No Result
View All Result
Prayagraj - Yesvantpur Special Weekly Express Trains
English Articles

Special Weekly Express Trains Between Prayagraj and Yesvantpur Announced

by kalpa News
July 23, 2026
0

Kalpa Media House  |  Bengaluru | To clear the extra rush of passengers, North Central Railway has announced the operation...

Read moreDetails
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
ABD Maestro Launches 3 Premium Whiskies in Hyderabad

ABD Maestro Launches 3 Premium Whiskies in Hyderabad

July 21, 2026
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
  • Advertise With Us
  • Grievances
  • About Us
  • Contact Us
Thursday, July 23, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

ಗುರು ಅನುಗ್ರಹವಿದ್ದರೆ ದೇವರೂ ವಶವಾಗುತ್ತಾನೆ: ಪಂಡಿತ ಬಾದರಾಯಣಾಚಾರ್ಯ ಅಭಿಮತ

ಮೈಸೂರಿನ ವೆಂಕಟಾಚಲಧಾಮದಲ್ಲಿ ಭಾಗವತ ಮಂಗಳ ಮಹೋತ್ಸವ

kalpa News by kalpa News
December 31, 2022
in ಮೈಸೂರು
0
ಗುರು ಅನುಗ್ರಹವಿದ್ದರೆ ದೇವರೂ ವಶವಾಗುತ್ತಾನೆ: ಪಂಡಿತ ಬಾದರಾಯಣಾಚಾರ್ಯ ಅಭಿಮತ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಮೈಸೂರು  |  ಸಂಗ್ರಹ ರೂಪ: ರಘುರಾಮ  |

ಗುರುಗಳ ಪರಮ ಅನುಗ್ರಹ ಇದ್ದರೆ ದೇವರೂ ನಮಗೆ ವಶವಾಗುತ್ತಾನೆ ಎಂದು ಪಂಡಿತ ಬಾದರಾಯಣಾಚಾರ್ಯ ಹೇಳಿದರು.

ಚಾಮರಾಜ ಜೋಡಿರಸ್ತೆ ವೆಂಕಟಾಚಲಧಾಮ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಾಗವತ ಸಪ್ತಾಹ ಮಂಗಳ ಮಹೋತ್ಸವದಲ್ಲಿ ಅವರು ಪ್ರವಚನ ನೀಡಿದರು.

ಬಲಿ ಚಕ್ರವರ್ತಿಗೆ ಗುರುಗಳ ಅನನ್ಯ ಅನುಗ್ರಹವಿತ್ತು. ದಾನದ ಮೂಲಕ ಅವನು ಸಾರ್ಥಕತೆ ಕಂಡ. ಬಲಿಗೆ ಮುಕ್ತಿ ನೀಡಿದ ವಾಮನ ವಿಶ್ವಕ್ಕೆ ಮಾದರಿಯಾಗಿದ್ದಾನೆ. ನಮಗೆ ವಾಮನನಂತಹ ಮಕ್ಕಳು ಜನಿಸಬೇಕು ಎಂದರೆ ಅದಿತಿ- ಕಶ್ಯಪರಂತೆ ಆದರ್ಶ ಜೀವನ ನಡೆಸಬೇಕು. ಪ್ರತಿ ಮನೆಯೂ ಅದಿತಿಯ ಮನೆಯಾಗಬೇಕು. ಕಲೆ, ಸಂಸ್ಕೃತಿ, ಜ್ಞಾನ, ಭಕ್ತಿ ಮತ್ತು ವೈರಾಗ್ಯಗಳು ಮಕ್ಕಳಿಗೆ ಮನೆಯಿಂದಲೇ ದೊರಕಬೇಕು ಎಂದು ಆಚಾರ್ಯರು ಸಲಹೆ ನೀಡಿದರು.
ಇರುವ ಸಂಪತ್ತಿನಲ್ಲಿ ಧರ್ಮಕ್ಕೆ, ಸ್ವಜನರಿಗೆ, ನಮ್ಮ ಭೋಗಕ್ಕೆ, ಹೂಡಿಕೆಗೆ ಮತ್ತು ಸ್ವಕೀರ್ತಿಗೆ ತಲಾ ಶೇ. 20 ಭಾಗವನ್ನು ಖರ್ಚುಮಾಡಬೇಕು ಎಂದು ಶುಕ್ರಾಚಾರ್ಯರು ತಿಳಿಸಿದ್ದಾರೆ. ಬಲಿ ಚಕ್ರವರ್ತಿ ಈ ಮಾತಿಗೆ ಅನ್ವರ್ಥವಾಗಿದ್ದ. ಇದು ಆತನಿಗೆ ಇಹ ಮತ್ತು ಪರದಲ್ಲಿ ಸುಖವನ್ನು ನೀಡಿತು ಎಂದು ಆಚಾರ್ಯರು ವಿವರಿಸಿದರು.

