ಕಲ್ಪ ಮೀಡಿಯಾ ಹೌಸ್ | ಮೈಸೂರು |
ಶರನ್ನವರಾತ್ರಿ #Sharannavarathri ಪ್ರಯುಕ್ತ ಮೈಸೂರಿನ ಮೂಕಾಂಬಿಕಾ ಸಮೃದ್ದಿ ಬಡಾವಣೆಯ ಪೂಜಾ ಪುನೀತ್ ರವರ ಕುಟುಂಬದ ಬನಶಂಕರಿ ಬೊಂಬೆ ಮನೆ #Banashankari Bombe Mane ದಸರಾ ಬೊಂಬೆ ಪ್ರದರ್ಶನ-2023 #Dasara Doll Show ಎಲ್ಲರ ಗಮನ ಸೆಳೆಯುತ್ತಿದೆ.
500 ಕ್ಕೂ ಹೆಚ್ಚು ಬೊಂಬೆಗಳ ಪ್ರದರ್ಶನ ಇರುವ ಈ ಗೊಂಬೆ ಮನೆಯಲ್ಲಿ ಪೌರಾಣಿಕ, ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ವಿಚಾರಗಳ ಗೊಂಬೆಗಳು ಆಕರ್ಷಣೀಯವಾಗಿದೆ. ಸಮುದ್ರ ಮಂಥನ, ಶ್ರವಣ ಕುಮಾರ, ಸಪ್ತ ಋಷಿಗಳು, ಮಹಾಭಾರತ ಬರೆಯುತ್ತಿರುವ ಗಣಪತಿ, ಘಟೋದ್ಗಜ, ಬೇಡರ ಕಣ್ಣಪ್ಪ ಸೇರಿದಂತೆ ಹಲವಾರು ಗೊಂಬೆಗಳು ನಮ್ಮ ಪುರಾಣಗಳನ್ನು ತಿಳಿಸುತ್ತವೆ.
ಸನಾತನ ಹಿಂದೂ ಧರ್ಮದ ಪ್ರಮುಖ ಹಬ್ಬಗಳನ್ನು ತಿಳಿಸುವುದು ಈ ವರ್ಷದ ಬನಶಂಕರಿ ಬೊಂಬೆ ಮನೆಯ ವಿಷಯ ಎಂದು ಬೊಂಬೆ ಮನೆಯ ಪೂಜಾ ತಿಳಿಸಿದರು.
ವಿಶ್ವ ದಾಖಲೆ ನಿರ್ಮಿಸಿರುವ ಪೃಥು ಪಿ ಅದ್ವೈತ್ ರವರು ಬನಶಂಕರಿ ಬೊಂಬೆ ಮನೆ ವೀಕ್ಷಕರಿಗೆ ಸ್ವಾರಸ್ಯಕರವಾಗಿ ಬೊಂಬೆಗಳ ಕಥೆ ಹೇಳುತ್ತಾರೆ.
ಸಾರ್ವಜನಿಕರಿಗೆ ಬೊಂಬೆ ವೀಕ್ಷಣೆಗೆ ಮುಕ್ತ ಅವಕಾಶವಿದ್ದು ಬೊಂಬೆಗಳನ್ನು ವೀಕ್ಷಣೆ ಮಾಡಬಹುದು ಎಂದು ತಿಳಿಸಿದರು.
ಬನಶಂಕರಿ ಬೊಂಬೆ ಮನೆ ಉದ್ಘಾಟಸಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರಾದ ಶ್ರೀಯುತ ನಟರಾಜ್ ಜೋಯ್ಸ್ ರವರು, ದಸರಾ ಬೊಂಬೆಗಳನ್ನು ಕೂರಿಸುವುದು ನಮ್ಮ ಸಂಪ್ರದಾಯ ಅದನ್ನು ಮುಂದುವರಿಸಿಕೊಂಡು ಹೋಗಲು ಯುವಕರು ಆಸಕ್ತಿ ತೋರಿಸಬೇಕು ಎಂದು ತಿಳಿಸಿದರು.
ಶ್ರೀಮತಿ ಶುಭಾ ಅರುಣ್ ದೇವರ ನಾಮಗಳನ್ನು ಹಾಡಿದರು. ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ಅಧ್ಯಕ್ಷರಾದ ಕೆ.ಆರ್. ಗಣೇಶ್, ಶ್ರೀಮತಿ ಸರಸ್ವತಿ, ಪುನೀತ್ ಜಿ ಕೂಡ್ಲೂರು, ಪೃಥು ಪಿ ಅದ್ವೈತ್, ಮೂಕಾಂಬಿಕಾ ಸಮೃದ್ದಿ ಬಡಾವಣೆಯ ನಿವಾಸಿಗಳು ಹಾಗೂ ಸಾರ್ವಜನಿಕರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post