ಕಲ್ಪ ಮೀಡಿಯಾ ಹೌಸ್ | ಮೈಸೂರು |
ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಸರ್ಕಾರಿ ಬಸ್’ನಲ್ಲಿ ಮಹಿಳೆಯರ ಉಚಿತ ಪ್ರಯಾಣ ದಿನಕ್ಕೊಂದು ಅವಾಂತರ ಸೃಷ್ಠಿಸುತ್ತಿದ್ದು, ಪರಿಣಾಮವಾಗಿ ಸಾರಿಗೆ ಸಿಬ್ಬಂದಿ ಮಾತ್ರವಲ್ಲ ಇತರೆ ಪ್ರಯಾಣಿಕರೂ ಸಹ ಪರದಾಡುವಂತಾಗಿದೆ.
ಹೌದು… ಶಕ್ತಿ ಯೋಜನೆಯ ಹೆಸರಿನಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್’ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಆರಂಭಿಸಿ ಒಂದು ವಾರ ಕಳೆದಿದೆ. ಆರಂಭವಾದಾಗಿನಿಂದ ಕೆಎಸ್’ಆರ್’ಟಿಸಿಯ ಬಹುತೇಕ ಎಲ್ಲ ಸಾಮಾನ್ಯ ಸಾರಿಗೆ ಬಸ್’ಗಳಲ್ಲಿ ಮಹಿಳೆಯರೇ ತುಂಬಿದ್ದಾರೆ.
ಪ್ರಮುಖವಾಗಿ ದೂರದ ಊರುಗಳಿಗೆ ಅದರಲ್ಲೂ ಕ್ಷೇತ್ರಗಳಿಗೆ ತೆರಳುವ ಬಸ್’ನಲ್ಲಿ ಶೇ.೭೦ಕ್ಕೂ ಅಧಿಕ ಮಹಿಳೆಯರೇ ಸಂಚರಿಸುತ್ತಿದ್ದು, ಇದರಿಂದ ಪುರುಷ ಪ್ರಯಾಣಿಕರು ಹಾಗೂ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಅಕ್ಷರಶಃ ಪರದಾಡುವಂತಾಗಿದೆ.
ಅಲ್ಲದೇ, ಬಸ್ ನಿಲ್ದಾಣಗಳಲ್ಲಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಏಕಾಏಕಿ ಬಸ್ ಹತ್ತುವ ವೇಳೆ ನೂಕು ನುಗ್ಗಾಟ ಸಂಭವಿಸಿದ್ದು, ಹಲವು ಕಡೆಗಳಲ್ಲಿ ಬಸ್ ಬಾಗಿಲುಗಳನ್ನೇ ಮುರಿದು ಹಾಕಿರುವ ಘಟನೆ ನಡೆದಿದೆ. ಇನ್ನು ಹಲವು ಕಡೆಗಳಲ್ಲಿ ಇಡೀ ಬಸ್ ತುಂಬ ಮಹಿಳೆಯೂ ಕುಳಿತು ಟಿಕೇಟ್ ಪಡೆದು ಪ್ರಯಾಣಿಸುವ ಪುರುಷ ಪ್ರಯಾಣಿಕರು ನಿಂತು ಪ್ರಯಾಣಿಸುವ ಘಟನೆಗಳು ನಡೆದಿದ್ದು, ಈ ವೇಳೆ ವಾಗ್ವಾದಗಳೂ ಸಹ ನಡೆದಿವೆ.
ಅಕ್ಷರಶಃ ಹೊಡೆದಾಡಿದ ಮಹಿಳೆಯರು
ಸರ್ಕಾರಿ ಬಸ್’ನಲ್ಲಿ ಸೀಟಿಗಾಗಿ ಮಹಿಳೆಯರು ಅಕ್ಷರಶಃ ಹೊಡೆದಾಡಿರುವ ವೀಡಿಯೋವೊಂದು ಇಂದು ಮುಂಜಾನೆಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಂದು ಮಾಹಿತಿಯ ಪ್ರಕಾರ ಈ ವೀಡಿಯೋ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದಿದ್ದು ಎನ್ನಲಾಗಿದ್ದು, ಸೀಟಿಗಾಗಿ ಮಹಿಳೆಯರು ಜಡೆ ಹಿಡಿದು ಹೊಡೆದಾಡಿದ್ದಾರೆ. ಆದರೆ, ಈ ಘಟನೆ ನಡೆದಿದ್ದು, ಚಾಮುಂಡಿ ಬೆಟ್ಟದಲ್ಲಿಯೇ ಎಂಬ ಕುರಿತಾಗಿ ಖಚಿತತೆಯಿಲ್ಲ.
ವೀಡಿಯೋದಲ್ಲಿ ಏನಿದೆ?
ಸರ್ಕಾರಿ ಬಸ್’ವೊಂದರಲ್ಲಿ ಬಹುತೇಕ ನಾರಿ ಮಣಿಗಳೇ ತುಂಬಿದ್ದು, ಸೀಟಿ ಪಡೆಯುವ ವಿಚಾರದಲ್ಲಿ ಜಗಳವಾಗಿದೆ. ಸುಮಾರು 5-6 ಮಹಿಳೆಯರು ಸೀಟು ಬಿಡು, ನೀನು ಬಿಡು, ನನ್ನದು ನನ್ನದು ಎಂದು ಜಗಳವಾಡುತ್ತಾ ಅಕ್ಷರಶಃ ಒಬ್ಬರಿಗೊಬ್ಬರು ಜಡೆ ಹಿಡಿದ ಕೂಗಾಡಿಕೊಂಡು ಹೊಡೆದಾಡಿದ್ದಾರೆ. ಈ ವೇಳೆ ಇಬ್ಬರು ಮಹಿಳೆಯರು ಸೀರೆ ಸೆರುಗು ಜಾರಿ ಬಿದ್ದರೂ ಪ್ರಜ್ಞೆ ಇಲ್ಲದಂತೆ ಸೀಟಿಗಾಗಿ ಹೊಡೆದಾಡಿದ್ದು ವಿಪರ್ಯಾಸ ಎನಿಸಿತು.
Also read: ಎ. ಜೆ. ಗೀತಾಗೆ ಕುವೆಂಪು ವಿಶ್ವವಿದ್ಯಾಲಯದ ಪಿಎಚ್.ಡಿ ಪದವಿ
ಇನ್ನು, ಈ ವೇಳೆ ಜಗಳ ಬಿಡಿಸಲು ಬಂದ ಕೆಲವು ಪುರುಷರ ಮೇಲೂ ಸಹ ಮಹಿಳೆಯರು ದೌರ್ಜನ್ಯ ನಡೆಸಿದ್ದು, ಕೊನೆಗೆ ಇಬ್ಬರು ಪುರುಷರ ನಡುವೆಯೇ ಇದು ಹೊಡೆದಾಟಕ್ಕೆ ಕಾರಣವಾಯಿತು.
ಈ ಘಟನೆಯಿಂದ ಬಸ್ ಸಿಬ್ಬಂದಿ ಅಕ್ಷರಶಃ ತಲ್ಲಣಿಸಿ ಹೋಗಿದ್ದು, ಪುರುಷ ಪ್ರಯಾಣಿಕರು ಸರ್ಕಾರಿ ಬಸ್’ನಲ್ಲಿ ಪ್ರಯಾಣಿಸುವುದೇ ದುಸ್ತರವಾಗಿ ಪರಿಣಮಿಸಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