ಪರನಿಂದನೆ ಸಲ್ಲದು
ಪರನಿಂದನೆ ಕೊಲೆಗೆ ಸಮ. ಆತ್ಮಪ್ರಶಂಸೆಯು ಆತ್ಮಹತ್ಯೆಗೆ ಸಮ. ಹಾಗಾಗಿ ಯಾವುದೇ ಮಾತನಾಡುವ ಮುನ್ನ ಎಚ್ಚರಿಕೆ ಅಗತ್ಯ. ಕೋವಿಯಿಂದ ಹಾರಿದ ಗುಂಡು ಹೇಗೆ ಮರಳಿ ಬರಲು ಸಾಧ್ಯವಿಲ್ಲವೋ ಹಾಗೆ ಆಡಿದ ಮಾತು ಹಿಂದಕ್ಕೆ ಬಾರದು. ನಮ್ಮೆದುರಿಗೆ ಇರುವ ವ್ಯಕ್ತಿಗಳು ಯಾರೆಂಬ ಅರಿವು ಇಟ್ಟುಕೊಂಡು ಮಾತನಾಡುವ ಎಚ್ಚರ ನಮಗೆ ಸದಾ ಇರಬೇಕು ಎಂಬುದನ್ನು ಭಾಗತವ ತಿಳಿಸಿಕೊಟ್ಟಿದೆ ಎಂದರು.

ದೇವರು ಸದಾ ನಮ್ಮ ರಕ್ಷಣೆಗೆ ಇದ್ದಾನೆ
ನಾವು ಗುರುಗಳಿಗೆ ಯಾವತ್ತೂ ಗೌರವ ತೋರಬೇಕು. ಚಲ ಪ್ರತಿಮೆಗಳಲ್ಲಿ ಸಾನ್ನಿಧ್ಯ ಹೆಚ್ಚಾಗಿರುತ್ತದೆ. ಚೇತನ ಪ್ರತಿಮೆಗಳಿಗೆ ಮಾನ್ಯ ಮಾಡಬೇಕಾದದ್ದು ನಮ್ಮ ಕರ್ತವ್ಯವಾಗಿದೆ. ಚೇತನ ಪ್ರತಿಮೆಗೆ ಬಹು ದೊಡ್ಡ ಉದಾಹರಣೆ ಎಂದರೆ ಮೈಸೂರಿನಲ್ಲಿ ವೃಂದಾವನಸ್ಥರಾಗಿರುವ ಶ್ರೀ ಸತ್ಯ ಸಂಕಲ್ಪ ತೀರ್ಥ ಶ್ರೀಪಾದಂಗಳವರು. ಇವರು ತಮ್ಮ ಅವಧಿಯಲ್ಲಿ ಕರಜಗಿ ಗ್ರಾಮದಲ್ಲಿ ಮಾಡಿದ ಶ್ರೀ ಮೂಲ ರಾಮದೇವರ ಸೇವೆ ಬಹು ಮಾನ್ಯವಾದದ್ದು. ದೇವರ ಪೂಜೆಯೊಂದಿಗೆ ಹಸಿದ ಹೊಟ್ಟೆಗಳಿಗೆ ಅನ್ನ ನೀಡಬೇಕು ಎಂಬುದು ಅವರ ಪರಮಾದರ್ಶವಾಗಿತ್ತು. ಬರಗಾಲ ಬಂದ ಸಂದರ್ಭದಲ್ಲಿ ಸತತವಾಗಿ 12 ವರ್ಷಗಳ ಕಾಲ ಅವರು ಕರಜಗಿ ಗ್ರಾಮದಲ್ಲಿದ್ದುಕೊಂಡು ಸಾವಿರಾರು ಜನರಿಗೆ ಅನ್ನದಾನ ಮಾಡಿದರು. ದೂರದ ಊರುಗಳಲ್ಲಿದ್ದ ಪಂಡಿತರನ್ನು ಕರೆದು ಗೌರವಿಸಿ, ಮೃಷ್ಟಾನ್ನ ಉಣಬಡಿಸಿಸಿದರು. ಚೇತನದಲ್ಲಿರುವ ಚೈತನ್ಯಗಳಲ್ಲಿ ಅವರು ದೇವರನ್ನು ಕಂಡ ಮಹಾನುಭಾವರು. ಗುರುಗಳಲ್ಲಿ ಅಂತರ್ಯಾಮಿಯಾಗಿರುವ ದೇವರು ಸದಾ ನಮ್ಮ ರಕ್ಷಣೆಗೆ ಇದ್ದಾನೆ ಎಂಬುದಕ್ಕೆ ಇದು ಬಹುದೊಡ್ಡ ಉದಾಹರಣೆ. ಈ ವಿಶೇಷತೆಗಳೇ ಇಂದು ನಮಗೆ ಆದರ್ಶವಾಗಬೇಕು ಎಂದು ಬಾದರಾಯಣಾಚಾರ್ಯರು ವಿವರಿಸಿದರು.

