಮೃತ ಉಣಿಸುವುದೇ ಭಾಗವತ ಶ್ರವಣದ ಮುಖ್ಯ ಉದ್ದೇಶ ಎಂದು ಅನಿರುದ್ಧಾಚಾರ್ಯ ಹೇಳಿದರು.

ಉಪನ್ಯಾಸದ ನಂತರ ಭಾಗವತ ಗ್ರಂಥ, ಧನ್ವಂತರಿ ದೇವರು, ಶ್ರೀ ಸತ್ಯ ಸಂಕಲ್ಪ ತೀರ್ಥರು, ಶ್ರೀ ಸತ್ಯ ಸಂತುಷ್ಟ ತೀರ್ಥರ ವೃಂದಾವನಕ್ಕೆ ಮಂಗಳಾರತಿ, ಅಧಿಕ ಮಾಸದ ಅಂಗವಾಗಿ ವಿಶೇಷ ಪೂಜಾದಿಗಳು ನೆರವೇರಿದವು. ನೂರಾರು ಭಕ್ತರು ಹಾಜರಿದ್ದರು.










Discussion about this post