No Result
View All Result
20,000+ runners participated in the 8th Edition of Manipal Marathon
English Articles

20,000+ runners participated in the 8th Edition of Manipal Marathon

by ಕಲ್ಪ ನ್ಯೂಸ್
February 12, 2026
0

Kalpa Media House  |  Manipal | The 8th edition of the Manipal marathon concluded successfully at KMC Greens, Manipal, on...

Read moreDetails
Deeksha Brahmavara | A Divine Synergy of Artistic Excellence and Intellectual Brilliance

Deeksha Brahmavara | A Divine Synergy of Artistic Excellence and Intellectual Brilliance

February 10, 2026
ಬೇಸಿಗೆಯಲ್ಲಿ ಗಂಟಲು ಒಣಗುತ್ತಿದೆಯೇ? ಧ್ವನಿ ಗರಗರಿಸುತ್ತಿದೆಯೇ? ಹಾಗಾದರೆ ಹೀಗೆ ಮಾಡಿ | ತಜ್ಞರ ಸಲಹೆ

Stay Hydrated to Protect Your Voice This Summer: ENT Expert Advice

February 10, 2026
Mysore – Shivamogga Express Big Update on this Date | Must Read

Mysore – Shivamogga Express Big Update on this Date | Must Read

February 9, 2026
Union Minister V. Somanna Flagged Off New Demu Train Services Between Dandeli – Alnavar

Union Minister V. Somanna Flagged Off New Demu Train Services Between Dandeli – Alnavar

February 9, 2026
  • Advertise With Us
  • Grievances
  • About Us
  • Contact Us
Thursday, February 12, 2026
Follow Us
kalpa.news
">
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕುಕ್ಕೆ ದೇಗುಲವನ್ನೂ ಮೂಲ ಮಠಕ್ಕೆ ಹಸ್ತಾಂತರಿಸುವ ಹೋರಾಟವಾಗಬೇಕಿದೆ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
October 17, 2018
in Special Articles
0
ಕುಕ್ಕೆ ದೇಗುಲವನ್ನೂ ಮೂಲ ಮಠಕ್ಕೆ ಹಸ್ತಾಂತರಿಸುವ ಹೋರಾಟವಾಗಬೇಕಿದೆ
Share on FacebookShare on TwitterShare on WhatsApp
ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪವಾಸ ನಿರಶನ ಅಂತ್ಯ

– ಇದು ಖುಷಿಯ ವಿಚಾರವೋ ಅಥವಾ ನೋವಿನ ವಿಚಾರವೋ. ನಿರಶನದ ಅಂತ್ಯ ಖುಷಿಯ ವಿಚಾರವೇ. ಆದರೆ ಸ್ವಾಮೀಜಿಯವರನ್ನು ಬೇರೆ ದಾರಿಯಿಲ್ಲದೆ ಉಪವಾಸ ಕೈಗೊಳ್ಳುವಂತೆ ಪರಿಸ್ಥಿತಿ ನಿರ್ಮಾಣ ಮಾಡಿದ ವ್ಯವಸ್ಥೆ, ಆಗುತ್ತಿರುವ ಅನ್ಯಾಯಗಳಿಗೆ ಮೂಕ ಪ್ರೇಕ್ಷಕರಾಗಿ ತಿಳಿದೋ ತಿಳಿಯದೆಯೋ ಯಾವ ಬದಲಾವಣೆಯನ್ನೂ ತರಲು ಪ್ರಯತ್ನಿಸದೇ/ಸಾಧ್ಯವಾಗದೇ ನಾವೆಲ್ಲ ಅದೇ ವ್ಯವಸ್ಥೆಯ ಭಾಗವಾಗಿರುವುದು ನೋವಿನ ಸಂಗತಿ.