ಗಜೇಂದ್ರ ಮೋಕ್ಷ
ತಾಪಸ ಮನ್ವಂತರದಲ್ಲಿ ಅಗಸ್ತ್ಯ ಮಹರ್ಷಿಗಳಿಗೆ ಅವಜ್ಞೆ ತೋರಿದ ಕಾರಣಕ್ಕಾಗಿ ಇಂದ್ರದ್ಯುಮ್ನ ಮಹಾರಾಜ ಆನೆಯಾಗಿ (ಗಜೇಂದ್ರ) ಜನಿಸಿದ. ಈತ ಸತತವಾಗಿ ಒಂದು ಸಾವಿರ ವರ್ಷಗಳ ಕಾಲ ಮೊಸಳೆಯಿಂದ ಬಿಡಿಸಿಕೊಳ್ಳಲು ಹೋರಾಡಿದ. ಕಡೆಗೆ ದೇವರೇ ಇದಕ್ಕೆ ಪರಿಹಾರ ಎಂಬ ಚಿಂತನೆ ಬಂತು. ತಕ್ಷಣವೇ ನಾರಾಯಣ ಬಂದ. ತನ್ನ ಚಕ್ರದಿಂದ ಮೊಸಳೆಯನ್ನು ಸಂಹರಿಸಿ ಗಜೇಂದ್ರನಿಗೆ ಮೋಕ್ಷ ನೀಡಿದ. ನಮಗೆ ಸದಾ ಏಕೆ ದೇವರ ಚಿಂತನೆ ಬೇಕು ಎಂಬುದನ್ನು ವಿವರಿಸಲು ಮತ್ಯ್ಸ ಪುರಾಣವೂ ಈ ಕಥೆಯನ್ನು ಉಲ್ಲೇಖಿಸಿದೆ ಎಂದು ಆಚಾರ್ಯರು ವಿವರಿಸಿದರು.
ಎಲ್ಲ ದೇಶ ಕಾಲಕ್ಕೂ ಅನ್ವಯ
ನಿರಂತರವಾಗಿ ದೇವರ ಮಹಿಮೆಗಳನ್ನು ಕೊಂಡಾಡುವುದರೊಂದಿಗೆ ಎಲ್ಲ ದೇಶ-ಕಾಲದ ಜನರು ಅನುಸರಿಸಬೇಕಾದ ಜೀವನದ ಕ್ರಮವನ್ನು ಹೇಳುವಲ್ಲಿ ಈ ಕೃತಿ ಅಗ್ರಗಣ್ಯವಾಗಿದೆ ಎಂದರು.

