No Result
View All Result
KRCS Shikaripura Achieves 100% Result in CBSE Class X Board Exams
English Articles

KRCS Shikaripura Achieves 100% Result in CBSE Class X Board Exams

by ಕಲ್ಪ ನ್ಯೂಸ್
April 16, 2026
0

Kalpa Media House  |  Shikaripura | Kumadvathi Residential Central School (KRCS), Shikaripura, has achieved a 100% pass result in the...

Read moreDetails
ಬೆಂಗಳೂರು–ಬಂಗಾರಪೇಟೆ ಮೆಮು ರೈಲುಗಳಿಗೆ ತಾತ್ಕಾಲಿಕ ನಿಲುಗಡೆ

Cancellation of Ashokapuram – KSR Bengaluru MEMU trains

April 16, 2026
First VALORANT Campus Cup Champions Crowned

First VALORANT Campus Cup Champions Crowned

April 15, 2026
Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

Welfare Impossible Without Dharma; Upholding Righteousness is Everyone’s Duty: Yadugiri Yatiraja Swamiji

April 13, 2026
Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

Berger Paints Responds to India’s Heat Challenge with ‘Garmi Gone, Thandak On’ Home Cooling Solutions Range

April 13, 2026
  • Advertise With Us
  • Grievances
  • About Us
  • Contact Us
Thursday, April 30, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ನರಸಿಂಹ ಜಯಂತಿ ವಿಶೇಷ: ಕಾರುಣ್ಯಮೂರ್ತಿ ನರಸಿಂಹ ದೇವರ ನೆನೆಯದ ಜನ್ಮವೇ ವ್ಯರ್ಥ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
May 16, 2019
in Special Articles
0
ನರಸಿಂಹ ಜಯಂತಿ ವಿಶೇಷ: ಕಾರುಣ್ಯಮೂರ್ತಿ ನರಸಿಂಹ ದೇವರ ನೆನೆಯದ ಜನ್ಮವೇ ವ್ಯರ್ಥ
Share on FacebookShare on TwitterShare on WhatsApp

ವೈಶಾಖ ಮಾಸದಲ್ಲಿ ಅಕ್ಷಯತೃತೀಯ ನಂತರ ಬರುವ ಒಂದು ಪ್ರಮುಖ ಪರ್ವ ನರಸಿಂಹ ಜಯಂತಿ. ಪುರಾಣ ಪ್ರಸಿದ್ಧವಾದ ದಶಾವತಾರಗಳಲ್ಲಿ ಶ್ರೀನರಸಿಂಹ ಅವತಾರವು ನಾಲ್ಕನೆಯದು. ವೈಶಾಖ ಶುದ್ಧ ಚತುರ್ದಶಿಯಂದು ಸಮಸ್ತ ದೇವತೆಗಳ ಕೋರಿಕೆಯಂತೆ ದುಷ್ಟ ಹಿರಣ್ಯಕಶಿಪುವಿನ ಸಂಹರಿಸಲು ಸರ್ವೋತ್ತಮನಾದ ಶ್ರೀಮಹಾವಿಷ್ಣುವು ತಾಳಿದ ಅವತಾರವಿದು.

ನೃಸಿಂಹಾತಾರದಲ್ಲಿ ಉಳಿದ ಎಲ್ಲಾ ಅವತಾರಗಳಂತೆ ದುಷ್ಟ ಶಿಕ್ಷಣ ಶಿಷ್ಟ ಪರಿಪಾಲನಗಳ ಜೊತೆಗೆ ಭಗವಂತನು ಅಸಾಧಾರಣವಾದ ತನ್ನ ನೈಜ ವಿಭೂತಿಯನ್ನು ಭಗವತ್ ತತ್ತ್ವವನ್ನೂ ಸ್ಪಷ್ಟವಾಗಿ ಪ್ರಕಟಪಡಿಸಿದ್ದಾನೆ.


ಹಿರಣ್ಯಕಶಿಪು ಸಾಮಾನ್ಯ ವ್ಯಕ್ತಿಯಲ್ಲ ; ವೈಕುಂಠವಾಸಿಯೇ ಆಗಿದ್ದು ಶಾಪಗ್ರಸ್ತನಾಗಿ ಭೂಮಿಯಲ್ಲಿ ಹುಟ್ಟಿ ಕಠಿಣ ತಪಸ್ಸಿನಿಂದ ಬ್ರಹ್ಮನಿಂದ ವರಪಡೆದು, ಮೂರು ಲೋಕಗಳನ್ನು ಗೆದ್ದ ಜಗತ್‌ವಿಜೇತ. ಜನರು ಹೇಳುವ ದೇವರು ಎಂಬುದು ಇರುವದಾದರೇ ಅದು ನಾನೇ ಅಲ್ಲದೆ ಬೇರೆ ಯಾರು ಇಲ್ಲ ಎಂಬ ದುರಾಗ್ರಹಿ ಇಂಥಹವನಿಗೆ ಮಗ ಭಕ್ತಪ್ರಹ್ಲಾದ ಮಾತಿನಲ್ಲಿ ನಂಬಿಕೆ ಬರಲಿಲ್ಲ ಅವನಿಗೆ ಬೇಕು ಪ್ರತ್ಯಕ್ಷ ಪ್ರತೀತಿ. ನಿನ್ನ ವಿಷ್ಣುವು ಎಲ್ಲಾ ಕಡೆ ಇರುವುದಾದರೇ ಈ ಕಂಭದಲ್ಲಿದ್ದಾನೋ? ಆಗ ನಿರ್ಭಯನಾದ ಶ್ರದ್ಧಾವಂತನಾದ ಪ್ರಹ್ಲಾದನು ಕೊಟ್ಟ ಉತ್ತರವೂ ಅಷ್ಟೇ ಸ್ಪಷ್ಟ ಹಾಗೂ ನಿಸ್ಸಂದಿಗ್ದವಾಗಿತ್ತು. ಎಲ್ಲೆಲ್ಲೂ ಇರುವವನು ಈ ಕಂಭದಲ್ಲಿ ಮಾತ್ರ ಏಕಿಲ್ಲ ಕಂಭದಲ್ಲಿ ಇಲ್ಲ ಎಂದರೆ ಭಗವಂತನ ಸರ್ವವ್ಯಾಪಕತ್ವಕ್ಕೆ ಅಡ್ಡಿ ಬರುವುದಿಲ್ಲವೇ? ಕಂಭದಲ್ಲೂ ಬಿಂಬದಲ್ಲೂ ಎಲ್ಲೆಡೆಯೂ ಇದ್ದಾನೆ ಎಂದಾಗ ಹಿರಣ್ಯ ಕಶಿಪು ಕಂಭವನ್ನು ಝಡಿಸಿದಾಗ ಆ ಜಡ ಕಂಭದಲ್ಲಿ ಚಿನ್ಮಯನಾದ ನರಸಿಂಹ ರೂಪದಿಂದ ಭಗವಂತನು ಪ್ರಕಟಗೊಂಡು ದೈತ್ಯ ಹಿರಣ್ಯಕಶಿಪುವನ್ನು ಸಂಹಾರಗೈಯುತ್ತಾನೆ.


ನರಸಿಂಹನ ಮೂರ್ತಿಯಲ್ಲಿ ಮನುಷ್ಯದೇಹ ಮತ್ತು ಸಿಂಹದ ಮುಖವನ್ನು ನೋಡುತ್ತೇವೆ. ಜೀವವಿಕಾಸವಾದ ಅನುಗುಣವಾಗಿ ದಶಾವತಾರಗಳಿಗೆ ವ್ಯಾಖ್ಯಾನ ಮಾಡುತ್ತ, ಕೇವಲ ಜಲಚರ ಪ್ರಾಣಿಯಾಗಿ ಮೀನು-ಮತ್ಸ್ಯಾವತಾರದಿಂದ ವಿಕಾಶದೆಶೆ ಪ್ರಾರಂಭ. ಜಲಸ್ಥಳಗಳೆರಡರಲ್ಲೂ ಸಂಚರಿಸುತ್ತ ಮುಂದಿನ ಘಟ್ಟ ಆಮೆ ಕೂರ್ಮಾವತಾರದ ಭಾವನೆಗೆ ಕಾರಣವಾಯ್ತು. ಅದಕ್ಕಿಂತಲೂ ಹೆಚ್ಚು ವಿಕಾಸವುಳ್ಳದಾಗಿರುವ ಘೋರ ಪರಾಕ್ರಮವುಳ್ಳ ಹಂದಿ ವರಾಹವತಾರವು ಅನಂತರ ಬರುವುದು. ಸಿಂಹಮುಖ ನರದೇಹದ ನರಸಿಂಹ ಅವತಾರದ ನಂತರ ಕೇವಲ ಮನುಷ್ಯ ರೂಪದ ವಾಮನಾವತಾರವು ಅದಕ್ಕಿಂತಲೂ ಹೆಚ್ಚಿನ ವಿಕಾಸವನ್ನು ತೋರಿಸುತ್ತದೆ ಹೀಗೆಯೇ ಉತ್ತರೋತ್ತರ ವಿಕಾಸವಾಗಿ ಪರಶುರಾಮ, ಶ್ರೀರಾಮ, ಶ್ರೀಕೃಷ್ಣ ಮತ್ತು ಕೊನೆಗೆ ವಿಕಾಸದ ಚರಮ ಸೀಮೆಯಾದ ಬುದ್ಧನ ಅವತಾರ.