ಕುಕ್ಕೆಶ್ರೀ ಸುಬ್ರಹ್ಮಣ್ಯ ಸಂಪುಟ ಶ್ರೀ ನರಸಿಂಹ ಸ್ವಾಮಿ ಮಠದ ಯತಿಗಳಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಕಳೆದ ಮೂರು ದಿನಗಳಿಂದ ನಡೆಸುತ್ತಿದ್ದ ಉಪವಾಸ ನಿರಶನವನ್ನು ಸೋಮವಾರ ಅಂತಿಮಗೊಳಿಸಿದ್ದಾರೆ.

ನಿರಶನ ನಿಲ್ಲಿಸುವಂತೆ ಪೇಜಾವರ ಶ್ರೀ, ಸುತ್ತೂರು ಶ್ರೀಗಳು, ಮುಖ್ಯಮಂತ್ರಿಗಳು, ರಾಜ್ಯ ಸರಕಾರದ ವಿವಿಧ ಮಂತ್ರಿಗಳು, ಅಷ್ಠಮಠ ಹಾಗೂ ನಾಡಿನ ವಿವಿಧ ಯತಿಗಳು ಮನವಿ ಮಾಡಿಕೊಂಡ ಮೇರೆಗೆ ಶ್ರೀ ಗಳು ಈ ತೀರ್ಮಾನ ಕೈಗೊಂಡಿದ್ದಾರೆ.

ಮಠದ ವಿರುದ್ದ ಕೆಲವರು ಆಪಾದನೆಗಳನ್ನು ಹೊರಿಸಿದ್ದರಿಂದ ಮನನೊಂದ ಶ್ರೀ ಗಳು ಕಳೆ ಮೂರು ದಿನಗಳಿಂದ ಉಪವಾಸ ಕೈಗೊಂಡಿದ್ದರು.
ಸಮಸ್ಯೆ ತಿಳಿಗೊಳಿಸುವ ಕುರಿತು ಪೇಜಾವರ ಶ್ರೀ , ಮುಖ್ಯಮಂತ್ರಿ ಗಳು ಭರವಸೆ ನೀಡಿದ ಮೇರೆಗೆ ಶ್ರೀ ಗಳು 60 ಘಂಟೆಗಳ ಉಪವಾಸದ ಬಳಿಕ ನಿರಶನ ನಿಲ್ಲಿಸಲು ನಿರ್ಧರಿಸಿದರು.

ಕುಕ್ಕೆ ಶ್ರೀ ಮಠಕ್ಕೆ ಆಗುತ್ತಿರುವ ವಿವಿಧ ಬಗೆಯ ಅನ್ಯಾಯ, ಅಪಚಾರ ಹಾಗೂ ಅಪಪ್ರಚಾರದ ವಿರುದ್ಧ ನಾಡಿನ ಭಗವದ್ ಭಕ್ತರು, ಧರ್ಮವಂತರು ತಮ್ಮ ವ್ಯಾಪ್ತಿಯಲ್ಲಿ ಇದರ ಬಗೆಗೆ ವಿವಿಧ ಸ್ತರಗಳಲ್ಲಿ ಬಹುವಿಧವಾಗಿ ಧ್ವನಿಯೆತ್ತಬೇಕಿದೆ. ನಾವೆಲ್ಲ ಶ್ರೀ ಮಠಕ್ಕೆ ಹಾಗೂ ಸ್ವಾಮೀಜಿಗಳಿಗೆ ಆಗಿರುವ ಮತ್ತು ಆಗುತ್ತಿರುವ ಅನ್ಯಾಯಕ್ಕೆ ಧರ್ಮನಿಷ್ಠ ನ್ಯಾಯ ಒದಗಿಸಬೇಕು. ಆ ಮೂಲಕ ಮುಂದಿನ ದಿನಗಳಲ್ಲಿ ಇಂತಹ ದುಷ್ಕೃತ್ಯಗಳು ನಡೆಯದಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ.

