ಕಲ್ಪ ಮೀಡಿಯಾ ಹೌಸ್ | ಮೈಸೂರು |
ನಾವೆಲ್ಲರೂ ಪರಸ್ಪರ ಸಹಕಾರದಿಂದ ಬದುಕಿದಾಗ ಮಾತ್ರ ಸ್ವಾಸ್ಥ್ಯ ಸಮಾಜ ರೂಪುಗೊಳ್ಳಲು ಸಾಧ್ಯ ಎಂದು ಕರ್ನಾಟಕ ವಿಪ್ರ ವಕೀಲರ ವೇದಿಕೆ ಟ್ರಸ್ಟ್ ಅಧ್ಯಕ್ಷ ಕೆ.ವಿ. ರವಿಚಂದ್ರನ್ ಹೇಳಿದರು.
ಟ್ರಸ್ಟ್ ವತಿಯಿಂದ ನೆಲೆ ಅಜಿತನ ಅನಾಥ ಗಂಡು ಮಕ್ಕಳ ವಸತಿ ನಿಲಯದ ಮಕ್ಕಳಿಗೆ ಆಯೋಜಿಸಲಾಗಿದ್ದ ಉಪಹಾರ ವ್ಯವಸ್ಥೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಾಜದಲ್ಲಿ ನಾವೆಲ್ಲರೂ ಒಂದು ಕುಟುಂಬದಂತೆ ಬದುಕಬೇಕು. ಪರಸ್ಪರ ಸಹಕಾರದಿಂದ ಬದುಕಿದರೆ ಮಾತ್ರ ಸಮಾಜ ಸ್ವಾಸ್ಥ್ಯ ಸಮಾಜವಾಗಿ ರೂಪುಗೊಳ್ಳುತ್ತದೆ ಎಂದು ತಿಳಿಸಿದರು.
Also read: ತುಮಕೂರು | ಹೆದ್ದಾರಿಯಲ್ಲಿ ಪಲ್ಟಿಯಾದ ಖಾಸಗಿ ಬಸ್ | ಮೂವರು ಸಾವು | 20 ಮಂದಿಗೆ ಗಾಯ
ಉಪಾಧ್ಯಕ್ಷೆ ಜಯಶ್ರೀ ಶಿವರಾಮ್ ಮಾತನಾಡಿ, ಇಂದು ನಮಗೆ ಬಹಳ ಸಂತೋಷವಾಗುತ್ತಿದೆ. ಅನಾಥಾಲಯಗಳು ಎಂದಿಗೂ ಅನಾಥವಲ್ಲ ಅವೆಲ್ಲವೂ ಸಾರ್ವಜನಿಕ ಆಲಯಗಳು ಸಂಘ ಸಂಸ್ಥೆಗಳು ಇಂತಹ ವಸತಿ ನಿಲಯಗಳಿಗೆ ಭೇಟಿ ನೀಡಿ ಮಕ್ಕಳಲ್ಲಿ ಆತ್ಮ ವಿಶ್ವಾಸ ಮೂಡಿಸಬೇಕು ಎಂದರು.
ಸಮಾಜ ಎಂದಿಗೂ ನಿಮ್ಮೊಂದಿಗೆ ಇದೆ ಎಂಬುವ ನಂಬಿಕೆ ಅವರಲ್ಲಿ ಬೆಳೆಸಬೇಕು. ನಮ್ಮ ಸಾಮಾಜಿಕ ಕರ್ತವ್ಯವಾಗಿ ಇಂದು ಉಪಹಾರದ ವ್ಯವಸ್ಥೆ ನಾವು ಮಾಡಿದ್ದೇವೆ. ಈ ಸೇವಾ ಚಟುವಟಿಕೆಗಳು ಪ್ರಚಾರಕ್ಕಾಗಿ ಮಾಡದೆ ಪ್ರೇರಣೆಗಾಗಿ ನಾವು ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಕೆ.ಆರ್. ಶಿವಶಂಕರ್, ಅಧ್ಯಕ್ಷರಾದ ಕೆ.ವಿ. ರವಿಚಂದ್ರನ್, ಉಪಾಧ್ಯಕ್ಷೆ ಜಯಶ್ರೀ ಶಿವರಾಂ, ಕಾರ್ಯದರ್ಶಿ ನಟರಾಜ್, ರಾಜಲಕ್ಷ್ಮಿ, ಎನ್.ಆರ್. ಲಕ್ಷ್ಮಿ, ಪ್ರಕಾಶ್, ಲಕ್ಷ್ಮಿ ಪ್ರಸಾದ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post