ಇದರ ಹಿನ್ನೆಲೆಯಲ್ಲಿ ಚಿಕಿತ್ಸಕರಿಗೆ ಅನೇಕ ಪ್ರಶ್ನೆಗಳು ಉದ್ಭವಿಸುವುದು ಸಹಜ. ಆದರೆ ಚಿಕಿತ್ಸಕರ ಎಲ್ಲಾ ಪ್ರಶ್ನೆಗಳಿಗೂ ಪುರಾಣಾಂತರಗಳಲ್ಲಿ ಉತ್ತರಗಳನ್ನು ಋಷಿಗಳು ಮೊದಲೇ ಕೊಟ್ಟಿರುತ್ತಾರೆ. ಇವೆಲ್ಲ ಪ್ರಶ್ನೆಗಳಿಗೂ ಉತ್ತರವು ಹಿರಣ್ಯಕಶಿಪು ಬ್ರಹ್ಮನ ಬಳಿ ಕೇಳಿದ ವರದಲ್ಲೆ ಅಡಕವಾಗಿದೆ. ಬ್ರಹ್ಮದೇವಾ! ನನಗೆ ಕೆಳಗಾಗಲಿ ಮೇಲಾಗಲಿ ಸಾವು ಬರಬಾರದು, ಹಗಲಾಗಲೀ ರಾತ್ರಿಯಾಗಲೀ ನಾನು ಸಾಯಬಾರದು ಮನುಷ್ಯರಿಂದಾಗಲೀ ಪಶುಗಳಿಂದಾಗಲಿ ಮೃತ್ಯು ಬರಬಾರದು, ಅಸ್ತ್ರದಿಂದಾಗಲೀ ಶಸ್ತ್ರದಿಂದಾಗಲಿ ನಾನು ಅಜೇಯನಾಗಿರಬೇಕು ಒಳಗಾಗಲೀ-ಹೊರಗಾಗಲಿ ಸಾವು ಬರಕೂಡದು ಹೆಚ್ಚೆಕೆ ಬ್ರಹ್ಮಾ ನೀನು ಸೃಷ್ಟಿಸಿದ ಯಾವುದರಿಂದಲೂ ನನಗೆ ಮರಣ ಬರಬಾರದು. ಅದರಂತೆ ಈ ವರದಿಂದಾಗಿ ಭಗವಂತನು ಮನುಷ್ಯನೂ ಅಲ್ಲ-ಪಶುವೂ ಅಲ್ಲದ ನರಸಿಂಹನಾದ ಕೆಳಗೂ ಅಲ್ಲ ಮೇಲೂ ಅಲ್ಲದೆ ತೊಡೆಯ ಮೇಲೆ ಒಳಗೂ ಅಲ್ಲ-ಹೊರಗೂ ಅಲ್ಲದ ಹೊಸ್ತಿಲಲ್ಲಿ, ರಾತ್ರಿಯೂ ಅಲ್ಲ- ಹಗಲೂ ಅಲ್ಲ ಸಂಧ್ಯಾಕಾಲದಲ್ಲಿ ಶಸ್ತ್ರವೂ ಅಲ್ಲ ಅಸ್ತ್ರವೂ ಅಲ್ಲದ ನಖ (ಉಗುರು)ಗಳಿಂದ ಬ್ರಹ್ಮನನ್ನೇ ಸೃಷ್ಠಿಸಿದ ಭಗವಂತನು ಸ್ವ ಇಚ್ಚೆಯಿಂದ ಸಂಹರಿಸುತ್ತಾನೆ.

ರಾಜಕಾರ್ಯದಲ್ಲಿ ವ್ಯಸ್ತನಾದ ಹಿರಣ್ಯಕಶಿಪುನಿಗೆ ಮಗನ ಭೇಟಿಗೆ ಸಮಯ ಸಿಕ್ಕಿದ್ದೇ ಸಂಧ್ಯಾಕಾಲದಲ್ಲಿಯೇ ಆ ರಾಜಸಭೆಯ ಇದಿರಿಗಿದ್ದುದ್ದು ಕಂಭಗಳೇ ಬೇರೇನೂ ಇರಲಿಲ್ಲ ಇದಿರಿಗಿರುವ ಮರದಿಂದಲೇ ಪ್ರಕಟಗೊಳ್ಳುತ್ತಿದ ಅವನಿಗೆ ಪ್ರಕಟವಾಗಲು ಕಂಭವೇ ಬೇಕೆಂಬುದಿಲ್ಲ ಅಣು ರೇಣು ತೃಣಕಾಷ್ಟಗಳೆಲ್ಲದರಲ್ಲಿ ತುಂಬಿದ ಅವನಿಗೆ ಇಂಥದೇ ಮಾಧ್ಯಮ ಆಗಬೇಕು ಎಂದಿಲ್ಲವಲ್ಲ ಈ ಘಟನೆ ಸಂಧ್ಯಾಕಾಲದಲ್ಲೇ ನಡೆದುದೇ ಸಯುಕ್ತಿಕವಾಗಿದೆ ತಾರ್ಕಿಕವಾಗಿ ನೋಡಿದರು ಅಸುರ ಶಿಲ್ಪಿ ಮಯನಿಂದ ನಿರ್ಮಿಸಲ್ಪಟ್ಟ ಆಭವ್ಯ ರಾಜಸಭಾಭವನದಲ್ಲ್ಲಿರುವ ಎಲ್ಲಾ ಸ್ತಂಭಗಳಲ್ಲೂ ಸಿಂಹಗಳನ್ನೇ ಕೆತ್ತಿದ್ದರು ದಕ್ಚಿಣ ಭಾರತದ ಶಿಲ್ಪಿಗಳಲ್ಲಿ ಇಂತಹ ಸ್ತಂಭಗಳನ್ನು ನಾವು ಈಗಲೂ ಕಾಣಬಹುದು ಆ ಸ್ತಂಭದಲ್ಲಿದ್ದ ಸಿಂಹವೇ ನರಸಿಂಹನಾಗಿ ಪ್ರಕಟಗೊಂಡಿರುವುದು ಸಮಂಜಸವೇ ಆಗಿದೆ.


ಇನ್ನು ಸಿಂಹವು ಸಾಕ್ಷಾತ್ ಪರಾಕ್ರಮ, ತೇಜದ ಸಾಕಾರ ರೂಪ- ಎಲೆಲ್ಲಿ ಭವ್ಯತೆ ದಿವ್ಯತೆ- ಔನ್ನತ್ಯವಿದೆಯೋ ಅಲೆಲ್ಲಾ ತನ್ನ ಅಸ್ತಿತ್ವವಿದೆ ಎಂದು ಭಗವದ್ಗೀತೆಯ ವಿಭೂತಿಯೋಗದಲ್ಲಿ ಶ್ರೀಕೃಷ್ಣನೇ ಹೇಳಿಕೊಂಡಿದ್ದಾನೆ ಹಿರಣ್ಯಕಶಿಪು ಎಷ್ಟೇ ಬುದ್ಧಿವಂತಿಕೆಯಿಂದ ಮರಣಬಾರದ ತರಹ ವರ ಪಡೆದಿದ್ದರೂ ಅದೆಲ್ಲವನ್ನೂ ವ್ಯರ್ಥಮಾಡಲು ಪರಮಾತ್ಮನು ಗೈದ ತಂತ್ರ ಎಂಥಹ ಅದ್ಭುತವಾದುದು‘ ದೇವರ ಬಳಿ ನಮ್ಮಗಳ ಯಾವ ಬುದ್ಧಿವಂತಿಕೆಯೂ ನಡೆಯಲಾರದು ಆ ಬುದ್ಧಿಯನ್ನು ಕೊಡುವವನೇ ಭಗವಂತನು ಅದಕ್ಕಾಗಿಯೇ ಅವನಿಗೆ ಸರ್ವತಂತ್ರ ಸ್ವತಂತ್ರ ಎಂದು ಹೇಳುವುದು.

