ಕಲ್ಪ ಮೀಡಿಯಾ ಹೌಸ್ | ಮೈಸೂರು |
ಅಜ್ಞಾನ ಎಂಬ ಕತ್ತಲೆ ದೂರವಾಗಿ ಸಮಾಜ ಜ್ಞಾನದ ಬೆಳಕಿನಲ್ಲಿ ಸಾಗಬೇಕು ಎಂಬುದೇ ನರಸಿಂಹ ಅವತಾರದ ಪ್ರಮುಖ ಆಶಯ ಎಂದು ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಸ್ವಾಮೀಜಿ ಹೇಳಿದರು.
ಚಾಮರಾಜ ಜೋಡಿ ರಸ್ತೆಯ ವೆಂಕಟಾಚಲ ಧಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನರಸಿಂಹ ಜಯಂತಿ ವಿಶೇಷ ಕಾರ್ಯಕ್ರಮ ದಲ್ಲಿ ಅವರು ಆಶೀರ್ವಚನ ನೀಡಿದರು.
ಭೌತಿಕವಾದ ಕಣ್ಣುಗಳಿಗೆ ದೇವರು ಕಾಣುವುದಿಲ್ಲ. ನಾಸ್ತಿಕರು ಇದನ್ನೇ ಇಟ್ಡುಕೊಂಡು ದೇವರೇ ಇಲ್ಲ ಎನ್ನುತ್ತಾರೆ. ಇದನ್ನು ಸುಳ್ಳು ಮಾಡಲಿಕ್ಕಾಗಿ ನರಸಿಂಹನ ಅವತಾರ ಆಗಿದೆ. ದಶಾವತಾರದಲಿ ಇದು ಬಹಳ ವಿಶಿಷ್ಠವಾದ ಅವತಾರ ಎಂದು ಶ್ರೀ ಗಳು ವಿವರಿಸಿದರು.

ಅನನ್ಯ ಭಕ್ತಿಗೆ ಪ್ರಹ್ಲಾದ ಪ್ರತೀಕನಾಗಿದ್ದಾನೆ. ಮಗನಾಗಿ ಜನಿಸಿದ ಪ್ರಹ್ಲಾದನಿಂದಲೇ ಹಿರಣ್ಯಕಶಪುವಿನ ಅಹಂಕಾರ ದಮನ ಆಯಿತು. ಚೇತನರಾದ ಮಾನವರಲ್ಲಿ ಅನೇಕ ದೋಶಗಳು ಇವೆ. ಆದರೆ ನರಸಿಂಹ ಸಕಲ ಗುಣ ಪರಿಪೂರ್ಣ. ನಮ್ಮೆಲ್ಲರ ಹೃದಯದಲಿ ನರಸಿಂಹ ನಿತ್ಯವೂ ನೆಲೆಸಲಿ. ಈ ಮೂಲಕ ಸಮಾಜ ಸರಿ ದಾರಿಯಲಿ ಸಾಗಿ ಸ್ವಾಸ್ಥ್ಯ ರಕ್ಷಣೆಯಾಗಲಿ ಎಂದು ಅವರು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀ ಗಳು ಸಂಸ್ಥಾನ ಪ್ರತಿಮೆ ಶ್ರೀ ಕೋದಂಡ ರಾಮದೇವರ ಮತ್ತು ನರಸಿಂಹ ದೇವರ ಪೂಜೆ ನೆರವೇರಿಸಿದರು. ನೂರಾರು ಭಕ್ತರು ಇದಕ್ಕೆ ಸಾಕ್ಷಿಯಾದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post