ಕಲ್ಪ ಮೀಡಿಯಾ ಹೌಸ್ | ಮೈಸೂರು |
ನೈರುತ್ಯ ಪದವೀಧರ ಕ್ಷೇತ್ರದ #South West Graduate Constituency ಅಭ್ಯರ್ಥಿ ಹೆಸರಾಂತ ಮಕ್ಕಳ ತಜ್ಞ ಡಾ. ಧನಂಜಯ ಸರ್ಜಿ #Dr. Dhananjaya Sarji ಅವರು ಪ್ರಾದೇಶಿಕ ಆಯುಕ್ತರ ಕಛೇರಿಯಲ್ಲಿ ಪ್ರಾದೇಶೀಕ ಆಯುಕ್ತರಿಗೆ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಎಚ್.ಡಿ. ಕುಮಾರಸ್ವಾಮಿ, #H D Kumarawamy ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, #R Ashok ಶಿವಮೊಗ್ಗ ಜನಪ್ರಿಯ ಸಂಸದರಾದ ಬಿ.ವೈ. ರಾಘವೇಂದ್ರ, #B Y Raghavendra ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಜರಿದ್ದರು.
Also read: ಬರಲೇ ಇಲ್ಲ ಪ್ರಜ್ವಲ್ ರೇವಣ್ಣ | ಏರ್ ಪೋರ್ಟ್’ನಲ್ಲಿ ಕಾದು ಕಾದು ಸುಸ್ತಾದ ಅಧಿಕಾರಿಗಳು
ಇದಕ್ಕೂ ಮುನ್ನ ತಾಯಿ ರೇಣುಕಮ್ಮ, ಪತ್ನಿ ನಮಿತಾ ಸರ್ಜಿ ಅವರೊಂದಿಗೆ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು. ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್.ರುದ್ರೇಗೌಡ್ರು, ಬಿಜೆಪಿ ಹಿರಿಯ ಮುಖಂಡರಾದ ಎನ್.ಜೆ. ರಾಜಶೇಖರ್ ( ಸುಭಾಷ್) ಸೇರಿದಂತೆ ಕುಟುಂಬದ ಸದಸ್ಯರು, ಬಂಧುಗಳು, ಹಿತೈಷಿಗಳು ಭಾಗಿಯಾಗಿದ್ದರು, ಅಲ್ಲದೇ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ದಾವಣಗೆರೆ (ಚನ್ನಗಿರಿ, ನ್ಯಾಮತಿ, ಹೊನ್ನಾಳಿ) ಜಿಲ್ಲೆಗಳ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

