ಅಂತರಂಗವನ್ನು ಅಸುರಿಶಕ್ತಿಗಳು ಆಕ್ರಮಣಮಾಡಿದಾಗ ಅದು ಹಿರಣ್ಯಕಶಿಪುವಿನ ಸಭಾಸ್ತಂಭವಾಗುತ್ತದೆ. ಪ್ರಹ್ಲಾದರೂಪಿಯಾದ ಪರಿಶುದ್ಧಾತ್ಮನ ಪರಾಭಕ್ತ್ತಿಯ ಪ್ರಭಾವದಿಂದ ಪರಮಾತ್ಮ ಶ್ರೀನರಸಿಂಹನು ಪ್ರಣವ ಗರ್ಜನೆಯನ್ನು ಮಾಡುತ್ತ ಆ ಸ್ತಂಭವನ್ನು ಭೇಧಿಸಿಕೊಂಡು ದೈತ್ಯಭೀಕರವಾದ ರೂಪದಿಂದ ಆವಿರ್ಭವಿಸುತ್ತಾನೆ ಅಂತರಂಗದ ಮನೆಯ ಒಳ ಹೊರಗಿನ ಮಧ್ಯಸ್ಥಾನವಾದ ಹೊಸ್ತಲಿನಲ್ಲಿ ಕುಳಿತು, ಲಯವಿಕ್ಷೇಪಗಳ ಸಂಧಿಕಾಲದ ಸಂಧ್ಯಾಸಮಯದಲ್ಲಿ ಅವಿದ್ಯಾರೂಪಿಯಾದ ಅಸುರರಾಜನ ಎದೆಯನ್ನು ಸೀಳಿ ಅವನ ಸಿಂಹಾಸನವನ್ನು ಏರಿ ಕುಳಿತುಕೊಳ್ಳುತ್ತಾನೆ. ವಾಸ್ತವವಾಗಿ ಅದು ಭಗವದ್ಧ್ಯಾನ ಸಿಂಹಾಸನವೇ ಅಸುರ ಆಕ್ರಮಣದಿಂದ ಅದನ್ನು ಮುಕ್ತಗೊಳಿಸಿಲು ಅಂತರಂಗದ ಸ್ವಾಮಿಯ ಪೂಜೆಗೆ ಪ್ರಶಸ್ತವಾದ ಕಾಲವು ಸಂಧ್ಯಾಕಾಲವೇ.


ಶ್ರೀನರಸಿಂಹ ಸ್ವಾಮಿಯ ಶಿರೋ ಕಂಠದ ಮೇಲಿರುವ ಭಾಗವು ರುದ್ರ ದೇವರ ಜಾಗ ‘‘ಆಶೀರ್ಷಂ ರುದ್ರಮೀಶಾನಂ’’ ರುದ್ರ ರೂಪಿಯಾದ ಆ ದೇವನಿಗೆ ಪ್ರದೋಷಕಾಲದಲ್ಲಿ ಪೂಜೆ ಮಾಡುವುದು ಸರ್ವಪಾಪನಿವಾರಕವು.

ಗೀತೆಯಲ್ಲಿ ಹೇಳದಂತೆ ಸಮದರ್ಶನವಿದ್ದುದರಿಂದ ಪ್ರಹ್ಲಾದನಿಗೆ ಭಗವದ್ದರ್ಶನ ಎಲ್ಲ ಕಡೆ ಆಗುತಿತ್ತು ಆದ್ದರಿಂದಲೇ ಪ್ರಹ್ಲಾದ ತೋರಿಸಿದಲ್ಲಿ ಕಂಬದಲ್ಲಿ ಭಗವಂತ ಪ್ರಕಟನಾದ ಮುಮುಕ್ಷಗಳಿಗೆ ಮೋಕ್ಷ ಹಾದಿ ಸೂಚಿಸಬಲ್ಲ ಉಪಾಸನೆಗಳಲ್ಲಿ ನೃಸಿಂಹೋಪಾಸನೆ ತುಂಬಿ ಮಹತ್ತ್ವದ್ದು. ನೃಸಿಂಹ ದೇವತೆ ಸಾತ್ವಿಕತೆ, ಪವಿತ್ರತೆಗಳ ಜಾಗೃತ ಪ್ರತೀಕ, ಸಹಸ್ರಸೂರ‌್ಯನಂತೆ ಪ್ರಳಯಕಾಲದ ಭೋರ್ಗೆರೆಯುವ ಸಮುದ್ರರಂತೆ ಕೋಪಾನಲದಿಂದ ಆವಿರ್ಭವಿಸಿ ದೈತವರ್ಗದ ಅಹಂಕಾರ ನಾಶ ಇವುಗಳನ್ನು ಮಾಡಿ ಮರುಕ್ಷಣವೇ ಕ್ರೋಧರಹಿತ ರಾಗಿ ಭಕ್ತಪ್ರಹ್ಲಾದನಿಗೆ ಪ್ರಸನ್ನನಾಗಿ ಅಭಯವಿತ್ತಂತೆ ಈ ಪ್ರಭಾವಿ ದೇವತೆಯ ಆರಾಧನೆಯಿಂದ ಶೀಘ್ರದಲ್ಲಿ ಅನುಗ್ರಹಿಸುವುದರಲ್ಲಿ ಸಂದೇಹವಿಲ್ಲ.


ಹದಿನಾಲ್ಕರ ಸಂಖ್ಯೆ ಮತ್ತು ನರಸಿಂಹ ಶ್ರೀನರಸಿಂಹಾವತಾರ ವೈಶಾಖ ಶುದ್ಧ ಚತುರ್ದಶಿಯಂದು ಚತುರ್ದಶಿ ಎಂದರೆ 14ನೇ ತಿಥಿ ಇದಕ್ಕೂ ನರಸಿಂಹನಿಗೂ ಅವಿನಾಭಾವ ಸಂಬಂಧ.

1. ಅತಳ, ವಿತಳ, ಸುತಳ, ತಳಾತಳ, ರಸಾತಳ, ಮಹಾತಳ, ಪಾತಾಳ ಎಂಬ ಏಳು ಕೆಳಗಿನ ಲೋಕಗಳು ಭೂಲೋಕ, ಭುರ್ವಲೋಕ, ಸ್ವರ್ಲೋಕ, ಮಹರ್ಲೋಕ, ಜನೋಲೋಕ, ತಪೋಲೋಕ, ಸತ್ಯಲೋಕ ಏಳು ಮೇಲಿನ ಲೋಕಗಳು ಹೀಗೆ ಚತುರ್ದಶಭುವನಗಳಲೆಲ್ಲ ಎಂಬ ಭಗವಂತ ವ್ಯಾಪಿಸಿದ್ದಾನೆ ಎಂಬುದನ್ನು ಶ್ರೀನರಸಿಂಹಾವತಾರ ತಿಳಿಸಿದೆ ಇದು ಬ್ರಹ್ಮಾಂಡದಲ್ಲಿ.

2. ಪಿಂಡಾಂಡವಾದ ನಿಮ್ಮ ದೇಹದಲ್ಲೂ ಚತುರ್ದಶಿ ಅಥವಾ 14ರ ಕೊನೆಗೆ ನರಸಿಂಹ ಇದ್ದಾನೆ ಇಲ್ಲಿನ ಹದಿನಾಲ್ಕು ನಮ್ಮ ಇಂದ್ರಿಯಗಳ ಸಮೂಹದಿಂದ ಆಗಿದೆ ವಾಕ್ (ನಾಲಗೆ) ಪಾಣಿ (ಕೈ) ಪಾದ (ಕಾಲು), ಪಾಯು(ಗುದ) ಹಾಗೂ ಉಪಸ್ಥ (ಲಿಂಗ) ಇವು ಪಂಚಕರ್ಮೇದ್ರಿಯಗಳು ಶ್ರೋತ್ರ (ಕಿವಿ), ತ್ವಕ್ (ಚರ್ಮ), ಚಕ್ಷಸ್ಸು (ಕಣ್ಣು), ಜಿಹ್ವಾ (ನಾಲಗೆ) ಮತ್ತು ಘ್ರಾಣ (ಮೂಗು) ಎಂಬ ಐದು ಜ್ಞಾನೇಂದ್ರಿಯಗಳು ಇವು ಹತ್ತು ಬಾಹ್ಯೇಂದ್ರಿಯಗಳಾದರೆ ಮನೋ, ಬುದ್ಧಿ ಅಹಂಕಾರ, ಚಿತ್ತ ಎಂಬ ಅಂತಕರಣ ಚತುಷ್ಟಯ ಸೇರಿ ಒಟ್ಟು ಹದಿನಾಲ್ಕು ನರತತ್ವ. ಮುಂದಿನದೇ ಚೇತನ ಅದು ನರಸಿಂಹ ತತ್ವ ನಮ್ಮ ಇಂದ್ರಿಯ ಸಮೂಹದಲ್ಲಿ ಚೇತನ ಸಂಚಾರವಾದಾಗ ನರಸಿಂಹನ ಆವಿರ್ಭಾವ.

