ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ಕುವೆಂಪು ರಸ್ತೆಯಲ್ಲಿರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ತನ್ನ ನಾಲ್ಕನೇಯ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಮಾಸ್ಟರ್ ಹೆಲ್ತ್ ಚೆಕ್-ಅಪ್ ಪ್ಯಾಕೇಜ್’ಗಳಿಗೆ ಶೇ.25 ರಿಯಾಯ್ತಿ ಘೋಷಿಸಿದೆ.
ಈ ಕೊಡುಗೆ ಡಿಸೆಂಬರ್ 22ರ ಇಂದಿನಿಂದ ಡಿಸೆಂಬರ್ 27ರವರೆಗೆ ಒಂದು ವಾರದ ಅವಧಿಗೆ ಲಭ್ಯವಿರಲಿದೆ.
ಯಾವೆಲ್ಲಾ ಚೆಕ್-ಅಪ್’ಗಳಿಗೆ ರಿಯಾಯ್ತಿ?
ರಿಯಾಯ್ತಿಯೊಂದಿಗೆ ಲಭ್ಯವಿರುವ ಆರೋಗ್ಯ ತಪಾಸಣಾ ಪ್ಯಾಕೇಜ್’ಗಳಲ್ಲಿ ಹೃದಯ ತಪಾಸಣೆ, ಮಧುಮೇಹ ತಪಾಸಣೆ, ಥೈರಾಯ್ಡ್ ಪ್ರೊಫೈಲ್, ಲಿಪಿಡ್ ಪ್ರೊಫೈಲ್, ಯಕೃತ್ ಮತ್ತು ಮೂತ್ರಪಿಂಡ ಕಾರ್ಯಕ್ಷಮತಾ ಪರೀಕ್ಷೆಗಳು, ವಿವಿಧ ಇಮೇಜಿಂಗ್ ತಪಾಸಣೆಗಳು ಹಾಗೂ ಪುರುಷರು ಮತ್ತು ಮಹಿಳೆಯರಿಗೆ ತಜ್ಞ ವೈದ್ಯರ ಸಲಹೆಗಳು ಒಳಗೊಂಡಿವೆ.
ಜೀವನಶೈಲಿ ಸಂಬಂತ ರೋಗಗಳನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆಹಚ್ಚುವ ಮೂಲಕ ತಡೆಗಟ್ಟುವ ಆರೋಗ್ಯ ಸೇವೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅಪಾಯಿಂಟ್ಮೆೆಂಟ್’ಗಾಗಿ ಸಾರ್ವಜನಿಕರು 9886413131 ಸಂಖ್ಯೆಯನ್ನು ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