ಎಲ್ಲೆಲ್ಲಿ ಮಠ -ಮಂದಿರ, ಸಾಧು – ಸಂತರ ಅಸ್ಮಿತೆ, ಗೌರವಗಳಿಗೆ ಧಕ್ಕೆ ಉಂಟಾಗುತ್ತದೆಯೋ ಆಗೆಲ್ಲ ಅದು ದೇಶ, ಸಮಾಜ, ಜನರ ಅವನತಿಗೆ ಕಾರಣವಾಗಿದೆ. ಅದು ಈಗಲೂ ಮುಂದುವರೆಯುವುದು ಬೇಡ. ಜಾಗೃತ ಮನಸ್ಸುಗಳ ಸಮಾಜ ಇವುಗಳಿಂದ ಮುಂಬರುವ ಆಪತ್ತನ್ನು ಗ್ರಹಿಸಿ ಅವುಗಳ ನಿವಾರಣೆಗೆ ಅಗತ್ಯ ಕ್ರಮಕೈಗೊಳ್ಳುವುದು ಅಗತ್ಯ. ಅದರಿಂದ ತಪ್ಪು ಮರುಕಳಿಸದಂತೆ ಎಚ್ಚರಿಕೆ ಹಾಗೂ ಉತ್ತಮ ಭವಿಷ್ಯಕ್ಕೆ ಮುನ್ನುಡಿ ಎರಡನ್ನೂ ಬರೆದಂತಾಗುತ್ತದೆ.
ಸರ್ಪ ಸಂಸ್ಕಾರವನ್ನು ದೇವಸ್ಥಾನದ ಜೊತೆಗೇ ಮಠದಲ್ಲಿಯೂ ನಡೆಸಿದರೆ ದೇವರಿಗೆ ಆಗುವ ಲೋಪ ದೋಷಗಳೇನು? ಮೂಲ ಮಠ ಸರ್ಪಸಂಸ್ಕಾರ ನಡೆಸಿದರೆ ಸರಕಾರಕ್ಕೆ, ಸ್ಥಳೀಯ ಧಾರ್ಮಿಕ ದತ್ತಿ ಸಮಿತಿಗೆ ಆಗುವ ಸಮಸ್ಯೆ ಏನು?

ಸಮಿತಿಯಿಂದ ಮಠಕ್ಕೆ ಅಪಪ್ರಚಾರ, ಅನ್ಯಾಯ ಒಂದೆಡೆಯಾದರೆ, ಗೋಶಾಲೆಗೆ ನೀರನ್ನೂ ಕೊಡದಷ್ಟೂ ಕ್ರೌರ್ಯ ಮೆರೆದದ್ದು ಅಕ್ಷಮ್ಯ. ಇದರ ಗಂಭೀರತೆ, ತೀವ್ರತೆಯ ಅರಿವು ಸಮಾಜಕ್ಕೂ, ಸರಕಾರಕ್ಕೂ ಆಗಿದೆಯೋ ಇಲ್ಲವೋ? ಇನ್ನು ಮುಂದೆ ಹೀಗೆ ಆಗದ ಹಾಗೆ ನೋಡಿಕೊಳ್ಳುವುದು ತುರ್ತು ಅನಿವಾರ್ಯ.
ಅಂದ ಹಾಗೆ ದೇವಸ್ಥಾನದ ಸಮಿತಿಯಲ್ಲಿ ಮಠದ ಪ್ರತಿನಿಧಿಯೊಬ್ಬರು ಏಕಿಲ್ಲ? ಇದ್ದರೆ ಸ್ಥಳೀಯ ಮಟ್ಟದಲ್ಲೇ ಆಡಳಿತ ಮಠದ ಪರವಾಗಿ ನ್ಯಾಯಸಮ್ಮತವಾಗಿ ನಿಲ್ಲಲು, ಧ್ವನಿ ಎತ್ತಲು ಸಹಕಾರಿ. ಒಂದು ವೇಳೆ ಮಠದ ಪ್ರತಿನಿಧಿ ಸಮಿತಿಯಲ್ಲಿ ಇಲ್ಲದಿದ್ದರೆ ಅದಕ್ಕೆ ಅವಕಾಶ ಏಕಿಲ್ಲ? ಸರಕಾರ – ಮುಖ್ಯಮಂತ್ರಿಯವರು ಇದಕ್ಕೆ ಅನುಗುಣವಾದ ಕಾನೂನು ಏಕೆ ರೂಪಿಸಬಾರದು ಅಥವಾ ಇರುವ ಧಾರ್ಮಿಕ ದತ್ತಿ ಕಾಯ್ದೆಗೆ ತಿದ್ದುಪಡಿ ತರಬಾರದೇಕೆ?