3. ಜಡ ಎನ್ನಬಹುದದಾದ ನಮ್ಮ ಈ ಸಾಮಾನ್ಯ ಇಂದ್ರಿಯಗಳ ಗುಂಪಿನಲ್ಲಿ ಚೈತನ್ಯ ಸಂಚರಿಸಿದೊಡನೆ ನರಸಿಂಹಾವತಾರವಾಗುವುದು ಹೇಗೆ? ಅದು ಅತ್ಯುತ್ತಮ ವಿದ್ಯಾಭ್ಯಾಸದಿಂದ ಸಾಧ್ಯ ಇಂತಹ ವಿದ್ಯಾಸ್ಥಾನಗಳು ಒಟ್ಟು ಹದಿನಾಲ್ಕು. ಶಿಕ್ಷಾ, ವ್ಯಾಕರಣ, ಛಂದಸ್ಸು, ಕಲ್ಪ, ನಿರುಕ್ತ ಹಾಗೂ ಜ್ಯೋತಿಷ್ಯ ಎಂಬ ಆರು ವೇದಾಂಗಗಳಿಂದ ಕೂಡಿದ ಋಗ್ವೇದ, ಯರ್ಜವೇದ, ಸಾಮವೇದ ಹಾಗೂ ಅಥರ್ವವೇದ ಎಂಬ ನಾಲ್ಕು ವೇದಗಳು ಧರ್ಮಶಾಸ್ತ್ರ, ಪುರಾಣಸಮೂಹ, ಮೀಮಾಂಸೆ ಹಾಗೂ ತರ್ಕಶಾಸ್ತ್ರ ಹೀಗೆ ಒಟ್ಟು ಈ ಹದಿನಾಲ್ಕು ವಿದ್ಯಾಸ್ಥಾನಗಳನ್ನು ಚೆನ್ನಾಗಿ ಕಲಿತು ಸಾರಾಂಶವನ್ನು ಹೃದ್ಗತ ಮಾಡಿಕೊಂಡವ ನರಸಿಂಹ (ಮಾನವಶ್ರೇಷ್ಠ) ನಾಗಬಲ್ಲ.

4. ನರಸಿಂಹನ ಉಪಾಸನೆಯಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ, ಈರ್ಷೃ, ಅಸೂಯೆ, ಡಂಭ, ದರ್ಪ, ಅಹಂಕಾರ, ಇಚ್ಚೆ, ಶ್ರದ್ಧೆ ಹಾಗೂ ಭಕ್ತಿ ಎಂಬ ಚತುರ್ದಶ ಚಿತ್ತವೃತ್ತಿಗಳು ಬಳಕೆಯಾಗಿರುವುದನ್ನು ಕಾಣುತ್ತೇವೆ ಮೊದಲ ಹನ್ನೊಂದು ಹಿರಣ್ಯಕಶಿಪುವಿನದು ನರಸಿಂಹನ ಮುಂದೆ ಇವುಗಳನ್ನು ಪ್ರದರ್ಶಿಸಿ ಆತ ಅಳಿದ ಕೊನೆಯ ಮೂರು ಪ್ರಹ್ಲಾದನದು ಶುದ್ಧವಾದ ಇಚ್ಚೆ, ಶ್ರದ್ಧೆ ಹಾಗೂ ಭಕ್ತಿಯನ್ನು ಭಗವಂತನಿಗೆ ಅರ್ಪಿಸಿದ ಪ್ರಹ್ಲಾದನನ್ನು ಉದ್ದರಿಸಿದ.

ಪಾಲಿಸೋ ನರಸಿಂಹ
ಭಾರತೀಯ ಸಂಸ್ಕೃತಿಯ ಅಧ್ಯಯನದಲ್ಲಿ ಧರ್ಮ, ದರ್ಶನ, ಕಲೆ, ಸಾಹಿತ್ಯಗಳು ವಿಶಿಷ್ಟ ಸ್ಥಾನವನ್ನು ಅಲಂಕರಿಸಿದೆ. ಕರ್ನಾಟಕದ ಸಂತರು ತಮ್ಮ ಪ್ರಾಂತ ಭಾಷೆಯ ಮೂಲಕವಾಗಿ ದೈವಭಕ್ತಿ, ಶ್ರದ್ಧೆಗಳನ್ನು ಪ್ರಕಟಿಸಿರುತ್ತಾರೆ. ಹೃದಯ ಸ್ಪರ್ಶಿಯಾದ ರೀತಿಯಲ್ಲಿ ಸಂಗೀತ ಸವಿಯಿಂದ ತುಂಬಿದ ಕೀರ್ತನೆಗಳನ್ನು ಹಾಡಿ, ಜನರ ಆತ್ಮೋದ್ಧಾರಕ್ಕೆ ಪ್ರಬಲವಾದ ಅಸ್ತ್ರವನ್ನಾಗಿ ಸಂಕೀರ್ತನ ಪರಂಪರೆಯನ್ನು ಬೆಳೆಸಿದ್ದಾರೆ. ಸಂಸ್ಕೃತ ತಿಳಿಯದ ಸಾಮಾನ್ಯವರ್ಗದವರಿಗೆ, ಹುಲು ಮನುಜರಿಗೆ, ಸ್ತ್ರೀಯರಿಗೆ ಸಹ ಇವರ ದಿವ್ಯವಾಣಿಯಿಂದ ಆಧ್ಯಾತ್ಮಿಕ ಶ್ರೇಯಸ್ಸುಂಟಾಗಿದೆ. ಇದೆಲ್ಲಾ ಅಂಶಗಳು ದಾಸಕೂಟಕ್ಕೆ ದಖನ್ನಿನ ಧಾರ್ಮಿಕ ಭಕ್ತಿಪಂಥದ ಪ್ರಾಚೀನತಮ ಚಳವಳಿಯೆಂಬ ಪ್ರಶಸ್ತಿಯನ್ನು ದೊರಕಿಸಿಕೊಟ್ಟಿದೆ.

ದಾಸಸಾಹಿತ್ಯವು ಕೀರ್ತನೆ, ಸುಳಾದಿ, ಉಗಾಭೋಗ ಎಂಬ ಮುಖ್ಯವಾದ ಮೂರು ರೂಪಗಳಲ್ಲಿ ಹರಿದು ಬಂದಿದೆ. ಸಾಮಾನ್ಯವಾಗಿ ಕೊನೆಯ ನುಡಿಯು ಅದನ್ನು ರಚಿಸಿದ ಕೃತಿಕಾರರ ಅಂಕಿತವನ್ನು ಹೊಂದಿರುತ್ತದೆ.

ದಾಸಸಾಹಿತ್ಯ ಕನ್ನಡದ ತವನಿಧಿ. ಓದು ಬಾರದ ಕನ್ನಡ ಜನಕ್ಕೆ ಪರಿಪಾಠಗಳು ಗೊತ್ತಿಲ್ಲದಿರಬಹುದು. ಆದರೆ ಶರಣರ ಸೂಳ್ನುಡಿಗಳು, ದಾಸರ ಕೀರ್ತನೆ, ಸುಳಾದಿಗಳು ಗೊತ್ತಿಲ್ಲದವರು ಅಪರೂಪ. ದಾಸವಾಙ್ಮಯ ಮಂದಿರಕ್ಕೆ ಭದ್ರವಾದ ಬುನಾದಿಯನ್ನು ಹಾಕಿದ ಶ್ರೀ ಶ್ರೀಪಾದರಾಜರು ಆಚಾರ‌್ಯ ಮಧ್ವರ ಸಾಕ್ಷಾತ್ ಶಿಷ್ಯರಾದ ಶ್ರೀಪದ್ಮನಾಭತೀರ್ಥರ ಪರಂಪರೆಯಲ್ಲಿ ಬಂದರು. ಮುಳಬಾಗಲಿನಲ್ಲಿ ಇರುವ ಇವರ ಬೃಂದಾವನ ಸ್ಥಳವನ್ನು ನರಸಿಂಹ ತೀರ್ಥ ಎಂದು ಕರೆಯುತ್ತಾರೆ.


ಶ್ರೀಪಾದರಾಜರ ಕೃತಿಗಳಲ್ಲಿ ವಿಶಿಷ್ಟವಾದ ಅಪೂರ್ವವಾದ ಶ್ರೀ ಲಕ್ಷ್ಮೀನೃಸಿಂಹ ಪ್ರಾರ್ದುಭಾವದಂಡಕವು ಭಾಗವತದ ಸಪ್ತಮ ಸ್ಕಂದದ ಎಂಟನೆ ಅಧ್ಯಾಯದ ಶ್ರೀನರಸಿಂಹಾವತಾರದ ಕತೆಯನ್ನು ಸುಂದರವಾಗಿ ಕನ್ನಡಕ್ಕೆ ದಂಡಕವೆಂಬ ಧಾಟಿಯಲ್ಲಿ ಶ್ರೀಪಾದರಾಜರು ರೂಪಾಂತರ ಮಾಡಿ ನೀಡಿರುತ್ತಾರೆ. ಭಾಗವತ ನಿಷ್ಠೆಯೊಂದಿಗೆ ದೇಶಿಭಾಷೆಯ ಅಭಿಮಾನವನ್ನು ಹೊರಚೆಲ್ಲಿದ್ದಾರೆ.

ನೃಸಿಂಹದೇವರ ಸ್ತೋತ್ರ ಮಾಡುವಾಗ ದಾಸರು ನೃಸಿಂಹ ಪೂರ್ವತಾಪನಿ ಉಪನಿಷತುಗಳ ವಿಷಯಗಳನ್ನು ಆಯ್ದುಕೊಂಡಿರುವರು. ಮುನಿತ್ರಯರೆಂದು ಪ್ರಸಿದ್ಧರಾದ ಆಚಾರ‌್ಯ ಮಧ್ವರು, ಜಯತೀರ್ಥರು ಮತ್ತು ವ್ಯಾಸರಾಜರ ನಂತರ ಅಗ್ರಮಾನ್ಯರಾದವರು ಶ್ರೀ ವಾದಿರಾಜರು. ವಾದಿರಾಜರ ನರಸಿಂಹಪರವಾದ ಕೃತಿಗಳಲ್ಲಿ ಎರಡು ಸುಳಾದಿಗಳು, ದಶಾವತಾರ ಸ್ತುತಿಗಳು ಗಮನಾರ್ಹವಾದದ್ದು.

ವ್ಯಸನಾದಿಗಳಿಂದ ದೂರ ಮಾಡಬೇಕೆಂಬ ಸರಳವಾದ ಬೇಡಿಕೆ ಇದೆ. ಅವರ ರಚನೆಯಲ್ಲಿ ಭಕ್ತಿ ಪಾರಮ್ಯದ ವಿವರಣೆಯಿದೆ. ಮುಕ್ತಿಪಥದ ದಾರಿ ಕಾಣಿಸಲಾಗಿದೆ. ದಾಸರೆಂದರೆ ಪುರಂದರ ದಾಸರಯ್ಯ ಎಂಬ ಹೆಗ್ಗಳಿಕೆ ಪಾತ್ರರಾಗಿ ವಾಗ್ಗೇಯಕಾರರ ಸಾಲಿನಲ್ಲಿ ಮೊದಲಿಗೆ ಕಂಡು ಬರುವ ಪುರಂದರದಾಸರು ಭಾಗವತ ಧರ್ಮವನ್ನು ಪ್ರಚಾರ ಮಾಡಿದ ಹರಿದಾಸರಲ್ಲಿ ಅಗ್ರಗಣ್ಯರು.


ಪ್ರಹ್ಲಾದವರದನೆಂದು ಖ್ಯಾತಿವೆತ್ತ ನರಸಿಂಹ ಸ್ವಾಮಿಯು ಹಿರಣ್ಯ ಕಶ್ಯಪನ ಸುತನನ್ನು ಕಾಯ್ದ ಘಟನೆಯ ಹಿನ್ನೆಲೆಗೆ ದುಷ್ಟ ಶಿಕ್ಷಣ-ಶಿಷ್ಟರಕ್ಷಣಗಳ ಉದ್ದೇಶವಿರುವುದು ಸಾಮಾನ್ಯ ಸಂಗತಿ. ಆದರೆ ಈ ವಿಚಾರದಲ್ಲಿ ದಾಸರ ವಿವೇಚನೆ ಬೇರೆ ರೀತಿಯದ್ದು. ತಮ್ಮ ಕೀರ್ತನೆಯ ಪ್ರಾರಂಭದಲ್ಲೆ ದಾನವನ ಕೊಂದದ್ದಲ್ಲ ಕಾಣಿರೋ ಗಾನವಿನೋದಿ ನಮ್ಮ ತೊರವೆಯ ನರಸಿಂಹ ಎಂಬುದಾಗಿ ಸ್ಪಷ್ಟಪಡಿಸುತ್ತಾರೆ. ಅಚ್ಚ ಪುರುಷನೆಂಬ ರತ್ನವಿವೊಡಲಲ್ಲಿ ಬಿಚ್ಚಿ ಬೆದಕಿ ನೋಡಿದರಿನೆಷ್ಟು ಇದ್ದಾವೊ ಎಂಬ ಅನ್ವೇಷಕ ದೃಷ್ಟಿಯನ್ನು ಇಲ್ಲಿ ತುಂಬಿದ್ದಾರೆ. ಸಂಹಾರದ ಕ್ರಿಯೆಗೆ ಹೊಸತನದ ಮೆರಗನ್ನು ಈ ಮೂಲಕವಾಗಿ ತೊಡಿಸಿದ್ದಾರೆ.

ನರಸಿಂಹ ಮೊದಲೆ ಸಾಲಂಕೃತನದವನಾಗಿದ್ದಾನೆ. ಶ್ರೇಷ್ಠವಾದ ಮುತ್ತು ಮಾಣಿಕ್ಯ ಹಾರ ಧರಿಸಿಯೇ ಕಂಭದಿಂದ ಹೊರಬಂದಿದ್ದಾನೆ. ಅವೆಲ್ಲ ಇದ್ದರೂ ಕರುಳ ಹನಿಯ ಬಿಸಿರಕ್ತದಿಂದ ಕೂಡಿದ ಹಾರವನ್ನು ಧರಿಸಿರುವುದು ಸರಿಯೆ? ಶ್ರೀದೇವಿ ಲಕ್ಷ್ಮೀಯು – ಸ್ವಾಮಿಯ ತೊಡೆಯ ಮೇಲೆ ಸದಾಕಾಲ ನೆಲೆಸಿದ್ದಾಳೆ. ನಿತ್ಯ ಅಲಂಕರಿಸಿ ಆಸೀನಳಾಗಿರುತ್ತಾಳೆ. ಅಂತಹ ತೊಡೆಯ ಮೇಲೆ ಶತ್ರುವನ್ನು ಮಲಗಿಸಿ ಕೊಂಡಿರುವುದಾದರು ಹೇಗೆ? ಇದು ಯಾವು ಭಂಗಿಯೋ ಮೋಹನಾಂಗ? ಎಂದು ಕೇಳಿರುವಲ್ಲಿ ಪುರಾಣ ಚರಿತೆಯೊಂದಿಗೆ ಪ್ರಾಚೀನ ನಂಬಿಕೆಯು ಸೇರಿಕೊಂಡು ಹೊಸತನದ ಹೊನಲನ್ನುಂಟು ಮಾಡಿದೆ.

ದಾಸ ಸಾಹಿತ್ಯದ ಮೊದಲ ಘಟ್ಟವನ್ನು ಉಜ್ವಲವಾಗಿ ಬೆಳಗಿಸಿ ಮರೆಯಾದ ಪುರಂದರ ಕನಕದಾಸರ ತರುವಾಯ ಬಂದವರೇ ವಿಜಯದಾಸರು. ಪ್ರಹ್ಲಾದ ದೇವನ ಆಹ್ಲಾದ ನೋಡಯ್ಯ ಎಂಬ ನುಡಿಯಲ್ಲಿ ನರಸಿಂಹನ ಅತ್ಯಶ್ವರ‌್ಯಕರ ರೂಪದ ವಿವರಣೆಯಿದೆ.

ರಂಗ ನೋಡಿರೋ ಸಿರಿನರಸಿಂಹನ ಪಾಡಿರೋ ಮಂಗಳ ಮೂರುತಿ ಡಿಂಗರಿಗರ ಹೃತ್ಸಂಗ ಕರುಣಾಂತರಂಗ ಎಂಬ ಪಲ್ಲವಿಯಿಂದ ಮೊದಲಾಗುವ ಕನಕಗಿರಿಯ ನರಸಿಂಹ ಸ್ತುತಿಯು ವಿಜಯದಾಸರ ಇನ್ನೊಂದು ಕೀರ್ತನೆಯ ಮೂಲಕ ಹರಿದು ಬಂದಿದೆ.

ಭಕ್ತಿಯಲ್ಲಿ ಭಾಗಣ್ಣ ಎಂದು ಪ್ರಸಿದ್ಧ ಗೋಪಾಲದಾಸರು ವಿಜಯದಾಸರ ಶಿಷ್ಯರು. ಅಹೋಬಿಲ ನಾರಸಿಂಹನ ಬಗ್ಗೆ ಸುಳಾದಿಯೊಂದನ್ನು ದಾಸರು ರಚಿಸಿರುತ್ತಾರೆ. ನರಸಿಂಹನ ನಾನಾಬಗೆಯ ಅಲಂಕಾರಗಳು, ಆತನ ಆಯುಥ ವಿಶೇಷಗಳು, ಆಭರಣಗಳಿಂದ ಕೂಡಿ ಮರುಳುಗೊಳಿಸುವ ರೂಪದ ವಿಶ್ಲೇಷಣೆಯಿದೆ.

ಮಧ್ವಮತದ ತತ್ತ್ವಗಳನ್ನು ಕನ್ನಡದಲ್ಲಿ ಬೋಧಿಸಿದ ಹರಿದಾಸರಲ್ಲಿ ಆ ಗುರಿಯನ್ನು ಅತ್ಯಂಥ ಸಮರ್ಥವಾಗಿ, ಶಕ್ತಿಯುತವಾಗಿ ಸಾಧಿಸಿದ ಕೀರ್ತಿಯು ಜಗನ್ನಾಥದಾಸರದ್ದಾಗಿದೆ. ನಮೋ ನಮಸ್ತೆ ನರಸಿಂಹದೇವ ಎಂದು ಆರಂಭಗೊಳ್ಳುವ ದಾಸರ ಕೀರ್ತನೆಯಲ್ಲಿ ಸ್ಮರಿಸುವರನ್ನು ಕಾಯಬೇಕೆಂಬ ಬೇಡಿಕೆಯಿದೆ.

ದಾಸರ ಕೀರ್ತನೆಗಳಲ್ಲಿ ತೊರವೆಯ ನರಸಿಂಹನನ್ನು ಕುರಿತು ಕೀರ್ತನೆಯು ಪ್ರಸಿದ್ಧವಾದದ್ದು ಪಾಲಿಸೋ ನರಸಿಂಹ… ಎಂಬ ಕೀರ್ತನೆಯಲ್ಲಿ ತನ್ನ ರೂಪವನ್ನು ತೋರಿ ಪಾಪಗಳನ್ನು ಪರಿಹರಿಸಬೇಕೆಂದು ಯಾಚನೆಯ ಧ್ವನಿಯು ಈ ಕೀರ್ತನೆಯಲ್ಲಿದೆ. ರುರ್ದಾಂತರ್ಗತ ಪಾಹಿ ನರಸಿಂಹ ಎಂಬುದರಲ್ಲಿ ಅವರ ಇತರ ಕೃತಿಗಳಿಗಿಂತ ತುಸು ಭಿನ್ನವೂ ವಿಚಾರಪೂರ್ಣವೂ ಅಗಿದೆ. ಅವರ ಸಮರ್ಪಣಾ ಭಾವವು ತುಂಬ ಅರ್ಥ ಗರ್ಭಿತವಾದ ರೀತಿಯಲ್ಲಿ ಹೊರಹೊಮ್ಮಿರುತ್ತದೆ.

ಭಾಗವತ ಪುರಾಣವನ್ನು ಮೊತ್ತ ಮೊದಲಿಗೆ ಕನ್ನಡ ಭಾಷೆಯಲ್ಲಿ ಬರೆದ ಕವಿ ನಿತ್ಯಾತ್ಮ ಶುಕಯೋಗಿ. ಇದು ಇವನ ಬಿರುದಾಗಿತ್ತೆ ಹೊರತು ನಿಜವಾದ ಹೆಸರಲ್ಲ. ಸದಾನಂದ ಎಂಬುದು ಇವನ ಹೆಸರಿರಬಹುದು. ಈ ಕೃತಿಯಲ್ಲಿ ಬರುವ ನರಸಿಂಹಾವತಾರದ ಕಥೆಯು ಮೂಲ ರಚನೆಗೆ ಹತ್ತಿರವಾಗಿದೆ. ಮೂಲಕೃತಿಯ ಭಾವವನ್ನು ಸರಳವಾದ, ಸುಂದರವಾದ ಭಾಮಿನಿ ಷಟ್ಪದಿಯಲ್ಲಿ ನೀಡಲಾಗಿದೆ.

ಮಹಾವಿಷ್ಣುವಿನ ಜನಪ್ರಿಯ ಅವತಾರ ರೂಪನಾದ ನರಸಿಂಹನನ್ನು ಆರಾಧಿಸಿದ ಹರಿದಾಸರು ಯಾರೂ ಇಲ್ಲವೆಂದು ಹೇಳುವಷ್ಟರ ಮಟ್ಟಿಗೆ ಕೀರ್ತನೆ ಸ್ತೋತ್ರ ಸಾಹಿತ್ಯವು ಹುಲುಸಾಗಿ ಬೆಳೆದಿದೆ. ಈ ಸಂಪ್ರದಾಯದಕ್ಕೆ ಸೇರುವ ಪ್ರಸನ್ನ ವೆಂಕಟದಾಸರನ್ನು ವಿಜಯದಾಸರ ಸಮಕಾಲೀನರೆಂದು ಹೇಳಬಹುದು.


ಭಾಗವತದ ಅದ್ಯಂತವನ್ನು ಹಾಡಾಗಿ, ವೃತ್ತವಾಗಿ ದ್ವಿಪದಿಯಾಗಿ ಸಂಪೂರ್ಣವಾಗಿ ಕನ್ನಡಿಸಿದ ಕೀರ್ತಿಯು ಪ್ರಸನ್ನ ವೆಂಕಟದಾಸರಿಗೆ ನಿಸ್ಸಂದೇಹವಾಗಿ ಸಲ್ಲುತ್ತದೆ.

ಕನ್ನಡ ನಾಡಿನ ಮೀರಾಬಾಯಿ ಎಂದು ಖ್ಯಾತರಾಗಿದ್ದ ಹೆಳವನಕಟ್ಟಿ ಗಿರಿಯಮ್ಮ ಸಾಹಿತ್ಯದಲ್ಲಿಯೂ ನರಸಿಂಹನ ವರ್ಣನೆ ಕಾಣಬಹುದಾಗಿದೆ. ‘‘ಖಳನ ಮರ್ದಿಸಿ ಬಹು ಇಳೆಯಿಂದ ಅಜನಿಗೆ ಬಲು ಹರುಷವನಿತ್ತ ಹೆಳವನಕಟ್ಟೆ ಶ್ರೀವಲ್ಲಭದಾಗಿನ ಕಟ್ಟೆ ನೆಲೆವಾಸ ಕಂಭದ ನರಸಿಂಹ ದೇವಾ ॥
ಭಾಗವತ ಪಂಥದ ಸುಪ್ರಸಿದ್ಧ ಕವಿಯಾದ ಕುಮಾರವ್ಯಾಸನು ಕಲಿಯುಗವನ್ನು ದ್ವಾಪರಯುಗವನ್ನಾಗಿ ಮಾಡಿದ್ದಾನೆ. ಕುಮಾರವ್ಯಾಸ ಭಾರತದಲ್ಲಿ ನರಸಿಂಹನ ಪ್ರಸಕ್ತಿಯನ್ನು ತಿಳಿಸುವ ಮೂರು ಪದ್ಯಗಳು ಇವೆ. ಸಭಾಪರ್ವದಲ್ಲಿ ಬಂದಿರುವ ಈ ಮೂರು ಪದ್ಯಗಳು ಮೇಲುನೋಟಕ್ಕೆ ಸ್ಪಷ್ಟಗೊಳ್ಳುತ್ತಿವೆ. ನರಸಿಂಹಾವತಾರದ ಸನ್ನಿವೇಶವನ್ನು ಸೊಗಸಾಗಿ ತಿಳಿಸುತ್ತದೆ.

ಗದುಗಿನ ಭಾರತದಂತೆ ಕನ್ನಡ ತೊರವೆ ರಾಮಾಯಣವೂ ಪ್ರಸಿದ್ಧವಾದದ್ದು. ತೊರವೆ ನರಹರಿಯೆಂಬ ನಿಜನಾಮಧೇಯವನ್ನು ಕವಿಯು ಇದ್ದ ಬಿರುದು. ಕುಮಾರ ವಾಲ್ಮೀಕಿ ಗ್ರಂಥದ ಆರಂಭದಲ್ಲೇ ನರಸಿಂಹನ ಸ್ತುತಿ ಇದೆ.

ಕನ್ನಡ ಶ್ರೇಷ್ಠ ಕವಿಯಾಗಿ ಪ್ರಖ್ಯಾತವಾದ ಲಕ್ಷ್ಮೀಶನು ‘‘ಜೈಮಿನಿ ಭಾರತ’’ದ ಕರ್ತೃ. ಈತನ ಒಂದು ಪದ್ಯ ನರಸಿಂಹನ ಪ್ರಹ್ಲಾದ ಪರಿಪಾಲನಾ ರೀತಿಯಿಂದ ಆರಂಭಗೊಂಡಿದ್ದರೂ ಅಂತ್ಯದಲ್ಲಿ ಕೃಷ್ಣನ ಧ್ಯಾನದಿಂದ ಮುಕ್ತಾಯಗೊಂಡಿದೆ.

ಹದಿನೆಂಟನೆಯ ಶತಮಾನಕ್ಕೆ ಸೇರಿದ ಚೆನ್ನಿಗ ಎಂಬ ಕವಿಯು ತನ್ನ ಕುಲದೈವವಾದ ನರಸಿಂಹನ ಬಗೆಗಿನ ಭಕ್ತಿ ಭಾವುಕತೆಗಳು ಅವನ ಕೃತಿಯಲ್ಲಿ ವ್ಯಕ್ತವಾಗಿದೆ. ನರಸಿಂಹನ ಗುಣಗಣವನ್ನು ಸ್ತುತಿಸುತ್ತ ಭಗವಂತನು ಎಸಗಿದ ಅಸುರ ಸಂಹಾರ ಕ್ರಿಯೆಯನ್ನು ಸರಳ ಸುಂದರವಾದ ಮಾತುಗಳಲ್ಲಿ ತಿಳಿಸಿಕೊಟ್ಟಿದ್ದಾರೆ.

ಭಾಗವತ ಸಂಪ್ರದಾಯಕ್ಕೆ ಸೇರಿದವನಾಗಿ ದಶಾವತಾರ ಚರಿತೆಯನ್ನು ಬರೆದು ಕನ್ನಡ ಕವಿ ಮಲ್ಲರಸ. ನರಸಿಂಹಾವತಾರಕ್ಕೆ ತನ್ನ ಕೃತಿಯ ಮೂಲಕ ಗೌರವ ಸಲ್ಲಿಸಿದವನಾಗಿದ್ದಾನೆ.

ಭಗವಂತನ ವಿಚಾರದ ತಾತ್ವಿಕ ವಿವೇಚನೆಯು ಪ್ರಜ್ಞಾವಂತರ ಬೌದ್ಧಿಕ ಪರಿಧಿಗೆ ಸೀಮಿತವಾಗಿರಬಹುದು. ಆದರೆ ಸಾಮಾನ್ಯ ಜನವರ್ಗದವರ ಬುದ್ಧಿಮಟ್ಟಕ್ಕೆ ಎಟುಕುತ್ತಿರುವುದು ಕಣ್ಣಿಗೆ ಕಾಣುವ ಆ ದಯಾಮಯನಾದವನ ರೂಪ, ಆಕಾರಗಳು ಮಾತ್ರ.

ನಂಬಿದಿದ್ದನು ತಂದೆ, ನಂಬಿದನು ಪ್ರಹ್ಲಾದ
ನಂಬಿಯುಂ ನಂಬದಿರುವಿಬ್ಬಂದಿ ನೀನು
ಕಂಬದಿನೋ ಬಿಂಬದಿನೋ ಮೋಕ್ಷವವರಿಂಗಾಯ್ತು
ನಿಂಬಳದಿ ನೊಣನೀನು ಮಂಕುತಿಮ್ಮ
(ಡಿ.ವಿ.ಜಿಯವರ ಮಂಕುತಿಮ್ಮನ ಕಗ್ಗ)

ನರಸಿಂಹಾವಲೋಕನ

ದುರಿತರಾಶಿಯ ದೂರ ಸರಿಸುವ ದುರಿತದೇವ !
ಭಕ್ತದೇವೇಂದ್ರನ ಬ್ರಹ್ಮಹತ್ಯೆಯ ದುರಿತವನ್ನು
ಸುಟ್ಟುಹಾಕಿದ ನೀನು ನನ್ನ ದುರಿತರಾಶಿಯನ್ನು ದೂರಮಾಡಯ್ಯ!
ಭಕ್ತಪ್ರಹ್ಲಾದನ ಸಾಧನೆಗೆ ಅಡ್ಡಿವೊಡ್ಡಿದ
ಹಿರಣ್ಯಕಶಿಪುವನ್ನು ಸೀಳಿದ ನೀನು ,
ನನ್ನ ಸಾಧನೆಗೆ ಭಾಧಿಸುವ ಅಸುರಿಶಕ್ತಿಯನ್ನು ಸೀಳಿ ಹಾಕಯ್ಯ !
ಅದಕ್ಕಾಗಿ ಇದೋ ನಿನಗೆ ಪ್ರಣಾಮ !!
ಭಗವದ್ಗೀತೆಯಲ್ಲಿ ಅರ್ಜುನ ನಮ್ಮೆಲ್ಲರ ಪರವಾಗಿ ಮುಂದಿಟ್ಟ ಒಂದು ಜಿಜ್ಞಾಸೆ ಮನುಷ್ಯ ಪೂರ್ಣ ಮನಸ್ಸಿಲ್ಲದಿದ್ದರೂ ಯಾವುದೋ ಪ್ರಭಾವಕ್ಕೊಳಗಾಗಿ ಪಾಪವನ್ನೆಸಗುತ್ತಿರುತ್ತಾನೆ. ಪ್ರಕೃತಿಯ ರಜೋಗುಣದ ಪರಿಣಾಮವಾಗಿ ಹುಟ್ಟಿಕೊಳ್ಳುವ ಕಾಮಾದಿ ದೋಷಗಳೇ ಮನುಷ್ಯನನ್ನು ಬೇರೆ ಬೇರೆ ಬಗೆಯ ಪಾಪಕರ್ಮಗಳಲ್ಲಿ ತೊಡಗಿಸುವವು.

ಹೀಗೆ ಮಾಡಲ್ಪಡುವ ಪಾಪದ ದುಷ್ಫಲವನ್ನು ಪರಿಹರಿಸಿಕೊಳ್ಳಲು ಶಾಸ್ತ್ರ ಪರಿಚಯಿಸಿಕೊಟ್ಟ ಉಪಾಯವೇ ಪ್ರಾಯಶ್ಚಿತ್ತ. ದುರಿತ- ಪಾಪಗಳ ಪರಿಹಾರಕ್ಕೆ ಉಪಾಸ್ಯನಾಗಿರುವವನು ಶ್ರೀ ನರಸಿಂಹ ಹಿರಣ್ಯಕಶಿಪುವಿನ ಪುತ್ರರಲ್ಲಿ ಪ್ರಹ್ಲಾದ ಹಿರಿಯ . ಹಿರಣ್ಯಕಶಿಪು ಪ್ರಹ್ಲಾದ ಇಬ್ಬರೂ ಸಂಬಂಧದಲ್ಲಿ ತಂದೆ ಮಕ್ಕಳಾದರೂ ಸ್ವಭಾವದಲ್ಲಿ ತೀರ ವಿಲಕ್ಷಣರು. ಹಿರಣ್ಯ(ಧನಕನಕಾದಿಗಳು) ಹಾಗೂ ಕಶಿಪು (ಭೋಗವಿಲಸಗಳು) ಅವನ ಜೀವನದ ಪರಮಾದರ್ಶ.
ಇದಕ್ಕೆ ವಿರುದ್ದ ಜೀವನಶೈಲಿ ಪ್ರಹ್ಲಾದನದು. ಸದಾ ಭೌತಿಕ ವಸ್ತುಗಳಿಂದ ದೂರವಿದ್ದು . ಆಧ್ಯಾತ್ಮವನ್ನೇ ನಂಬಿದ ವಿರಕ್ತಜೀವನ ಅವನದು. ತಂದೆ ಲಕ್ಷ್ಮೀಯ ದಾಸ; ಮಗ ಲಕ್ಷ್ಮೀಪತಿಯ ದಾಸ. ತಂದೆ ಮಗನಿಗೆ ಒಗಟು; ಮಗ ತಂದೆಯ ಒಗಟು. ಅವನಿಗೆ ವಿಷಯದ ನಂಟು; ಇವನಿಗೆ ವಿಷ್ಣುವಿನ ನಂಟು.

ಸಾತ್ವಿಕ ತಾಮಸ ಶಕ್ತಿಗಳ ಹೋರಾಟ ಇಂದು ನಿನ್ನೆಯದಲ್ಲ! ತಾಮಸವೃತ್ತಿಯ ಅಸುರೀಸಂಪತ್ತಿನ ಉಪಾಸಕನಾದ ಹಿರಣ್ಯ ಕಶಿಪು ವರಬಲದಿಂದ ಮದಿಸಿ, ತನ್ನಲ್ಲಿರುವ ಭಗವಂತನನ್ನು ಮರೆತು, ತಾನೇ ಜಗದೀಶ್ವರ ಎಂಬ ಭ್ರಮೆಗೆ ಒಳಗಾಗಿ ಗರ್ವದಿಂದ ಮೈಮರೆತು ಸಾತ್ವಿಕರಾದ ದೇವ-ದ್ವಿಜರನ್ನು ಹಿಂಸಿಸುತ್ತ ಲೋಕಕಂಟಕನಾಗಿ ಕಡೆಗೆ ತಾನು ನಾಶವಾದುದು ತಾಮಸಿ ಶಕ್ತಿಯನ್ನು ನಂಬಿ ಅಸುರೀಶಕ್ತಿಯ ಉಪಾಸಕರಿಗಾಗುವ ಪರಿಣಾಮಕ್ಕೆ ಉದಾಹರಣೆಯಾಗಿದೆ.

ಸಾತ್ವಿಕ ಶಕ್ತಿಯ ಉಪಾಸನೆಯಿಂದ ದಾಸೋಹಂ ಎಂದು ಹೇಳಿ ಜಗತ್ಕಲ್ಯಾಣ ,ಸುಖ,ಶಾಂತಿಗಳಿಗೆ ಕಾರಣಪುರುಷನಾಗಿ ತಾನು ಉದ್ದಾರವಾಗುವುದರ ಜೊತೆ ತನ್ನನ್ನು ನಂಬಿ ಬಂದವರನ್ನು ಉದ್ದರಿಸಿ ಇಡೀ ವಿಶ್ವಕ್ಕೆ ಕಲ್ಯಾಣವನ್ನು ಉಂಟು ಮಾಡಿದ ಮಹಾನುಭಾವ ! ಸಾತ್ವಿಕ ಶಕ್ತಿಯ ಪ್ರಭಾವಕ್ಕೆ ಪ್ರಹ್ಲಾದ ರಾಜರಿಗಿಂತ ಉತ್ತಮ ದೃಷ್ಟಾಂತ ಬೇಕೆ ?


ಭಗವಂತ ಹಿರಣ್ಯನ ಅಪರಾಧಗಳ ಮಟ್ಟ ಏರುತ್ತಿರುವುದನ್ನು ಗಮನಿಸುತ್ತಲೇ ಇದ್ದ ಒಂದು ಹಂತಕ್ಕಾಗಿ ಹೊಂಚು ಹಾಕುತ್ತಿದ್ದ, ಶಿಶುಪಾಲನ ಶತಾಪರಾಧಗಳನ್ನು ಕಾಯ್ದಂತೆ. ಇನ್ನೇನು ಮಟ್ಟ ಮುಟ್ಟಿತು ಅನ್ನುವಾಗಲೇ ಛಂಗನೆ ನರಹರಿಯಾಗಿ ಹಾರಿ ಮಟ್ಟ ಹಾಕಿಯೇಬಿಟ್ಟ!

ಭಗವಂತ ಹೀಗೆಣಿಸಿರಬೇಕು, ನಾನೇ ದೇವರೆನ್ನುವ ಈ ಮೃಗವನ್ನು ಕೊಲ್ಲಬೇಕಾದರೆ ಮೃಗರೂಪದಲ್ಲೇ ಹೋಗಬೇಕು, ಅದರಲ್ಲೂ ಮೃಗರಾಜ ರೂಪದಲ್ಲಿ, ನಾನಾದರೂ ಮೃಗಾಣಾಂ ಚ ಮೃಗೇಂದ್ರೋಹಂ ಭಗವಂತನಿಗೆ ತಾನು ಹೇಳಿದ್ದು ನೆನಪಿಗೆ ಬಂತು.

ಮತ್ತೊಂದು ಮುಖ್ಯವಾದ್ದದ್ದು ಈಗಾಗಲೇ ವರಕೊಟ್ಟು ಕೈ ಸುಟ್ಟುಕೊಂಡ ನನ್ನ ಭೃತ್ಯರಾದ, ಚರ್ತುಮುಖನ ಮುಖ ಉಳಿಸಬೇಕಾದರೆ ನಾನು ಸಿಂಹಮುಖವನ್ನು ಧರಿಸಬೇಕು ಎಂದು ಭಗವಂತ ಸೋಹಂ ಎಂದ ಹಿರಣ್ಯನಿಗೆ ಸಿಂಹರೂಪಿಯಾದ, ದಾಸೋಹಂ ಎಂದ ಚಿಣ್ಣನಿಗೆ ಪ್ರಹ್ಲಾದನಿಗೆ ಹಂಸರೂಪಿಯಾದ, ತೀರ್ಥರೂಪನಾದ.

ಸ್ವರೂಪ ಶರೀರದ ಹೃದಯದ ಮಧ್ಯ ಶ್ವೇತವರ್ಣದಿಂದ ಅಣೋರಣೀಯನಾಗಿ ಮೆರೆಯುತ್ತಿರುವ ನರಸಿಂಹನನ್ನು ಮತ್ತು ಮನೆಯಿಂದ ಹೊರಗೆ ಹೊರಟಾಗ ನಮ್ಮ ಸಕಲ ವಿಘ್ನಗಳ ಪರಿಹಾರಕ್ಕಾಗಿ ಮುಂದೆ ಮುಂದೆ ಧಾವಿಸುವ ಕಾರುಣ್ಯಸ್ವರೂಪವನ್ನು ನೆನೆಯದವನ ಜನ್ಮವ್ಯರ್ಥವಲ್ಲವೆ!

॥ ಜಯ ನೃಹರೇ ಮಲ ಭವ ಮಮ ಶರಣಂ ॥

ಲೇಖನ: ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)

Tags: Kannada ArticleLord NarasimhaNarasimha Jayantiಡಾ. ಗುರುರಾಜ ಪೋಶೆಟ್ಟಿಹಳ್ಳಿನರಸಿಂಹ ಜಯಂತಿನರಸಿಂಹ ದೇವರುಭಗವದ್ಗೀತೆಭಾಗವತ ಸಂಪ್ರದಾಯಮಹಾವಿಷ್ಣುಹಿರಣ್ಯಕಶಿಪು
Share206Tweet123Send
Previous Post

ಮೋದಿಯನ್ನು ದೂರವಿಡಲು ಪಿಎಂ ಸ್ಥಾನ ತ್ಯಾಗಕ್ಕೂ ಕಾಂಗ್ರೆಸ್ ಸಿದ್ದ: ಗುಲಾಮ್ ನಬಿ

Next Post

ಭದ್ರಾವತಿ: ಭಗವಾನ್ ಬುದ್ದರ ಜಯಂತಿ ಮೇ 18 ರಂದು ಬುದ್ದ ಪೂರ್ಣಿಮ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಭದ್ರಾವತಿ: ಭಗವಾನ್ ಬುದ್ದರ ಜಯಂತಿ ಮೇ 18 ರಂದು ಬುದ್ದ ಪೂರ್ಣಿಮ

ಭದ್ರಾವತಿ: ಭಗವಾನ್ ಬುದ್ದರ ಜಯಂತಿ ಮೇ 18 ರಂದು ಬುದ್ದ ಪೂರ್ಣಿಮ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಭೀಕರ ಅಪಘಾತ | ರಂಭಾಪುರಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವು

ಭೀಕರ ಅಪಘಾತ | ರಂಭಾಪುರಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವು

April 29, 2026
ಶ್ರೀ ರವಿಶಂಕರ್ ಗುರೂಜಿಯವರ 70ನೇ ಜನ್ಮೋತ್ಸವ | ಏ.14ರಿಂದ ಆರು ದಿನ ವಿಶೇಷ ಸುದರ್ಶನ ಕ್ರಿಯಾ ಶಿಬಿರ

ಶ್ರೀ ರವಿಶಂಕರ ಗುರೂಜಿ ಅವರ 70ನೇ ಜನ್ಮೋತ್ಸವ | ಮೇ 5ರಿಂದ `ಆನಂದೋತ್ಸವ’ ಕಾರ್ಯಕ್ರಮ

April 29, 2026
ಪ್ರಕೃತಿ ವಿಕೋಪದಿಂದ ಹಾನಿ, ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಿ

ಪ್ರಕೃತಿ ವಿಕೋಪದಿಂದ ಹಾನಿ, ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಿ

April 29, 2026
ಕ್ರೈಸ್ಟ್‌ಕಿಂಗ್ | ದ್ವಿತೀಯ ಪಿಯುಸಿ ಮರುಮೌಲ್ಯಮಾಪನ | ಪ್ರಜ್ವಲ್ ಶೆಟ್ಟಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ 

ಕ್ರೈಸ್ಟ್‌ಕಿಂಗ್ | ದ್ವಿತೀಯ ಪಿಯುಸಿ ಮರುಮೌಲ್ಯಮಾಪನ | ಪ್ರಜ್ವಲ್ ಶೆಟ್ಟಿ ರಾಜ್ಯಕ್ಕೆ ನಾಲ್ಕನೇ ರ್‍ಯಾಂಕ್ 

April 29, 2026
ಹುಲಿಕಲ್ ಘಾಟ್ ರಸ್ತೆ ತಡೆಗೋಡೆ ನಿರ್ಮಾಣ ಮಣ್ಣು ಕುಸಿತ ಪ್ರಕರಣ | ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ: ಎಸ್. ಮಧು ಬಂಗಾರಪ್ಪ

ಹುಲಿಕಲ್ ಘಾಟ್ ರಸ್ತೆ ತಡೆಗೋಡೆ ನಿರ್ಮಾಣ ಮಣ್ಣು ಕುಸಿತ ಪ್ರಕರಣ | ತಪ್ಪಿತಸ್ಥರ ವಿರುದ್ದ ಸೂಕ್ತ ಕ್ರಮ: ಎಸ್. ಮಧು ಬಂಗಾರಪ್ಪ

April 29, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL