ಕಲ್ಪ ಮೀಡಿಯಾ ಹೌಸ್ | ಮೈಸೂರು |
ಹುಣಸೂರು ತಾಲೂಕಿನ ಬಿಳಿಕೆರೆ ಗೊಮ್ಮಟಗಿರಿಯಲ್ಲಿರುವ ಭಗವಾನ್ ಬಾಹುಬಲಿಗೆ 75ನೇ ಮಹಾಮಸ್ತಕಾಭಿಷೇಕ (ಅಮೃತ ಮಹೋತ್ಸವ) ಅಂಗವಾಗಿ ಡಿಸೆಂಬರ್ 13ರಿಂದ 15ರ ವರೆಗೆ ವಿಶೇಷ ಕಾರ್ಯಕ್ರಮ ಮತ್ತು ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಮೂರು ದಿನವೂ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಸಂಪನ್ನಗೊಳ್ಳಲಿದೆ.
13ರ ಬೆಳಗ್ಗೆ 10.30ಕ್ಕೆ ಶಿವಮೊಗ್ಗ ಜಿಲ್ಲೆ ಹೊಂಬುಜದ ಡಾ.ಶ್ರೀದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಶ್ರವಣಬೆಳಗೊಳದ ಶ್ರೀ ಅಭಿನವ ಚಾರುಕೀರ್ತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನೆರವೇರಲಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಸಚಿವ ಡಿ.ಸುಧಾಕರ್ ಇತರರು ಅತಿಥಿಗಳಾಗಿ ಆಗಮಿಸಲಿದ್ದಾರೆ. 14ರ ಬೆಳಗ್ಗೆ 10ಕ್ಕೆ ಅಭಿಷೇಕ, ಮಧ್ಯಾಹ್ನ 2ಕ್ಕೆ ಅಮೃತ ಕುಟೀರವನ್ನು ಸಚಿವ ಡಾ.ಎಚ್.ಸಿ. ಮಹದೇವಪ್ಪ ಉದ್ಘಾಟಿಸಲಿದ್ದಾರೆ.
ನೃತ್ಯ ವರ್ಣ – ತಂಡದಿಂದ ಭರತನಾಟ್ಯ
ಗೊಮ್ಮಟಗಿರಿ ಭಗವಾನ್ ಬಾಹುಬಲಿ 75ನೇ ಮಹಾಮಸ್ತಕಾಭಿಷೇಕ ಅಮೃತ ಮಹೋತ್ಸವದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ವಿಜೃಂಭಿಸಲಿದೆ. 13ರ ಸಂಜೆ ಮೈಸೂರಿನ ನೃತ್ಯ ವರ್ಣ ಕಲಾಸೌರಭ ತಂಡದವರು ಭರತನಾಟ್ಯ ಪ್ರಸ್ತುತಪಡಿಸಲಿದ್ದಾರೆ. ವಿದುಷಿ ಕಲ್ಪಿತಾ ನೇತೃತ್ವದ ತಂಡ ಈ ಸಂದರ್ಭ ಪುಷ್ಪಾಂಜಲಿ, ಗಣೇಶ ಸ್ತುತಿ, ವಿಠಲ ಕೃಷ್ಣ ಕುರಿತಾದ ದೇವರನಾಮ, ಬಾಹುಬಲಿ ಕುರಿತಾದ ನೃತ್ಯ ರೂಪಕ ಪಡಮೂಡಲಿದೆ.
ಆಸಕ್ತರಿಗೆ ನರ್ತನ ಕಲೆ ಕಲಿಸುವುದು ಮತ್ತು ಕ್ರಿಯಾಶೀಲವಾಗಿ ಅದನ್ನು ಪ್ರಸ್ತುತ ಪಡಿಸುವಂತೆ ತರಬೇತುಗೊಳಿಸುವಲ್ಲಿ ನೃತ್ಯ ವರ್ಣ ಶ್ರಮಿಸುತ್ತಿದೆ. ಕಲಾಸೇವೆಯನ್ನು ಮಾಡಿ ನರ್ತನ ಪರಂಪರೆಯನ್ನು ಉಳಿಸಿ-ಬೆಳೆಸುವುದು ನಮ್ಮ ಧ್ಯೇಯವಾಗಿದೆ.
-ವಿದುಷಿ ಕಲ್ಪಿತಾ, ಭರತನಾಟ್ಯ ಕಲಾವಿದೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post