ಈ ಪ್ರಸ್ತಾವವನ್ನು ವಿದ್ಯಾಪ್ರಸನ್ನ ಶ್ರೀಗಳು, ಪೂಜ್ಯ ಪೇಜಾವರ ಯತಿಗಳೂ ಸೇರಿದಂತೆ ರಾಜ್ಯದ ಇತರ ಯತಿಗಳು, ಶಾಸಕರು ಪ್ರಯತ್ನಿಸಿದರೆ ಇದು ಸಾಧ್ಯ. ಮಠಕ್ಕೆ ಅಪಚಾರ ಆಗದಿರುವಂತೆ ಮಾಡಲು ಇದೊಂದು ಮೊದಲ ಹೆಜ್ಜೆ ಎಂದು ನನಗೆ ತೋರುತ್ತದೆ.

ಮುಂದಿನ ದಿನಗಳಲ್ಲಿ ಸರಕಾರದ ಧಾರ್ಮಿಕ ದತ್ತಿ ಮುಜರಾಯಿ ಇಲಾಖೆಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವನ್ನು ಮುಕ್ತಗೊಳಿಸಿ ಶ್ರೀಮಠದ ಆಡಳಿತಕ್ಕೆ ಹಸ್ತಾಂತರಿಸುವ ವ್ಯವಸ್ಥೆಯನ್ನು ರೂಪಿಸುವತ್ತ ಹೊಸ ಹೋರಾಟ ರೂಪುಗೊಳ್ಳಬೇಕಿದೆ. ಇದಕ್ಕಾಗಿ ನಾವೆಲ್ಲ ಒಗ್ಗೂಡಬೇಕಿದೆ. ಸ್ವಾಮೀಜಿ ಹಾಗೂ ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ಇದಕ್ಕೆ ಶೀಘ್ರವೇ ಸಂಕಲ್ಪ ಸಿದ್ಧಿಸಬೇಕು.

ಎರಡು ಪ್ರತ್ಯೇಕ ಪ್ರಕರಣಗಳ ಆಧಾರದಲ್ಲಿ ಸಿಕ್ಕ ಅವಕಾಶದಿಂದ ಶಬರಿಮಲೆ ಹಾಗೂ ತಿರುಪತಿ ಎರಡೂ ದೇವಾಲಯಗಳನ್ನು ಸರಕಾರಿ ಸ್ವಾಮ್ಯದಿಂದ ದೂರವಿಡಲು ಸರ್ವೋಚ್ಛ ನ್ಯಾಯಾಲಯದ ಮೊರೆ ಹೋಗಲಾಗಿದೆ. ಇನ್ನು ಕೆಲವೇ ಸಮಯದಲ್ಲಿ ಬರಬಹುದಾದ ತೀರ್ಪಿನ ಆಧಾರದಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ದೇಗುಲವನ್ನೂ ಸರಕಾರದ ಸುಪರ್ದಿಯಿಂದ ಮೂಲ ಮಠಕ್ಕೆ ಹಸ್ತಾಂತರಿಸುವ ಯೋಚನೆ, ಯೋಜನೆ, ಕಾನೂನಾತ್ಮಕ ಪ್ರಕ್ರಿಯೆ ಮತ್ತು ಸಾಮೂಹಿಕ ಹೋರಾಟಕ್ಕೆ ಅಣಿಯಾಗಬೇಕಾದ ಅನಿವಾರ್ಯತೆಯಿದೆ. ಯೋಚಿಸಿ..

Wake up call: ಚರೈವತಿ ಚರೈವತಿ..
“Means “Keep Moving Keep Moving..”“Being a part of the universe our true nature is to Keep Moving to serve the universe. If we cannot do much, we can at least follow those who are moving selflessly to serve the universe. Our universe could be the planet earth, our country or our neighbourhood or our seers, Mutts, temples, religious sanctums.

ಜೈ ಹಿಂದ್

ಲೇಖನ: ಶ್ರೇಯಾಂಕ ಎಸ್ ರಾನಡೆ

Tags: Kukke Shri Subrahmanya templeShreyanka S Ranadeಪೇಜಾವರ ಶ್ರೀಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಶ್ರೇಯಾಂಕ ಎಸ್ ರಾನಡೆಸಂಪುಟ ಶ್ರೀ ನರಸಿಂಹ ಸ್ವಾಮಿ ಮಠ
Share197Tweet123Send
Previous Post

ಟಿಪ್ಪು ಜಯಂತಿ ಆಚರಿಸಿದರೆ ಸಮ್ಮಿಶ್ರ ಸರ್ಕಾರ ಪತನ: ಈಶ್ವರಪ್ಪ ಭವಿಷ್ಯ

Next Post

ತೆರೆಯಿತು ಶಬರಿಮಲೆ ಬಾಗಿಲು, ಮಹಿಳೆಯರಿಗೆ ದೊರೆಯದ ಪ್ರವೇಶ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ತೆರೆಯಿತು ಶಬರಿಮಲೆ ಬಾಗಿಲು, ಮಹಿಳೆಯರಿಗೆ ದೊರೆಯದ ಪ್ರವೇಶ

ತೆರೆಯಿತು ಶಬರಿಮಲೆ ಬಾಗಿಲು, ಮಹಿಳೆಯರಿಗೆ ದೊರೆಯದ ಪ್ರವೇಶ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

ಶಿವಮೊಗ್ಗ | ಮೈಮೇಲೆ ಹರಿದ ಲಾರಿ | ಯುವಕ ಸ್ಥಳದಲ್ಲೇ ಸಾವು

January 12, 2026
20,000+ runners participated in the 8th Edition of Manipal Marathon

20,000+ runners participated in the 8th Edition of Manipal Marathon

February 12, 2026
ಶಾಸಕ ಬೈರತಿ ಬಸವರಾಜ್’ಗೆ ಅರೆಸ್ಟ್ ಭೀತಿ | ಫೋನ್ ಕಾಲ್’ಗೂ ಸಿಗದೇ ಎಸ್ಕೇಪ್

ಶಾಸಕ ಭೈರತಿ ಬಸವರಾಜ್ ಜಾಮೀನು ಅರ್ಜಿ ಸುಪ್ರೀಂ ಕೋರ್ಟ್’ನಲ್ಲೂ ವಜಾ

February 12, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಅಂತರಾಷ್ಟ್ರೀಯ ರೇಸಿಂಗ್ ಫೆಸ್ಟಿವಲ್‌ಗೆ ಸಜ್ಜಾದ ಗೋವಾ | ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡ ಸ್ಪರ್ಧೆ!

ಅಂತರಾಷ್ಟ್ರೀಯ ರೇಸಿಂಗ್ ಫೆಸ್ಟಿವಲ್‌ಗೆ ಸಜ್ಜಾದ ಗೋವಾ | ಕಿಚ್ಚಾಸ್ ಕಿಂಗ್ಸ್ ಬೆಂಗಳೂರು ತಂಡ ಸ್ಪರ್ಧೆ!

February 12, 2026
Mysore – Shivamogga Express Big Update on this Date | Must Read

ಹಾಸನ-ಸೋಲಾಪುರ ಎಕ್ಸ್’ಪ್ರೆಸ್ ರೈಲಿನ ಟೈಮಿಂಗ್ ಬದಲು | ಇಲ್ಲಿದೆ ಡೀಟೇಲ್ಸ್

February 12, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL