ಒಡಿಶಾ: ಡಿಆರ್’ಡಿಒ ಸಾಧನೆಯ ಮುಡಿಗೆ ಈಗ ಮತ್ತೊಂದು ಗರಿ ಮೂಡಿದ್ದು, ಹೆಚ್ಚು-ವೇಗದ ವಿಸ್ತಾರ ವೈಮಾನಿಕ ಗುರಿ ಹೊಂದಿರುವ ಅಭ್ಯಾಸ್ ವೈಮಾನಿಕ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ.
ಡಿಆರ್’ಡಿಒ ಈ ಪ್ರಯೋಗ ಪರೀಕ್ಷೆಯನ್ನು ಒಡಿಶಾದ ಬಲಸೋರ್ ನಲ್ಲಿರುವ ಚಂದೀಪುರ್ ಆಂತರಿಕ ಪರೀಕ್ಷಾ ಕೇಂದ್ರದಿಂದ ನಡೆಸಿದ್ದು ಅದನ್ನು ಹಲವು ರಾಡಾರ್’ಗಳು ಮತ್ತು ವಿದ್ಯುತ್ ವಾಹಕ ವ್ಯವಸ್ಥೆಗಳು ಪತ್ತೆಹಚ್ಚಿವೆ ಎಂದು ವರದಿಯಾಗಿದೆ.
Also Read in English: https://kalpa.news/drdo-successfully-conducts-flight-test-of-abhyas/
ಈ ಕುರಿತಂತೆ ಡಿಆರ್’ಡಿಒ ಪ್ರಕಟಣೆ ಹೊರಡಿಸಿದ್ದು, ಸಂಪೂರ್ಣ ಸ್ವತಂತ್ರ ನಿಗದಿತ ಕೇಂದ್ರ ನೌಕಾ ವಿಧಾನದಲ್ಲಿ ಅದು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಆಂತರಿಕ ಸಣ್ಣ ಅನಿಲ ಟರ್ಬೈನ್ ಎಂಜಿನ್ ರೀತಿ ಅಭ್ಯಾಸ್ ಅನ್ನು ವಿನ್ಯಾಸಗೊಳಿಸಿದೆ. ದೇಶಿ ನಿರ್ಮಿತ ಮೈಕ್ರೋ-ಎಲೆಕ್ಟ್ರೋ-ಮೆಕ್ಯಾನಿಕಲ್ ಸಿಸ್ಟಮ್ಸ್ ಆಧರಿತ ರಚನೆ ವ್ಯವಸ್ಥೆಯನ್ನು ಹೊಂದಿದೆ ಎಂದು ಡಿಆರ್’ಡಿಒ ಹೇಳಿದೆ.
Discussion about this post