ಜ್ಞಾನ, ಭಕ್ತಿ, ಗುರುಹಿರಿಯರ ಸ್ಥಾನ, ಕರ್ಮಗಳನ್ನು ಕಳೆದುಕೊಂಡು ಜೀವಿಸುವ ವಿಧಾನಗಳೊಂದಿಗೆ ವಿಶ್ವಪ್ರೇಮವನ್ನು ಭಾಗವತದ ಪ್ರತಿಯೊಂದು ವ್ಯಾಕ್ಯವೂ ಧ್ವನಿಸುತ್ತದೆ. ದುಷ್ಟಶಕ್ತಿಗಳ ದಮನಕ್ಕೆ, ಶಿಷ್ಟರ ಮತ್ತು ಪರಮ ಭಕ್ತರ ರಕ್ಷಣೆಗೆ ದೇವರು ಮನ್ವಂತರಗಳಲ್ಲಿ ಅವತರಿಸಿದ ಸಂದರ್ಭಗಳನ್ನು ಸಮಗ್ರವಾಗಿ ಅರಿಯಲು ಭಾಗವತ ಶ್ರವಣ ಮಾಡಬೇಕು ಎಂದು ಅವರು ತಿಳಿಸಿದರು.

ಮಾನವ ಜನ್ಮ ಬಹು ದೊಡ್ಡದು. ಜೀವನದಲ್ಲಿ ಅರ್ಧದಷ್ಟು ಆಯುಷ್ಯವನ್ನು ನಾವು ನಿದ್ರೆಯಲ್ಲಿಯೇ ಕಳೆಯುತ್ತೇವೆ. ಸಾಧನೆಗಾಗಿ ದೊರೆತ ಶರೀರದಿಂದ ಪುಣ್ಯ ಸಂಪಾದನೆ ಮಾಡಿಕೊಂಡು ಮೋಕ್ಷ ಸಂಪಾದಿಸಬೇಕು. ವ್ಯರ್ಥವಾಗಿ ಕಾಲಹರಣ, ಹಿರಿಯರ ನಿಂದನೆ, ಪರ ಪೀಡನೆಗಳನ್ನು ಸರ್ವಥಾ ಮಾಡಬಾರದು ಎಂದವರು ಹೇಳಿದರು.
ಕರ್ತವ್ಯಕ್ಕೂ, ಮೋಹಕ್ಕೂ ಕೂದಲೆಳೆಯ ಅಂತರವಿದೆ. ಆಪತ್ತು ಬಂದಾಗ, ಕುಟುಂಬಕ್ಕೆ ಸೂಕ್ತ ರಕ್ಷಣೆ ಕೋಡಬೇಕು. ಅಗತ್ಯವಿದ್ದಾಗ ಇತರರಿಗೆ ಸಹಾಯ ಮಾಡಬೇಕು. ಆದರೆ ಅದಕ್ಕೇ ಪೂರ್ಣ ಅಂಟಿಕೊಂಡು ಬದುಕಿನ ಮಹದುದ್ದೇಶವನ್ನು ಮರೆಯಬಾರದು ಎಂದ ಅವರು ಜಡಭರತನ ಕಥೆಯನ್ನು ಸೋದಾಹರಣವಾಗಿ ವಿವರಿಸಿದರು.

ತೃಪ್ತಿ ದೂರವಾಗಿದೆ
ಭಾರತೀಯರ ಬಹುದೊಡ್ಡ ಗುಣವೇ ತೃಪ್ತಿ. ಹಾಗಾಗಿ ಶತ ಶತಮಾನಗಳಿಂದ ಈ ನಾಡಿನ ಸಮಸ್ತ ಪ್ರಜೆಗಳು ಸುಖವಾಗಿ ಜೀವಿಸಿದ್ದರು. ಭಕ್ತಿಯ ನೆಲೆಯಲ್ಲಿ ತೃಪ್ತಿ ಕಂಡುಕೊಂಡವನಿಗೆ ಎಂದೂ ಸೋಲಿಲ್ಲ. ಇದಕ್ಕೆ ಬಲಿಚಕ್ರವರ್ತಿಯೇ ದೊಡ್ಡ ಉದಾಹರಣೆ ಎಂದರು. ಇಂದು ದೇವರು, ಧರ್ಮಗಳನ್ನೇ ಮರೆತು ಅತೃಪ್ತಿಯನ್ನೇ ಹೆಚ್ಚಾಗಿ ಅಂಟಿಸಿಕೊಂಡಿರುವ ಕಾರಣ ಬದುಕು ಅತಂತ್ರವಾಗಿದೆ. ಈ ಕಾಲಘಟ್ಟದಲ್ಲಿ ಭಾಗವತ ನೀಡಿದ ಸಂದೇಶಗಳನ್ನು ಪಾಲನೆ ಮಾಡುವುದೇ ಉತ್ತಮ ಮಾರ್ಗ ಎಂದು ಬಾದರಾಯಣಾಚಾರ್ಯ ನುಡಿದರು.

ಕಾರ್ಯಕ್ರಮ ಆಯೋಜಕರಾದ ಅಂಬುಜಾ, ಕೃಷ್ಣಮೂರ್ತಿ, ವಿಜಯಲಕ್ಷ್ಮೀ ಇತರರು ಹಾಜರಿದ್ದರು. ನಂತರ ಪಂಡಿತ ಬಾದರಾಯಣಾಚಾರ್ಯ ದಂಪತಿಗೆ ಗೌರವಾರ್ಪಣೆ ಮಾಡಲಾಯಿತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Bhagavata PuranaKannada News WebsiteLatest News KannadamysorePandit Badarayanacharyaಪಂಡಿತ ಬಾದರಾಯಣಾಚಾರ್ಯಭಾಗವತ ಸಪ್ತಾಹಮೈಸೂರುಶ್ರೀಮದ್ ಭಾಗವತ
Share198Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಹೊಸ ವರ್ಷ ಸ್ವಾಗತಿಸಲು ಸಿದ್ಧವಾಗಿದೆ ಶಿವಮೊಗ್ಗದ ಪ್ರತಿಷ್ಠಿತ ಕಾಸ್ಮೋ ಕ್ಲಬ್

Next Post

ಬಾಲ್ಯದಿಂದಲೇ ಮಕ್ಕಳಿಗೆ ಸಾಹಿತ್ಯ ಓದುವ ಹವ್ಯಾಸ ರೂಢಿಸಿ: ಚಿತ್ರಸಾಹಿತಿ ಪ್ರಮೋದ್ ಮರವಂತೆ ಸಲಹೆ

kalpa News

kalpa News

Next Post
ಬಾಲ್ಯದಿಂದಲೇ ಮಕ್ಕಳಿಗೆ ಸಾಹಿತ್ಯ ಓದುವ ಹವ್ಯಾಸ ರೂಢಿಸಿ: ಚಿತ್ರಸಾಹಿತಿ ಪ್ರಮೋದ್ ಮರವಂತೆ ಸಲಹೆ

ಬಾಲ್ಯದಿಂದಲೇ ಮಕ್ಕಳಿಗೆ ಸಾಹಿತ್ಯ ಓದುವ ಹವ್ಯಾಸ ರೂಢಿಸಿ: ಚಿತ್ರಸಾಹಿತಿ ಪ್ರಮೋದ್ ಮರವಂತೆ ಸಲಹೆ

Leave a Reply Cancel reply

Your email address will not be published. Required fields are marked *

No Result
View All Result
Prayagraj - Yesvantpur Special Weekly Express Trains
English Articles

Special Weekly Express Trains Between Prayagraj and Yesvantpur Announced

by kalpa News
July 23, 2026
0

Kalpa Media House  |  Bengaluru | To clear the extra rush of passengers, North Central Railway has announced the operation...

Read moreDetails
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
ABD Maestro Launches 3 Premium Whiskies in Hyderabad

ABD Maestro Launches 3 Premium Whiskies in Hyderabad

July 21, 2026
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL